ವಿಶ್ವದ ಮೊದಲ ಹಾರುವ ಹಾರುವ ಕಾರಯ ಮುಂದಿನ ತಿಂಗಳು ಬಿಡುಗಡೆ ಆಗಲಿದೆ.
2006ರಲ್ಲಿ ಆರಂಭವಾದ ಟೆರಾಫುಗಿಯೋ ಟ್ರಾನ್ಸಿಶನ್ ಸಂಸ್ಥೆ ಹಾರುವ ಕಾರು ತಯಾರಿಕೆಗೆ ಮುಂದಾಗಿತ್ತು. ಸತತ ಪ್ರಯತ್ನ ಮತ್ತು ಪರೀಕ್ಷೆಗಳ ಬಳಿಕ ಇದೀಗ ಟೆರಾಫುಗಿಯೋ ಕಂಪನಿ ಹಾರುವ ಕಾರನ್ನ ತಯಾರಿಸಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.
ಮುಂದಿನ ತಿಂಗಳು ಹಾರುವ ಕಾರು ಮಾರುಕಟ್ಟೆ ಪ್ರವೇಶಿಲಿದೆ. ಈ ಕಾರು ರಸ್ತೆಯಲ್ಲೂ ಪ್ರಯಾಣಿಸುತ್ತೆ, ಆಕಾಶದಲ್ಲೂ ಹಾರಾಟ ನಡೆಸುತ್ತೆ. ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ಪಡೆಯಲು ಇದೀಗ ಹಾರುವ ಕಾರು ಮಾರುಕಟ್ಟೆ ಬಂದಿದೆ.
ಆರಂಭದಲ್ಲಿ ಕಂಪೆನಿ ಹಾರುವ ಕಾರಿಗೆ 2.02 ಕೋಟಿ ರೂಪಾಯಿ ಅಂದಾಜಿಸಲಾಗಿತ್ತು. ಆದರೆ ಇದೀಗ ಇದರ ಬೆಲೆ ಯು.ಕೆ ಮಾರುಕಟ್ಟೆಯಲ್ಲಿ 2.18 ಕೋಟಿ ರೂಪಾಯಿ.