ಏನಿದು ರಾಜ್ಯದ ಪರೋಪಕಾರಿ ರಕ್ಷಣೆ ಮಸೂದೆ?

1
133

ಅಪಘಾತದ ವೇಳೆ ಗಾಯಾಳುಗಳಿಗೆ ನೆರವಾಗುವ ವ್ಯಕ್ತಿಗಳಿಗೆ ಕಾನೂನು ರಕ್ಷಣೆ ಮತ್ತು ಬಹುಮಾನ ನೀಡಲು ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ರೂಪಿಸಿರುವ ‘ಪರೋಪಕಾ ರಿಗಳ ರಕ್ಷಣೆ ಮಸೂದೆ’ಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸಹಿ ಹಾಕಿದ್ದಾರೆ.

ಅಪಘಾತದಲ್ಲಿ ಗಾಯಾಳು ರಸ್ತೆಯಲ್ಲಿ ನರಳಾಡುತ್ತಾ ಬಿದ್ದಿದ್ದರೂ, ಅವರನ್ನು ಆಸ್ಪತ್ರೆಗೆ ಸೇರಿಸಲು ಜನರು ಹಿಂಜರಿಯುತ್ತಿದ್ದಾರೆ.
ಅವರ ನೆರವಿಗೆ ಹೋದರೆ ಎಲ್ಲಿ ಪೊಲೀಸು, ಕೋರ್ಟು ಎಂದು ಅಲೆಯಬೇಕಾಗುತ್ತದೋ ಅಂತ ಭಯ ಪಟ್ಟು ಗಾಯಾಳುಗಳ ಸುದ್ದಿಗೆ ಯಾರೂ ಹೋಗಲ್ಲ. ತಮ್ಮ ಪಾಡಿಗೆ ತಾವು ಆ ಮನಕಲಕುವ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಾ ಕಾಲ ಕಳೆಯುತ್ತಾರೆ.


ಈ ಹಿನ್ನೆಲೆಯಲ್ಲಿ ಅಪಘಾತ ಗಾಯಾಳು ಗಳಿಗೆ ನೆರವಾಗುವವರಿಗೆ ಕಾನೂನಿನ ರಕ್ಷಣೆ ಒದಗಿಸುವ ಸಲುವಾಗಿ ಈ ಹಿಂದಿದ್ದ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಮಸೂದೆ ರೂಪಿಸಿತ್ತು. ಅದು ರಾಷ್ಟ್ರಪತಿಗಳ ಅವಗಾಹನೆಗೆ ರವಾನೆಯಾಗಿತ್ತು. ಇದೀಗ ಇದಕ್ಕೆ ಅಂಕಿತ ಸಿಕ್ಕಿದೆ.

ಅಪಘಾತ ನಡೆದ ಕ್ಷಣದಿಂದ ಒಂದು ತಾಸು ಅವಧಿಯನ್ನು
ಸುವರ್ಣ ಗಳಿಗೆ ಎಂದು ಕರೆಯಲಾಗುತ್ತದೆ.

ಅಷ್ಟರೊಳಗೆ ಚಿಕಿತ್ಸೆ ನೀಡುವುದು ಅತ್ಯಂತ ಮಹತ್ವವಾದುದು. ಆದರೆ, ಗಾಯಾಳುಗಳಿಗೆ ನೆರವಾದರೆ ಪೊಲೀ ಸರು ಸಾಕ್ಷಿಯಾಗಿ ಪರಿಗಣಿಸುತ್ತಾರೆ, ಎಲ್ಲ ಕೆಲಸ ಬಿಟ್ಟು ನ್ಯಾಯಾಲಯಗಳಿಗೆ ಅಲೆಯಬೇಕಾಗು ತ್ತದೆ ಎಂಬ ಭಾವನೆ ಜನರಲ್ಲಿದೆ. ಇದನ್ನು ಹೋಗಲಾಡಿಸುವ ಸಲುವಾಗಿ ಕರ್ನಾಟಕ ಮಸೂದೆ ರೂಪಿಸಿತ್ತು. ಇದರಂತೆ ಸಕಾಲದಲ್ಲಿ ಅಪಘಾತ ಗಾಯಾಳುಗಳಿಗೆ ನೆರವು ನೀಡುವ ವರಿಗೆ ಆರ್ಥಿಕ ನೆರವನ್ನು ಸರ್ಕಾರ ಒದಗಿಸಲಿದೆ. ನ್ಯಾಯಾಲಯಗಳು ಹಾಗೂ ಪೊಲೀಸ್ ಠಾಣೆ ಗಳಿಗೆ ಪದೇ ಪದೇ ಹಾಜರಾಗುವುದರಿಂದ ವಿನಾಯಿತಿ ನೀಡಲಾಗುತ್ತದೆ. ಕಡ್ಡಾಯವಾಗಿ
ಹಾಜರಾಗಲೇಬೇಕೆಂಬ ಸಂದರ್ಭ ಸೃಷ್ಟಿಯಾ ದರೆ, ಅದರ ವೆಚ್ಚವನ್ನು ಉತ್ತಮ ಪರೋಪಕಾರಿ ನಿಧಿಯಿಂದ ಭರಿಸಲಾಗುತ್ತದೆ.
ಅಪಘಾತ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಪರೋಪಕಾರಿಗಳು ತಕ್ಷಣವೇ ಹೊರಡಬಹುದು.

1 COMMENT

LEAVE A REPLY

Please enter your comment!
Please enter your name here