ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವಂತೆ ಸುಪ್ರಿಂ ಕೋರ್ಟ್ ಆದೇಶ ನೀಡಿರುವ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್‍ನ ಆದೇಶವನ್ನು ವಿರೋಧಿಸಿ ಹಲವಾರು ಕನ್ನಡ ಪರ ಸಂಘಟನೆಗಳು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದವು
ವಿವಿಧ ಕನ್ನಡ ಪರ ಸಂಘಟನೆಗಳು ರಸ್ತೆಯ ಮೇಲೆ ಉರುಳು ಸೇವೆ ಮಾಡುವ ಮೂಲಕ ವಿಭಿನ್ನ ರೀತಿಯಲ್ಲಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇನ್ನು ಪ್ರತಿಭನಾಕಾರರು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿದ್ದರಿಂದ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಇದರಿಂದ ಬೆಂಗಳೂರು –ಮೈಸೂರು ನಡುವೆ ಸಂಚರಿಸುತ್ತಿದ್ದ ಸಾರಿಗೆ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.
ಇನ್ನು ಕಾವೇರಿ ನದಿ ನೀರಿನ ವಿಷಯವಾಗಿ ರಾಜ್ಯದ ಜನರಿಗೆ ಪದೇ ಪದೇ ಅನ್ಯಾಯವಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಕಾವೇರಿ ನದಿ ನೀರಿನ ಇಂದಿನ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗಿರುವ ರಾಜ್ಯ ಪರ ವಕೀಲರಾದ ಪಾಲೀ ನಾರಿಮನ್ ಅವರನ್ನು ಕೈ ಬಿಡುವಂತೆ ಕಾವೇರಿ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಮಾದೇಗೌಡ ಅವರು ಹೇಳಿದ್ದಾರೆ. ಮಂಡ್ಯ ಜಿಲ್ಲೆಯಾದ್ಯಂತ ಕಾವೇರಿ ಕಾವು ಭುಗಿಲೆದ್ದ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲೆಯಾದ್ಯಂತ ಇಂದು ಶಾಲಾ-ಕಾಲೇಜುಗಳಿಗೆ ಜಿಲ್ಲಾಧಿಕಾರಿ ಎಸ್ ಜಿಯಾವುಲ್ಲ ರಜೆ ಘೋಷಿಸಿದ್ದಾರೆ. ಸೋಮವಾರ ನಡೆದ ಕಾವೇರಿ ಅರ್ಜಿ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್ ತಮಿಳುನಾಡಿಗೆ 15 ಸಾವಿರ ಕ್ಯೂಸೆಟ್ ನೀರನ್ನು 10 ದಿನಗಳ ಕಾಲ ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿದೆ.
POPULAR STORIES :
ದೇಹದಲ್ಲಿರೋ ವಿಟಮಿನ್ ಕೊರತೆಯನ್ನು ಪತ್ತೆ ಹಚ್ಚುವುದು ಹೇಗೆ..??
ಬಂಪರ್ ಆಫರ್…! 500ರೂ. ಕೊಟ್ಟು ಒಂದು ದಿನ ಜೈಲುವಾಸ ಅನುಭವಿಸಿ..!
ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಆಕೆಗೆ ಅಲ್ಲಿನ ಸರ್ಕಾರ ಕೊಟ್ಟ ಉಡುಗೊರೆ ಏನು ಗೊತ್ತಾ…?
ಶುಕ್ರವಾರ ತೆರೆ ಕಾಣಲಿವೆ ಎಂಟು ಸಿನಿಮಾ..! ದಾಖಲೆಯ ಸಿನಿಮಾ ರಿಲೀಸ್‍ಗೆ ಇನ್ನೊಂದೇ ದಿನ ಬಾಕಿ..!
ಶತಾಯುಷಿ ಅಜ್ಜಿ ಓಟದಲ್ಲಿ ಗೆದ್ದಿತು ಮೂರು ಚಿನ್ನದ ಪದಕ..!
ಕಾರ್ಮಿಕರ ಬೇಡಿಕೆ ಈಡೆರಿಸುವಲ್ಲಿ ಕೇಂದ್ರ ವಿಫಲ: ಶುಕ್ರವಾರ ಭಾರತ್ ಬಂದ್ ಖಚಿತ..!