ಜಲಾಶಯಗಳಲ್ಲಿ ನೀರಿಲ್ಲ, ಯಾವುದೇ ಕಾರಣಕ್ಕೂ ನೀರು ಬಿಡಲು ಸಾಧ್ಯವಿಲ್ಲ: ಶಾಸಕಾಂಗ.

Date:

ಕಾವೇರಿ ನೀರು ತಮಿಳುನಾಡಿಗೆ ಹರಿಸಬೇಕು ಎಂದು ಸುಪ್ರೀಂಕೋರ್ಟ್ ಮತ್ತೆ ತಮಿಳುನಾಡು ರಾಜ್ಯದ ಪರ ಬ್ಯಾಟಿಂಗ್ ಮಾಡಿದ ಹಿನ್ನಲೆಯಲ್ಲಿ ಅಣೆಕಟ್ಟುಗಳಿಂದ ಕುಡಿಯುವುದಕ್ಕೆ ಬಿಟ್ಟು ಬೇರಿನ್ಯಾವುದೇ ಕಾರಣಕ್ಕೂ ನೀರು ಹರಿಸಲು ಸಾದ್ಯವಿಲ್ಲ ಎಂದು ರಾಜ್ಯ ಶಾಸಕಾಂಗವು ಸುಪ್ರೀಂಕೋಟ್ ಆದೇಶಕ್ಕೆ ಸೆಡ್ಡು ಹೊಡೆದು ನಿಂತಿದೆ. ಕಾವೇರಿ ನದಿಯಲ್ಲಿ ಈಗಿರುವ ನೀರಿನ ಪ್ರಮಾಣ ಹಾಗೂ ಮುಂದಿನ ದಿನಗಳಲ್ಲಿ ಮೈಸೂರು, ಮಂಡ್ಯ ಹಾಗೂ ಬೆಂಗಳೂರಿನ ಜನರು ನೀರಿಗಾಗಿ ಭಾರೀ ಸಮಸ್ಯೆಯನ್ನು ಅನುಭವಿಸುವ ಹಿನ್ನಲೆಯಲ್ಲಿ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ರವಿ ಅವರು ವಿಧಾನ ಪರಿಷತ್‍ನಲ್ಲಿ ಮಂಡಿಸಿದ ವಾದವನ್ನು ಪ್ರತಿ ಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಅನುಮೋದಿಸಿದರು. ಇನ್ನು ಈ ನಿರ್ಣಯವನ್ನು ಅಂಗೀಕರಿಸಿದ ಸ್ಪೀಕರ್ ಶಂಕರ ಮೂರ್ತಿ ಅವರು ಸದನವನ್ನು ಅನಿರ್ದಿಷ್ಟಾವಧಿಯಾಗಿ ಮುಂದೂಡಿದ್ದಾರೆ.
ಇನ್ನು ಮೊದಲೇ ನಿರ್ಧರಿಸಲಾದಂತೆ ವಿಧಾನ ಸಭೆ ಕಾರ್ಯ ಕಲಾಪವನ್ನು 159ರ ಅನ್ವಯ ಇಂಗ್ಲೀಷ್ ಭಾಷೆಯಲ್ಲಿ ಮಂಡಿಸಿದ ಪ್ರತಿ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ದೇಶದಾದ್ಯಂತ ಈ ಸದನವನ್ನು ನೋಡುತ್ತಿರುವುದರಿಂದ ತಾನು ಇಂಗ್ಲೀಷ್‍ನಲ್ಲಿ ವಾದ ಮಂಡಿಸುವುದಾಗಿ ಹೇಳಿಕೊಂಡಿದ್ದರು. ನೆಲ ಜಲದ ಹಿತ ದೃಷ್ಠಿಯಿಂದ ಈ ವಾದ ಮಂಡಿಸುತ್ತಿದ್ದೇನೆ ಎಂದು ಶೇಟ್ಟರ್ ಹೇಳಿದ್ದಾರೆ ಇವರ ವಾದವನ್ನು ಜೆಡಿಎಸ್ ನಾಯಕ ವೈಎಸ್‍ವಿ ದತ್ತಾ ಅವರು ಅನುಮಾದಿಸಿದ್ದಾರೆ.
ಈ ಮೂಲಕ ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕೆಂಬ ಸುಪ್ರೀಂಕೋರ್ಟ್ ಆದೇಶಕ್ಕೆ ವ್ಯತಿರಿಕ್ತ ನಿಲುವನ್ನು ಕರ್ನಾಟಕ ಶಾಸಕಾಂಗ ಪ್ರಕಟಿಸಿದ್ದು, ಈ ನಿರ್ಣಯ ಮುಂದಿನ ದಿನಗಳಲ್ಲಿ ಯಾವ ರೀತಿಯ ಸಾಂವಿಧಾನಿಕ ಬಿಕ್ಕಟ್ಟನ್ನು ತರಬಹುದು ಎಂಬುದನ್ನು ನೋಡಬೇಕಿದೆ.

ಅಧಿವೇಶನದ ಇತಿಹಾಸ:
ಇನ್ನು 1991 ರಿಂದ ಇಲ್ಲಿಯವರೆಗೆ ಒಟ್ಟು ಏಳು ಬಾರಿ ಸದನದ ಅಧಿವೇಶನಗಳು ನಡೆದಿದ್ದು, ಅದರಲ್ಲಿ ಮೂರು ಬಾರಿ ಕಾವೇರಿ ನದಿ ವಿಚಾರವಾಗಿಯೇ ಅಧಿವೇಶನ ನಡೆದಿದೆ.
1998 ಜನವರಿ 27 ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಜೆ.ಹೆಚ್ ಪಟೇಲ್ ವಿರುದ್ದ ಅವಿಶ್ವಾಸ ನಿರ್ಣಯ ಚರ್ಚೆ ಮಾಡಿ ಮತ ಹಾಕಲಾಗಿತ್ತು
2005 ಸೆ.20 ರಂದು ಸುವರ್ಣ ಕರ್ನಾಟಕ ವಿಶೇಷ ಅಧಿವೇಶನದಲ್ಲಿ ಅಂದಿನ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಅವರಿಂದ ಸದನದ ಕುರಿತು ಭಾಷಣ ಮಾಡಿದ್ದರು.
2009ಸೆ. 9, 10, 11, 14, 15, 16 ರಂದು ಕೃಷಿ ಗ್ರಾಮೀಣಾಭಿವೃದ್ದಿಯ ಕುರಿತಾಗಿ ಸದನ ನಡೆಸಲಾಗಿತ್ತು.
2015 ಏ.20, 23, 27, ರಂದು ಕರ್ನಾಟಕ ನಗರ ಮತ್ತು ಸ್ಥಳೀಯ ಸಂಸ್ಥೆಗಳ ವಿಧೇಯಕ ಕುರಿತು ಚರ್ಚೆ.

Like us on Facebook  The New India Times

POPULAR  STORIES :

ಪೆಪ್ಸಿ ಆ್ಯಡ್‍ನಲ್ಲಿ ವಿರಾಟ್‍ನ ದ್ವಂದ್ವ ನಿಲುವು..!

ಜಿಯೋ ಎಫೆಕ್ಟ್: ಬಿಎಸ್‍ಎನ್‍ಎಲ್ ಗ್ರಾಹಕರಿಗೆ ಉಚಿತ ಅನ್‍ಲಿಮಿಟೆಡ್ ವಾಯ್ಸ್ ಕಾಲ್..!

ಆನ್‍ಲೈನ್ ಶಾಪಿಂಗ್ ಮಾಡೋಕು ಮುನ್ನ ಈ ಸ್ಟೋರಿ ಓದಿ..!

ನಿಮಗೆ ಗೊತ್ತಾ ವಾಟ್ಸಾಪ್‍ಗಿಂತ ‘ಅಲ್ಲೋ ಆಪ್’ ಸಖತ್ ಡಿಫರೆಂಟ್ ಆಗಿದೆ..!

ಐಫೋನ್-7 ಮೋಬೈಲ್‍ನ ಕೋಕ ಕೋಲದಲ್ಲಿ ಹಾಕಿ ಫ್ರೀಜರ್‍ನಲ್ಲಿ ಇಟ್ಟ ಮುಂದೇನಾಯ್ತು ಗೊತ್ತಾ.?

ಕಾವೇರಿಗಾಗಿ ಮಣ್ಣು ತಿಂದು ವಿನೂತನ ಪ್ರತಿಭಟನೆ..!

ಬೈಕ್‍ನಲ್ಲಿ ಸ್ಟಂಟ್ ಪ್ರದರ್ಶನ ಮಾಡುವ ಯುವಕರೇ ಎಚ್ಚರಾ… ಎಚ್ಚರ…!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...