ನಿಮ್ಮ ಬಾಲ್ಯದ ನೆನಪುಗಳು ನಿಮಗೆ ಇದೆಯೇ? ನಿಮ್ಮ ಎಳೆಯ 14 ವರ್ಷದಲ್ಲಿ ನೀವೇನು ಮಾಡುತ್ತಿದ್ದಿರಿ ಸೈಕಲ್ ಸವಾರಿಯೋ ಅಥವಾ ವಿಡಿಯೋ ಗೇಮ್ ಆಡ್ತಾ ಇದ್ರೋ? ಇಲ್ಲೊಬ್ಬ ಬಾಲಕ ತನ್ನ ಎಳೆಯ ವಯಸ್ಸಿಗೆ ಫ್ಯಾಷನ್ ಬ್ಯುಸಿನೆಸ್ ನಲ್ಲಿ ಸಖತ್ ಹೆಸರು ಮಾಡಿದ್ದಾನೆ.
ವಿಶೇಷ ಶೂ ಹಾಗೂ ಮುದ್ದಾದ ಬಿಳಿ ಹುಲಿಗಳನ್ನು ಸಂಗ್ರಹಿಸುವ ಬಹು ದೊಡ್ಡ ಹವ್ಯಾಸ ಕೂಡ ಇದೆ. ಆತನ ಹೆಸರು ರಾಷಿದ್ ಸೈಫ್ ಬೆಲ್ಹಾಸಾ.
ದುಬೈ ಮೂಲದ ಗುತ್ತಿಗೆದಾರ ತೈಕೂನ್ ಸೈಫ್ ಅಹಮ್ಮದ್ ಬೆಲ್ಹಾಸಾರ ಮಗನಾದ ರಷೀದ್ ಎಂಬ ಯುವಕನಿಗೆ ಈ ಹವ್ಯಾಸದಿಂದ ದೇಶ ವಿದೇಶದಿಂದ ದುಬೈಗೆ ಭೇಟಿ ನೀಡುವ ಪ್ರತಿಯೊಬ್ಬ ಸೆಲೆಬ್ರೆಟಿಗಳು ಈತನನ್ನು ಭೇಟಿ ಮಾಡದೆ ಇರಲಾರರು. ಈ ಪುಟ್ಟ ಬಾಲಕನ ಸಾಧನೆಯು ಹಲವಾರು ಜನರ ಕಣ್ಣುಬ್ಬೇರಿಸುವಮತೆ ಮಾಡಿದೆ. ಈಗಾಗಲೇ ರಷೀದ್‍ಗೆ ಹಲವಾರು ಖ್ಯಾತ ನಟರು ಅಥ್ಲೀಟ್‍ಗಳಾದ ರೋನಿ, ಪೌಲ್ ಪೋಗ್ಬಾ, ಮೆಸ್ಸಿ, ಕ್ರಿಸ್ಟಿಯಾನೊ ರೊನಾಲ್ಡೋ, ಸಲ್ಮಾನ್‍ಖಾನ್ ಶಾರೂಖ್‍ಖಾನ್ ಮುಂತಾದ ಗಣ್ಯರು ಭೇಟಿ ಮಾಡಿದ್ದಾರೆ. ಇಂತಹ ದೊಡ್ಡ ಹೆಸರು ಗಳಿಸಿರುವ ಈ ಪುಟ್ಟ ಬಾಲಕನಿಗೆ ಭೇಟಿ ನೀಡುವುದು ಅಷ್ಟೇನು ಸುಲಭವಲ್ಲ. ಆತನನ್ನು ನೋಡಲು ಮೊದಲು ಅಪಾಯಂಟ್‍ಮೆಂಟ್ ಪಡೆಯಬೇಕು ನೆನಪಿರಲಿ….
POPULAR STORIES :
ಸಿಲಿಕಾನ್ ಸಿಟಿ ಯಲ್ಲಿದೆ ಬಾಲ್ಯವಿವಾಹ ಪದ್ದತಿ… ಅಚ್ಚರಿಯಾದ್ರೂ ಇದೇ ಸತ್ಯ…
ಸಾಹಸ ಸಿಂಹನ 201 ನೇ ಚಿತ್ರ- ಆಗಸ್ಟ್ 15 ಕ್ಕೆ ಆಡಿಯೋ ರಿಲೀಸ್
ಷೇರು ಮಾರುಕಟ್ಟೆಯಲ್ಲಿನ ಸ್ವಾರಸ್ಯಕರ ಸುದ್ದಿಗಳು.!
ಚಿತೆಯಲ್ಲಿ ಮಲಗಿದ್ದ ವ್ಯಕ್ತಿ ಮತ್ತೆ ಜೀವಂತವಾದ..??
ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!