ಸ್ಯಾಂಡಲ್ ವುಡ್ ನಲ್ಲಿ ಅಪ್ಪ ಮಗನ ನಡುವೆ ಪೈಪೋಟಿ ಶುರುವಾಗಲಿದೆ..!

Date:

ಸ್ಯಾಂಡಲ್ ವುಡ್ ನಲ್ಲಿ  ಅಪ್ಪ ಮಗನ ನಡುವೆ ಪೈಪೋಟಿ ಶುರುವಾಗಲಿದೆ…. ಹೌದು ಡಾ. ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ನಡುವೆ ಈ ಜುಗಲ್ ಬಂದಿ ಏರ್ಪಟ್ಟಿದೆ. ಬಬ್ರುವಾಹನ ನ ಜೊತೆಯೇ  ಅಪ್ಪು  ಚಕ್ರವ್ಯೂಹ  ತೆರೆಗಪ್ಪಳಿಸಲಿದೆ.

ಏಪ್ರಿಲ್‌ 22 ಕನ್ನಡ ಚಿತ್ರ ರಸಿಕರಿಗೆ ಹಬ್ಬವೇ ಸರಿ. ಹಾಗೇ ಸ್ಯಾಂಡಲ್ ವುಡ್ ಮಟ್ಟಿಗೆ ವಿಶೇಷವಾದ ದಿನ ಅಂದ್ರೂ ತಪ್ಪಾಗಲ್ಲ.  ಹಾಗೆ ಅಭಿಮಾನಿಗಳು ಯಾವ ಚಿತ್ರ ನೋಡ್ಲಿ, ಯಾವ್ದು ಬಿಡ್ಲಿ ಎನ್ನುವ ಕನ್‌ಫ್ಯೂಶನ್‌ಗೆ ಒಳಪಡ್ತಾರೆ. ಇದೊಂಥರಾ ಅಪ್ಪ-ಮಗನ ಜುಗಲ್ ಬಂದಿ ಅಂದ್ರೂ ತಪ್ಪಾಗಲ್ಲ.
ಅಂದ್ಹಾಗೆ ಏಪ್ರಿಲ್ 22ಕ್ಕೆ ಡಾ ರಾಜಕುಮಾರ್ ಅಭಿನಯದ ‘ಬಬ್ರುವಾಹನ’ ರಿ ರಿಲೀಸ್ ಆಗ್ತಿರೋದು ಗೊತ್ತಿರೋ ವಿಚಾರ. ಅದರ ಜೊತೆಗೆ ಪುನೀತ್ ರಾಜಕುಮಾರ್ ಅಭಿನಯದ  ಬಹು ನಿರೀಕ್ಷಿತ ‘ಚಕ್ರವ್ಯೂಹ’ ಕೂಡ ಅದೇ ದಿನ ತೆರೆಗೆ ಬರುತ್ತಿದೆ. ಹಾಗಾಗಿ ಕನ್ನಡದ ಮಟ್ಟಿಗೆ ಬಹಳ ಅಪರೂಪದ ಸನ್ನಿವೇಶ ಇದು.
ತಂದೆ-ಮಗ ಇಬ್ಬರ ಸಿನಿಮಾಗಳೂ ಥಿಯೇಟರ್‌ನಲ್ಲಿ ಮುಖಾಮುಖಿಯಾಗಲಿವೆ. ಒಂದೆಡೆ ಅಣ್ಣಾವ್ರನ್ನ ಮತ್ತೆ ಹಿರಿತೆರೆ ಯಲ್ಲಿ ನೋಡುವುದಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ರೆ,  ಮತ್ತೊಂದೆಡೆ ಪುನೀತ್ ಚಕ್ರವ್ಯೂಹದಲ್ಲಿ ಏನೆಲ್ಲಾ ಇರಲಿದೆ ಅನ್ನೋ ಕುತೂಹಲವೂ ಅಭಿಮಾನಿಗಳಲ್ಲಿದೆ ಹಾಗಾದ್ರೆ ಈ ಎರಡೂ ಬಿಗ್ ಸಿನಿಮಾಗಳ ನಡುವೆ ಫೈಟ್ ಆಗುತ್ತಾ? ಅಪ್ಪ ಮಗನ ಚಿತ್ರದ ನಡುವೆಯೇ ಕಾಂಪಿಟೇಷನ್ ಶುರುವಾಗುತ್ತಾ. ಖಂಡಿತಾ ಇಲ್ಲ.  ಜನ ಎರಡೂ ಚಿತ್ರಗಳನ್ನ ನೋಡೋಕೆ ರೆಡಿಯಾಗಿಬಿಟ್ಟಿದ್ದಾರೆ.

ಅಪ್ಪ, ಮಗ ಇಬ್ರೂ ಅದ್ಭುತ ಕಲಾವಿದರು. ಹಾಗಾಗಿ ಎರಡೂ ಚಿತ್ರಗಳ ನಡುವೆ ಪೈಪೋಟಿಯಲ್ಲ, ಬದಲಿಗೆ ಇದೊಂಥರಾ ಜುಗಲ್ ಬಂದಿ ಅಂತಿದ್ದಾರೆ ಅಭಿಮಾನಿಗಳು. ಅದೇನೆ ಇರಲಿ ಎರಡೆರಡು ಅದ್ಭುತ ಚಿತ್ರಗಳು ತೆರೆಕಾಣ್ತಿದ್ದು ಸಿನಿರಸಿಕರಲ್ಲಿ ಸಂತಸ ಮನೆ ಮಾಡುವಂತೆ ಮಾಡಿದೆ.

  • “ಶ್ರೀ”

 

POPULAR  STORIES :

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ಎಸ್.ಯಡಿಯೂರಪ್ಪ.! ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿಕೆ..!

100% ಕಾಮಿಡಿ, ಸಖತ್ ಮೂವಿ ಈಗಲೇ ನೋಡಿ ಸ್ವಾಮಿ..!

ಐಪಿಎಲ್ ಸೀಸನ್ 9ರಲ್ಲಿ ಪ್ರೇಕ್ಷಕನೇ 3ನೇ ಅಂಪೈರ್ ಅಂತೆ..!

ಟ್ಯಾಂಕರ್ ಮುಷ್ಕರದ ಎಫೆಕ್ಟ್..! ಪೆಟ್ರೋಲ್ ಸಿಗ್ದಿದ್ರೇ ಏನಾಗುತ್ತೆ ಗೊತ್ತಾ..?

ಆರು ಪ್ರಶ್ನೆ ಪತ್ರಿಕೆಗಳು `ಲೀಕ್’, ಬೆಚ್ಚಿಬೀಳಿಸಿದ ಸಿಐಡಿ ತನಿಖೆ..!?

ಭಾರತೀಯ ನಟಿ ಜೊತೆ ಒಬಾಮಾ ಡಿನ್ನರ್..!

ನಾನ್ “ವೆಜ್” ಅಂದ್ರೂ ಪ್ರಾಬ್ಲಂ…!

ಭಾರತದ ಮೇಲೆ ಗೂಬೆ ಕೂರಿಸಿದ ಪಾಕಿಸ್ತಾನ..!? ಈ ಜನ್ಮದಲ್ಲಿ ಇವ್ರಿಗೆ ಬುದ್ಧಿ ಬರಲ್ಲ ಬಿಡಿ..!!

ಅಶ್ಲೀಲ ಚಿತ್ರಗಳನ್ನು ನೋಡುವುದು ತಪ್ಪಲ್ಲ..!? ಲವ್ ಗೇಮ್ ಚಿತ್ರದಲ್ಲಿ ಅಂಥದ್ದೇನಿದೆ..?

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...