ಈ ಛಲಗಾತಿ ಸಾಧನೆ ಎಲ್ಲರಿಗೂ ಸ್ಫೂರ್ತಿ

Date:

ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಿದ ಛಲಗಾತಿ..! ಅಲ್ಟ್ರಾಮನ್ ಡಿಸ್ಟೆನ್ಸ್ ಸ್ಪರ್ಧೆ ಗೆದ್ದ ಏಷ್ಯಾದ ಏಕೈಕ ಆಟಗಾರ್ತಿ..! ಎಲ್ಲಾ ಕ್ಷೇತ್ರದಲ್ಲೂ ತನ್ನ ಛಾಪು ತೋರಿಸಿದ ಸಾಹಸಿ. ಜೀವನ ನಮಗೆ ಸವಾಲೊಡ್ಡದಿದ್ದರೆ ಅದು ಜೀವನವೇ ಅಲ್ಲ. ಕೆಲ ಸವಾಲುಗಳನ್ನು ಎದುರಿಸಿ ನಿಲ್ಲಲ್ಲು ಸಾಧ್ಯವಾಗೋದೆ ಇಲ್ಲ. ಆದರೆ, ಜೀವನದಲ್ಲಿ ಆಸಕ್ತಿ ಉಳಿಸಿಕೊಂಡು ಹೋಗಲು ಇಂತಹ ಸವಾಲುಗಳನ್ನು ಎದುರಿಸಲೇ ಬೇಕಾಗುತ್ತೆ. ಅಂತಹ ಸವಾಲುಗಳನ್ನು ಪ್ರತಿ ಹೆಜ್ಜೆಗೂ ಸಮರ್ಥವಾಗಿ ಎದುರಿಸಿ ಕ್ರೀಡೆಯಲ್ಲಿ ಅಧ್ಭುತ ಸಾಧನೆ ಮಾಡಿದ ಸಾಧಕಿ ಈಕೆ. ಐರನ್ ಮ್ಯಾನ್ ಟ್ರಯಾಥ್ಲಾನ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಏಷ್ಯಾದ ಮೊದಲ ಭಾರತೀಯ ಮಹಿಳೆ. ಹಾಗಾದ್ರೆ ಯಾರು ಈಕೆ..? ಇವರ ಸಾಧನೆ ಏನು ಅನ್ನೋದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.

ಅಥ್ಲೀಟ್, ಉದ್ಯಮಿ, ಡಾಕ್ಟರ್, ಪ್ರೊಫೆಸರ್ ಮಗಳು, ಸೋದರಿ ಹೀಗೆ ಇನ್ನಿತರ ಹೆಸರುಗಳಿಂದ ಕರೆದರೂ ಇವ್ರಿಗೆ ಎಲ್ಲವೂ ಹೊಂದುತ್ತೆ.  ಒಂದೇ ಕ್ಷೇತ್ರಕ್ಕೆ ಸೀಮಿತವಾಗದೇ ಎಲ್ಲಾ ಕ್ಷೇತ್ರಗಳಿಗೂ ಕಾಲಿಟ್ಟು ತಮ್ಮ ಸಾಮರ್ಥ್ಯ ತೋರಿಸಿದ ಧೀರೆ. ಐರನ್ ಮ್ಯಾನ್ ಟ್ರಯಾಥ್ಲಾನ್ನಲ್ಲಿ ಯಶಸ್ಸು ಸಾಧಿಸಿದ ಮೊದಲ ಭಾರತೀಯ ಮಹಿಳೆ. ಆಲ್ ರೌಂಡರ್ ಮಹಿಳಾ ಸಾಧಕಿಯಾದ ಈ ಸವ್ಯಸಾಚಿಯೇ ಅನು ವೈದ್ಯನಾಥನ್. ಆಡುಮುಟ್ಟದ ಸೊಪ್ಪಿಲ್ಲ, ಅನು ಕಾಲಿಡದ ಕ್ಷೇತ್ರವಿಲ್ಲ..!ಅನುವೈದ್ಯನಾಥನ್​ಗೆ ಅದ್ಭುತ ಕ್ರೀಡಾಸಕ್ತಿ ಇದೆ. ಕ್ರೀಡಾ ಬದ್ಧತೆಯಂತೂ ಅಮೋಘ. ಅದರಲ್ಲೂ ಅಥ್ಲೆಟಿಕ್ ನ ಒಂದು ಭಾಗವಾದ ಐರನ್ಮ್ಯಾನ್ ವಿಶ್ವ ಚಾಂಪಿಯನ್ಗೆ  ಅರ್ಹತೆ ಪಡೆದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆ ಇವರದ್ದು. ಅಲ್ಟ್ರಾಮನ್ ಡಿಸ್ಟೆನ್ಸ್ ಸ್ಪರ್ಧೆ ಪೂರೈಸಿದ ಏಷ್ಯಾದ ಏಕೈಕ ಸ್ಪರ್ಧಿ ಆಗಿದ್ದರು.ಅನುವೈದ್ಯನಾಥನ್ ಶಾಲೆಗೆ ಹೋಗುವಾಗಲೇ ಸೈಕಲ್ ಓಡಿಸುವುದರಲ್ಲಿ ಪರಿಣತಿ ಹೊಂದಿದ್ದರು. ಬೇಸಿಗೆ ರಜೆಯಲ್ಲಿ ಈಜು ತರಬೇತಿ ಪಡೆಯುತ್ತಿದ್ದರು. ತಮ್ಮ ಮೂಲ ಊರಾದ ತಮಿಳುನಾಡಿಗೆ ಹೋದಾಗ ಸೈಕ್ಲಿಂಗ್ ಮತ್ತು ಸ್ವಿಮ್ಮಿಂಗ್ನಲ್ಲಿ ಹೆಚ್ಚು ತರಬೇತಿ ಪಡೆಯುತ್ತಿದ್ರು. ಕಾಲೇಜಿನಲ್ಲಿ ಯಾವುದೇ ಸ್ಪರ್ಧೆಯಾದ್ರೂ ಅದರಲ್ಲಿ ವಿಜಯಶಾಲಿಯಾಗುತ್ತಿದ್ದದ್ದೇ ಅನು ವೈದ್ಯನಾಥನ್.ಅನು ಹೆಚ್ಚಾಗಿ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ರು. ಜಿಲ್ಲಾ ಮತ್ತು ರಾಷ್ಟ್ರೀಯ ಮಟ್ಟದ ಸ್ಪರ್ದೆಯಲ್ಲಿ ವಿಜಯಶಾಲಿಯಾಗುತ್ತಿದ್ದ ಅನು ಜೀವನದಲ್ಲಿ ಐರನ್ಮ್ಯಾನ್ ಮತ್ತು ಅಲ್ಟ್ರಾಮ್ಯಾನ್ ಸ್ಪರ್ದೆಯಲ್ಲಿ ಈ ಮಟ್ಟಕ್ಕೆ ಸಾಧನೆ ಮಾಡುತ್ತೇನೆಂದು ಎಂದಿಗೂ ಕನಸ್ಸು ಕಂಡಿರಲ್ಲಿಲ್ಲ. ಮೂರು ದಿನಗಳ ಟ್ರಯಾಥ್ಲಾನ್ 10 ಕಿಮೀ ಈಜುಗಾರಿಕೆ,  420 ಕಿಮೀ ಸೈಕ್ಲಿಂಗ್ ಹಾಗು 84.4 ಕಿಮೀ ಮ್ಯಾರಥಾನ್ ಸ್ಪರ್ಧೆಗಳನ್ನು ಒಳಗೊಂಡಿರುತ್ತೆ.

ಇದನ್ನು ಸಮರ್ಥವಾಗಿ ಸ್ವೀಕರಿಸಿದ ಅನು ವೈದ್ಯನಾಥನ್ 2009 ರಲ್ಲಿ ಕೆನಡದಲ್ಲಿ ನಡೆದ ಈ ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರೈಸಿ ವಿಜಯ ಪತಾಕೆ ಹಾರಿಸಿದ್ರು.ಹೌದು ಅನು ವೈದ್ಯನಾಥನ್ ಐರನ್ಮ್ಯಾನ್ ಟ್ರಯಾಥ್ಲಾನ್ ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ರು. ಈ ಯಶಸ್ಸು ಸಾಧಿಸಿದ ಮೊಟ್ಟ ಮೊದಲ ಭಾರತೀಯ ಮಹಿಳೆ ಎನ್ನುವ ಖ್ಯಾತಿ ಪಡೆದುಕೊಂಡ್ರು. ಅಂತರಾಷ್ಟ್ರೀಯ ಸ್ಪರ್ಧಿಗಳಿಗೆ ಸೆಡ್ಡು ಹೊಡೆದು ಐರನ್ಮ್ಯಾನ್ ಸ್ಪರ್ಧೆಯಲ್ಲಿ ವಿಜೇತರಾದ ಏಷ್ಯಾದ ಏಕೈಕ ಮಹಿಳೆಯಾದ್ರು.ಕೇವಲ ಕ್ರೀಡಾ ಪಟು ಮಾತ್ರವಲ್ಲ ಬೆಂಗಳೂರಿನಲ್ಲಿ ಪಾಟ್ಎನ್ಮಾಕ್ರ್ಸ್ ಎನ್ನುವ ಉದ್ಯಮವನ್ನು ಸಹ ಸ್ಥಾಪಿಸಿದ್ದಾರೆ. ಇದರಲ್ಲಿ ನೂರಾರು ಮಂದಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. 2001 ರಲ್ಲಿ ಆರಂಭವಾದ ಪಾಟ್ಎನ್ಮಾಕ್ರ್ಸ್ ಸಂಸ್ಥೆಯನ್ನು ಲಾಭದಾಯಕವಾಗಿಯೇ ನಡೆಸುತ್ತಿದ್ದಾರೆ. ಬೆಂಗಳೂರು, ಚೆನ್ನೈ ಮತ್ತು ಆಸ್ಟಿನ್ನಲ್ಲಿ ಉಪ ಕಚೇರಿಗಳನ್ನು ತೆರೆದಿದ್ದಾರೆ.ಈ ಕಂಪನಿಯಲ್ಲಿ ಬಹುತೇಕರು ಭಾರತೀಯರೇ ದುಡಿಯುತ್ತಿದ್ದಾರೆ. ಭಾರತೀರಿಗೆ ಮೊದಲ ಅವಕಾಶ ಕೊಟ್ಟು ತಮ್ಮ ದೇಶಪ್ರೇಮ ಮೆರೆಯುತ್ತಿದ್ದಾರೆ. ಅನು ಉದ್ಯಮಿಯಾಗಿ ತಾವು ಮಾಡುತ್ತಿರುವ ಕೆಲಸವನ್ನು ನಿರಂತರವಾಗಿ ಮತ್ತು ಪರಿಣಾಮಕಾರಿಯಾಗಿ ಮಾಡುತ್ತಾರೆ. ವ್ಯಕ್ತಿಯಾಗಿಯೂ  ಎಲ್ಲರಿಗೂ ಇಷ್ಟವಾಗುತ್ತಾರೆ. ಆದ್ರೆ ಅನುವೈದ್ಯನಾಥನ್ ಕಂಪನಿ ಅಥವಾ ತಮ್ಮ ವೈಯಕ್ತಿಕ ಯಶಸ್ಸಿನ ಪ್ರಚಾರದ ಹಿಂದೆ ಯಾವತ್ತಿಗೂ ಬೀಳಲಿಲ್ಲ. ಬದಲಾಗಿ ಬ್ಯುಸಿ ಕೆಲಸದ ಮಧ್ಯೆಯೂ ದಿನಕ್ಕೆ 25 ನಿಮಿಷಗಳ ಕಾಲ ವ್ಯಾಯಾಮ ಮಾಡುವ ಅನು ಎರಡು ಮಕ್ಕಳ ತಾಯಿ ಕೂಡ ಹೌದು.ಒಟ್ಟಾರೆಯಾಗಿ ಅಥ್ಲೀಟ್ ಆಗಿ, ಉದ್ಯಮಿಯಾಗಿ, ಕೆಲಸಗಾರಳಾಗಿ ಇನ್ನಿತರ ಕ್ಷೇತ್ರಗಳಲ್ಲೂ ಅನುವೈದ್ಯನಾಥನ್ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಅನುವೈದ್ಯನಾಥನ್ ಕರ್ನಾಟಕದ ಮಾದರಿ ಹೆಣ್ಣುಮಗಳು ಅನ್ನೋದೆ ನಮ್ಮ ಹೆಮ್ಮೆ.

Share post:

Subscribe

spot_imgspot_img

Popular

More like this
Related

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...