ಚಾಮರಾಜಪೇಟೆಯಲ್ಲಿ ಗೌಡರ ತಂತ್ರದ ಮುಂದೆ ಜಮೀರ್ ವರ್ಚಸ್ಸು ಗೆಲ್ಲುತ್ತಾ….?

Date:

ಬೆಂಗಳೂರಿನ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ಚಾಮರಾಜ ಪೇಟೆ ಸಹ ಒಂದು. ಅತ್ಯಂತ ಹಳೆಯ ಬಡಾವಣೆಗಳಲ್ಲಿ ಒಂದಾಗಿರುವ ಈ ಕ್ಷೇತ್ರದ ಅಭಿವೃದ್ಧಿ ಅಷ್ಟಕಷ್ಟೇ.
ಈ ಕ್ಷೇತ್ರದಲ್ಲಿ 2004ರ ಬಳಿಕ ಬಿಜೆಪಿ‌ ಮತ್ತು ಕಾಂಗ್ರೆಸ್ ಇಲ್ಲಿ ಗೆದ್ದಿಲ್ಲ. ಅದರೆ, ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಜಟಾಪಟಿಯ ಲಾಭವನ್ನು ಪಡೆಯಲು ಬಿಜೆಪಿ ಕಾದಿದೆ.


ಮುಸ್ಲಿಂ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಮೂರು ಬಾರಿ ಜೆಡಿಎಸ್ ನಿಂದ ಸ್ಪರ್ಧಿಸಿ ಗೆದ್ದಿದ್ದ ಜಮೀರ್ ಅಹಮ್ಮದ್ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ…! ಇದು ಸ್ವತಃ ಜಮೀರ್ ಅವರಿಗೂ ಹಾಗೂ ಜೆಡಿಎಸ್ ಗೂ ಪ್ರತಿಷ್ಠೆಯ ಚುನಾವಣೆಯಾಗಿದೆ.
ಜೆಡಿಎಸ್ ನಿಂದ ಬಂಡಾಯ ಎದ್ದಿರುವ ಜಮೀರ್ ಅಹಮ್ಮದ್ ಅವರನ್ನು ಸೋಲಿಸಲು ಎಚ್.ಡಿ ದೇವೇಗೌಡರು ರಣತಂತ್ರವನ್ನಂತೂ ರೂಪಿಸಿದ್ದಾರೆ.
2005ರಲ್ಲಿ ಎಸ್ ಎಂ ಕೃಷ್ಣ ರಾಜೀನಾಮೆ ನೀಡಿದ್ದರಿಂದ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಜಮೀರ್ 3678ಮತಗಳಿಂದ ಕಾಂಗ್ರೆಸ್ ನ ಆರ್ ವಿ ದೇವರಾಜ್ ವಿರುದ್ಧ ಗೆದ್ದಿದ್ದರು. ಬಳಿಕ 2008 ಹಾಗೂ 2013ರಲ್ಲಿಯೂ ಜಮೀರ್ ಗೆ ವಿಜಯಲಕ್ಷ್ಮಿ ಒಲಿದಿದ್ದಳು‌.‌
ಆದರೆ ಇವರ ಅವಧಿಯಲ್ಲಿ ಹೇಳಿಕೊಳ್ಳುವಂತಹ ಕೆಲಸಗಳಾಗಿಲ್ಲ. ಚುನಾವಣಾ ಸಂದರ್ಭದಲ್ಲಿ ಮಾತ್ರ ಜನಪ್ರನಿಧಿ ಕಾಣಿಸಿಕೊಳ್ತಾರೆ ಎಂಬ ಆರೋಪ ಸಹ ಇದೆ. ಮೂಲಸೌಕರ್ಯ ಕೊರತೆ ಇದೆ ಟ್ರಾಫಿಕ್ ಕಿರಿ ಕಿರಿ ಇನ್ನೂ ಬಗೆಹರಿದಿಲ್ಲ.


ಈ ಕ್ಷೇತ್ರದಲ್ಲಿ 2,16,896ಮತದಾರರಿದ್ದಾರೆ. 1,12,728 ಪುರುಷರು, 1,04,150ಮಹಿಳಾ ಮತದಾರರು ಇದ್ದಾರೆ.
ಮುಸ್ಲೀಂ, ಒಕ್ಕಲಿಗ,‌ಬ್ರಾಹ್ಮಣ ಸಮುದಾಯದ ಮತಗಳು ನಿರ್ಣಾಯಕವಾಗಲಿವೆ.
ಪಾದರಾಯನಪುರ, ಜಗಜೀವನ್ ರಾಮ್ ನಗರ, ರಾಯಪುರಂ, ಛಲವಾದಿಪಾಳ್ಯ, ಕೆ.ಆರ್ ಮಾರುಕಟ್ಟೆ, ಚಾಮರಾಜ ಪೇಟೆ, ಆಜಾದ್ ನಗರ ವಾರ್ಡ್ ಈ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ.
ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅವರಿಗೆ ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಹಾಗೂ ಬಿಜೆಪಿಯ ಲಕ್ಷ್ಮೀನಾರಾಯಣ ಅವರಿಂದ ಪ್ರಬಲ ಪೈಪೋಟಿಯಂತೂ ಪಕ್ಕಾ…

Share post:

Subscribe

spot_imgspot_img

Popular

More like this
Related

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...