ಕನ್ನಡ ಬಿಗ್ ಬಾಸ್ ಸೀಸನ್ 5ರ ವಿನ್ನರ್, ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಅವರ ಹೊಸ ಹೇರ್ ಸ್ಟೈಲ್ ಗೆ ನಟಿ ಶ್ರುತಿ ಹರಿಹರನ್ ಫಿದಾ ಆಗಿದ್ದಾರೆ.
ರ್ಯಾಪ್ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಚಂದನ್ ಶೆಟ್ಟಿ ವಿಭಿನ್ನ ಹೇರ್ ಸ್ಟೈಲ್ ನ ಮೂಲಕ ಅಭಿಮಾನಿಗಳ ಮುಂದೆ ಬರ್ತಿರ್ತಾರೆ.
ಇವರ ಹೊಸ ಹೇರ್ ಸ್ಟೈಲ್ ಅನ್ನು ಸಹ ಅಭಿಮಾನಿಗಳು ತುಂಬಾನೇ ಮೆಚ್ಚಿದ್ದಾರೆ. ಜೊತೆಗೆ ನಟಿ ಶ್ರುತಿ ಹರಿಹರನ್ ಅವರು ಸಹ ಹೇರ್ ಸ್ಟೈಲ್ ಗೆ ಫಿದಾ ಆಗಿದ್ದು, ಚಂದನ್ ಅವರೊಂದಿಗೆ ತೆಗೆಸಿಕೊಂಡ ಫೋಟೋವನ್ನು ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿ ಹೇರ್ ಸ್ಟೈಲ್ ಬಗ್ಗೆ ಬರೆದಿದ್ದಾರೆ.
ಚಂದನ್ ಶೆಟ್ಟಿ ಅವರು ಮಾಸ್ಟರ್ ಡ್ಯಾನ್ಸರ್ ಕಾರ್ಯಕ್ರಮದಲ್ಲಿ ಜಡ್ಜ್ ಆಗಿದ್ದಾರೆ. ಶ್ರುತಿ ಹರಿಹರನ್ ಮತ್ತು ಮಯೂರಿ ಸಹ ಈ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಜವಬ್ದಾರಿ ನಿಭಾಯಿಸುತ್ತಿದ್ದಾರೆ.