ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಕನ್ನಡ ಬಿಗ್ ಬಾಸ್ ಸೀಸನ್ 5ರ ವಿನ್ನರ್ ಆಗಿದ್ದಾರೆ. ಈ ಗೆಲುವಿನೊಂದಿಗೆ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.
ಒಂದು ಕಾಲದಲ್ಲಿ ಅವಕಾಶಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಹುಡುಗನನ್ನು ಹುಡುಕಿಕೊಂಡು ಬರುತ್ತಿವೆ ಲೆಕ್ಕವಿಲ್ಲದಷ್ಟು ಅವಕಾಶಗಳು.
ಅನೇಕ ಸಿನಿಮಾಗಳಿಗೆ ಸಂಗೀತ ನೀಡುವಂತೆ ಆಫರ್ ಗಳು ಬರುತ್ತಿವೆ. ಸದ್ಯ ಹೀಗೆ ನಾನಾ ಸಿನಿಮಾಗಳಿಂದ ಒಟ್ಟಾರೆಯಾಗಿ 5 ಕೋಟಿ ರೂ ಆಫರ್ ಬಂದಿದೆ. ಅದೇರೀತಿ ವಿವಿಧ ವೇದಿಕೆ ಕಾರ್ಯಕ್ರಮಗಳನ್ನು ನೀಡಲು ಸುಮಾರು 5 ಕೋಟಿ ರೂ ಆಫರ್ ಬಂದಿದೆ ಅಂತೆ…