No menu items!
20.7 C
Munich
Thursday, May 21, 2026

ತುಮಕೂರು ವಿವಿ ಲ್ಯಾಪ್ ಟಾಪ್ ಹಗರಣ…?!

Must read

ತುಮಕೂರು ವಿಶ್ವವಿದ್ಯಾಲಯದ ಕರ್ಮಕಾಂಡವಿದು. ಬಡ ವಿದ್ಯಾರ್ಥಿಗಳಿಗೆ‌ ವಿದ್ಯಾಲಯ ಮಾಡುತ್ತಿರೋ‌ ಮಹಾ ಮೋಸದ ವ್ಯತೆ ಇದು. ವಿವಿಯಲ್ಲಿ ಲ್ಯಾಪ್ ಟಾಪ್ ಹಗರಣ ನಡೆದಿದೆ..?!


ಸೆಮಿಸ್ಟರ್ ಎಕ್ಸಾಮ್ ಹತ್ತಿರ ಬರ್ತಿದೆ. ಅದಕ್ಕು ಮುನ್ನ ವಿದ್ಯಾರ್ಥಿಗಳು ಸಂಪ್ರಂಧ ಬರೆಯಬೇಕು (Dissertation work) . ಆದರೆ, ವಿವಿಯಿಂದ ಬಡ ವಿದ್ಯಾರ್ಥಿಗಳಿಗೆ ಸಿಗಬೇಕಾದ ಲ್ಯಾಪ್ ಟಾಪ್ ಸಿಕ್ಕಿಲ್ಲ.


ಹೌದು, ವಿಶೇಷ ಘಟಕ ಯೋಜನೆ/ ಗಿರಿಜನ ಉಪಯೋಜನೆ ಅಡಿಯಲ್ಲಿ ಪ.ಜಾತಿ, ಪ.ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಬೇಕು.‌ ಆದರೆ, ಇಲ್ಲಿಯವರೆಗೂ‌ ಅರ್ಹ ಫಲಾನುಭವಿಗಳಿಗೆ ಲ್ಯಾಪ್ ಟಾಪ್ ಸಿಕ್ಕಿಲ್ಲ…!
ಆದರೆ, 20-1-2018ರಲ್ಲಿ ನಡೆದ 11ನೇ ಘಟಿಕೋತ್ಸವದಲ್ಲಿ 2017-18ನೇ ಸಾಲಿನ ಚಟುವಟಿಕೆಗಳ ವರದಿ ಕೈಪಿಡಿಯಲ್ಲಿ ಈಗಾಗಲೇ ವಿಶೇಷ ಘಟಕ ಯೋಜನೆ/ಗಿರಿಜನ ಉಪಯೋಜನೆಯಡಿಯಲ್ಲಿ 264 ಉನ್ನತ ಗುಣಮಟ್ಟದ ಲ್ಯಾಪ್ ಟಾಪ್ ಗಳನ್ನು ನೀಡಿದ್ದೇವೆ ಎಂದು ಹೇಳಿದ್ದಾರೆ.


ಈ ಹೇಳಿಕೆಯಿಂದ ವಿದ್ಯಾರ್ಥಿಗಳು ಅಚ್ಚರಿಗೊಂಡಿದ್ದಾರೆ…! ಲ್ಯಾಪ್ ಟಾಪ್ ಯಾರಿಗೆ,‌ಯಾವಾಗ ಕೊಟ್ಟಿದ್ದಾರೆ ಎಂಬುದು ತಿಳಿದಿಲ್ಲ..!
ಇದರಿಂದ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ. ನಾಳೆ ಪ.ಜಾತಿ , ಪ.ಪಂಗಡದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article