ಮುಂಬೈನ ಘಾಟ್ ಕೋಪರ್ ಬಳಿಯ ಸರ್ವೋದಯ ನಗರದಲ್ಲಿ ಲಘು ವಿಮಾನವೊಂದು ಅಪಘಾತಕ್ಕೀಡಾಗಿದ್ದು, ಐವರು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಕಿಂಗ್ ಏರ್ ಸಿ90 ಚಾರ್ಟರ್ ವಿಮಾನ ಅಪಘಾತಕ್ಕೀಡಾಗಿರುವುದು.ಇದು ಉತ್ತರ ಪ್ರದೇಶ ಸರ್ಕಾರದ್ದು ಎಂದು ಹೇಳಲಾಗಿದ್ದು, ಇದನ್ನು ಯುಪಿ ಸರ್ಕಾರ ಮಾರಾಟ ಮಾಡಿದೆ ಎಂದು ತಿಳಿದುಬಂದಿದೆ.
ನಿರ್ಮಾಣ ಹಂತದ ಕಟ್ಟಡದ ಮೇಲೆ ವಿಮಾನ ಕುಸಿದಿದೆ. 8 ಮಂದಿ ಪ್ರಯಾಣಿಕರು ವಿಮಾನದಲ್ಲಿದ್ದರು. 5 ಮಂದಿ ಇಂಜಿನಿಯರ್ ಗಳು ಕೆಲಸದಲ್ಲಿದ್ದರು ಎಂದು ಹೇಳಲಾಗಿದ್ದು ಸಾವಿನ ಸಂಖ್ಯೆ ಹೆಚ್ಚಿರುವ ಸಂಭವವಿದೆ.
ವಿಮಾನ ಪತನದಿಂದ ಕಟ್ಟಡಕ್ಕೆ ಬೆಂಕಿ ತಗುಲಿದೆ. ವಿಮಾನದಲ್ಲಿದ್ದ ನಾಲ್ವರು ಸೇರಿ ಐವರು ಸಜೀವ ದಹನವಾಗಿದ್ದಾರೆ ಎಂದು ತಿಳಿದುಬಂದಿದೆ.