ಶ್ರೀರಂಗಪಟ್ಟಣದ KRS ಬೃಂದಾವನದಲ್ಲಿ ಚಿರತೆ ಸಂಚಾರದ ದೃಶ್ಯ ಸೆರೆಯಾಗಿದ್ದು , ಸಿಸಿಟಿವಿ ದೃಶ್ಯ ಆಧರಿಸಿ ಚಿರತೆ ಸೆರೆಗೆ ಅರಣ್ಯ ಇಲಾಖೆ ಮುಂದಾಗಿದೆ .
ಅರಣ್ಯ ಅಧಿಕಾರಿಗಳು ಬೃಂದಾವನದಲ್ಲಿ ಚಿರತೆ ಸೆರೆಗೆ ಬೋನ್ ಇರಿಸಿದ್ದಾರೆ . ಅರಣ್ಯ ಇಲಾಖೆ ಅಧಿಕಾರಿಗಳು 2 ಕಡೆ ಬೋನ್ ಇಟ್ಟು ಚಿರತೆ ಸೆರೆಗೆ ಮುಂದಾಗಿದ್ದಾರೆ .
ಇನ್ನೂ ತಡರಾತ್ರಿ ಕಾರ್ಯಾಚರಣೆ ನಡೆಸಿದ್ದು , ನಿನ್ನೆ ಮಧ್ಯಾಹ್ನ ಚಿರತೆ ಬೃಂದಾವನದಲ್ಲಿ ಕಾಣಿಸಿಕೊಂಡಿದೆ .
ಮುನ್ನೆಚ್ಚರಿಕೆ ಕ್ರಮವಾಗಿ KRS ಬೃಂದಾವನಕ್ಕೆ ಪ್ರವೇಶ ನಿರ್ಬಂಧ ಹೇರಲಾಗಿದ್ದು , ಪ್ರವಾಸಿಗರ ನಿರ್ಬಂಧದಿಂದ ಬೃಂದಾವನ ಆವರಣ ಬಿಕೋ ಎನ್ನುತ್ತಿದೆ .