ಕೆ.ಆರ್.ನಗರ ಪಟ್ಟಣದ ಜನವಸತಿ ಪ್ರದೇಶಕ್ಕೆ ಎಂಟ್ರಿ ಕೊಟ್ಟ ಚಿರತೆ ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸುತ್ತಾ ಭೀತಿ ಮೂಡಿಸಿರುವ ಘಟನೆ ನಡೆದಿದೆ. KR.ನಗರದಿಂದ ಮುಳ್ಳೂರಿಗೆ ಹೋಗುವ ರಸ್ತೆಯಲ್ಲಿ ಚಿರತೆ ಅಟ್ಟಹಾಸ ಮೆರೆದಿದ್ದು, ಬೈಕ್ ನಲ್ಲಿ ಹೋಗುತ್ತಿದ್ದ ಸವಾರನ ಮೇಲೆ ಚಿರತೆ ದಾಳಿಗೆ ಯತ್ನಿಸಿದೆ. ಇದೇ ವೇಳೆ ನಾಯಿಯೊಂದು ಚಿರತೆ ದಾಳಿಯಿಂದ ಜಸ್ಟ್ ಮಿಸ್ ಆಗಿದ್ದು, ಚಿರತೆ ದಾಳಿ ಮಾಡುತ್ತಾ ಸಾಗಿರುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಕಳೆದ ರಾತ್ರಿಯೇ ಕೆ ಆರ್ ನಗರ ಪಟ್ಟಣಕ್ಕೆ ಬಂದಿರುವ ಚಿರತೆ ರಸ್ತೆ ಮಧ್ಯೆ ಕುಳಿತಿರುವ ಆತಂಕ ಮೂಡಿಸಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಲಾಗಿದೆ.
ಚಿರತೆ ಇದೇ ಹುಷಾರ್..!
Date: