ಶ್ರೀರಂಗಪಟ್ಟಣದ KRS ಬೃಂದಾವನದಲ್ಲಿ ಪದೇ ಪದೇ ಚಿರತೆ ಪ್ರತ್ಯಕ್ಷವಾಗುತ್ತಿರುವ ಹಿನ್ನೆಲೆ ಕ್ಯಾಮೆರಾ ಟ್ರ್ಯಾಪ್ ಅಳವಡಿಸಲಾಗಿದೆ. ಚಿರತೆ ಕಾಣಿಸಿಕೊಂಡ 4 ಕಡೆಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮರಗಳಿಗೆ ಕ್ಯಾಮೆರಾ ಟ್ರ್ಯಾಪ್ ಅಳವಡಿಸಿದ್ದಾರೆ.
ಕ್ಯಾಮೆರಾ ಟ್ರ್ಯಾಪ್ ಸುತ್ತಮುತ್ತ ಪ್ರಾಣಿ ಸಂಚರಿಸಿದ್ರೆ ಫೋಟೋ ಕ್ಯಾಪ್ಚರ್ ಆಗಲಿದ್ದು, ಚಿರತೆ ಸೆರೆಗೆ ಡ್ಯಾಂ ಮತ್ತು ಬೃಂದಾವನದ ಬಳಿ 4 ಬೋನ್ ಗಳನ್ನು ಇರಿಸಲಾಗಿದೆ. KRS ಬಳಿ ಕಾವೇರಿ ನೀರಾವರಿ ನಿಗಮದಿಂದಲೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಡ್ಯಾಂ ಸುತ್ತಮುತ್ತಲಿರುವ ಕುರಚಲು ಗಿಡಗಳನ್ನು ತೆಗೆಯಲಾಗಿದೆ.
ಇನ್ನ ಕೂಂಬಿಂಗ್ ಕಾರ್ಯಾಚರಣೆಗೆ ಅರಣ್ಯ ಇಲಾಖೆ ತಯಾರಿ ನಡೆಸಿದ್ದು, ಚಿರತೆ ಆತಂಕದಿಂದ ಬೃಂದಾವನಕ್ಕೆ ಪ್ರವಾಸಿಗರ ಪ್ರವೇಶವನ್ನ ನಿರ್ಬಂಧಿಸಲಾಗಿದೆ.