ಸ್ಯಾಂಡಲ್ ವುಡ್ ನಟ ಮೈನಾ ಚೇತನ್ ಅಲಿಯಾಸ್ ಚೇತನ್ ಅಹಿಂಸಾ ಅವರ ಕಡೆಗೆ ಮೀ ಟೂ ಬಿರುಗಾಳಿ ಬೀಸಿದೆ.
ಬಿರುಗಾಳಿ ಚಿತ್ರದ ನಾಯಕ ಚೇತನ್ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರಸಿರುವುದು ನಟ ಅರ್ಜುನ್ ಸರ್ಜಾ ಅವರ ಮಗಳು ನಟಿ ಐಶ್ವರ್ಯ.
ಖಾಸಗಿ ವಾಹಿನಿಯೊಂದರ ಜೊತೆ ಮಾತನಾಡುತ್ತ ಐಶ್ವರ್ಯ ಚೇತನ್ ವಿರುದ್ಧ ಮಾತಾಡಿದ್ದಾರೆ.
ಪ್ರೇಮಬರಹ ಸಿನಿಮಾಕ್ಕೆ ಚಂದನ್ ಅವರಿಗಿಂತಲೂ ಮೊದಲು ಚೇತನ್ ಆಯ್ಕೆಯಾಗಿದ್ರು. ಆಗ ಫೋಟೋ ಶೂಟ್ ಟೈಮಲ್ಲಿ ನನ್ನ ಬೆನ್ನು , ಕೆನ್ನೆ ಮುಟ್ಟಿದ್ರು. ಬರಲ್ಲ ಅಂದ್ರೂ ಪದೇ ಪದೇ ನನ್ನ ಊಟಕ್ಕೆ ಕರೀತಾ ಇದ್ರು ಅಂದಿದ್ದಾರೆ ಐಶ್ವರ್ಯ.
ಇದನ್ನೇ ನಾನು ಲೈಂಗಿಕ ಶೋಷಣೆ ಅನ್ನಬಹುದೇ ಎಂದು ಅರ್ಜುನ್ ಸರ್ಜಾ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಟಾಂಗ್ ಕೊಟ್ಟಿದ್ದಾರೆ.