ಹೈಟೆಕ್ ಸಿಟಿ, ಹೈಫೈ ಸಿಟಿ, ಆಂತೆಲ್ಲ ಹಣೆಪಟ್ಟಿ ಕಟ್ಟಿಕೊಂಡಿರೋ ಬೆಂಗಳೂರು ಎಂಬ ಮಹಾನಗರಿ ಪ್ರಖ್ಯಾತಿ ಜೊತೆ ಜೊತೆಗೇ ಆಗಾಗ ಕುಖ್ಯಾತಿಯನ್ನು ಪಡೆದುಕೊಳ್ಳುತ್ತೆ. ಅದ್ರಂತೆ ಈ ಬಾರಿ ಸಿಲಿಕಾನ್ ಸಿಟಿಯಲ್ಲಿ ಬಾಲ್ಯ ವಿವಾಹ ಪದ್ದತಿ ಜೀವಂತವಾಗಿದೆ ಹಾಗೂ ತೀವ್ರವಾಗಿ ಹಬ್ಬಿದೆ ಅನ್ನೋ ಕುಖ್ಯಾತಿಗೆ ಪಾತ್ರವಾಗಿದೆ. ಹೌದು ಈಗ ಬಿಡುಗಡೆಯಾಗಿರೋ ಈ ವರದಿಯಿಂದ ಈ ವಿಚಾರ ಬೆಳಕಿಗೆ ಬಂದಿದೆ.
ಬಾಲ್ಯ ವಿವಾಹ ಅನ್ನೋದು ಒಂದು ಸಾಮಾಜಿಕ ಪಿಡುಗು.ಅದನ್ನ ಹೊಗಲಾಡಿಸಲು ಹಲವಾರು ವರ್ಷಗಳಿಂದ ಸಾವಿರಾರು ಜನ ಹೋರಾಡ್ತಾ ಬಂದಿದ್ದಾರೆ..ವಿಪರ್ಯಾಸ ಅಂದ್ರೆ ಹೈಫೈ ಸಿಟಿ ಅನ್ನೋ ಪಟ್ಟಕಟ್ಟಿಕೊಂಡಿರೋ ಬೆಂಗಳೂರಲ್ಲೇ ಈ ಪದ್ದತಿ ಇಂದಿಗೂ ಆಚರಣೆಯಲ್ಲಿರೋದು ಆಶ್ಚರಿ ಮೂಡಿಸಿದೆ.
ಹೌದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸಮೀಕ್ಷೆ ಪ್ರಕಾರ ಈ ವಿಷಯ ಬಹಿರಂಗವಾಗಿದೆ..ಅದ್ರಲ್ಲೂ ಸಿಲಿಕಾನ್ ಸಿಟಿಯ 16 ಸ್ಲಂಗಳಲ್ಲಿ ಪ್ರತ್ಯೇಕವಾಗಿ ಸಮೀಕ್ಷೆ ಮಾಡಿದಾಗ, 30ಕ್ಕೂ ಹೆಚ್ಚಿನ ಬಾಲ್ಯ ವಿವಾಹದ ಸಂಗತಿ ಬೆಳಕಿಗೆ ಬಂದಿವೆ..ಅದ್ರಲ್ಲಿ ಎಲ್ಲರೂ ಹಿಂದೂಳಿದ ವರ್ಗದವರಾಗಿದ್ದು ಬಡತನ ಇದಕ್ಕೆ ಮುಖ್ಯ ಕಾರಣವಾಗಿದೆ..
ಇನ್ನು ಕರ್ನಾಟಕದ ಆರು ಜಿಲ್ಲೆಗಳಾದ ರಾಯಚೂರು,ಕಲಬುರ್ಗಿ,ಬೆಳಗಾವಿ,ಹಾವೇರಿ,ಮತ್ತು ಬೆಂಗಳೂರು ನಗರದ 93 ಗ್ರಾಮದಲ್ಲಿ ಬಾಲ್ಯ ವಿವಾಹಕ್ಕೆ ಬಲವಂತವಾಗಿ ದೂಡಲಾಗಿದೆ..ಅಲ್ಲದೆ ಶೇಕಡಾ 35ರಷ್ಟು ಮಕ್ಕಳು ಅನಕ್ಷರಸ್ಥರಾಗಿದ್ದಾರೆ ಎಂದು ಸರ್ವೆ ಮೂಲಕ ತಿಳಿದುಬಂದಿದೆ..
ಒಟ್ಟಿನಲ್ಲಿ ಸಿಲಿಕಾನ್ ಸಿಟಿ ಎಷ್ಟೇ ಬೆಳೆದರು, ಅನಕ್ಷರಸ್ಥರ ಸಂಖ್ಯೆ ಹೆಚ್ಚಾಗೋದ್ರ ಜೊತೆಗೆ ಬಾಲ್ಯವಿವಾಹ ಪದ್ದತಿ ಕೂಡ ಹೆಚ್ಚಾಗುತ್ತಿರೋದು ದುರಂತವೇ ಸರಿ. ಇನ್ನಾದ್ರು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡು ಬಾಲ್ಯ ವಿವಾಹವನ್ನ ತಡೆಗಟ್ಟಬೇಕಿದೆ.
- ಶ್ರೀ
POPULAR STORIES :
ಷೇರು ಮಾರುಕಟ್ಟೆಯಲ್ಲಿನ ಸ್ವಾರಸ್ಯಕರ ಸುದ್ದಿಗಳು.!
ಚಿತೆಯಲ್ಲಿ ಮಲಗಿದ್ದ ವ್ಯಕ್ತಿ ಮತ್ತೆ ಜೀವಂತವಾದ..??
ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!
ಕೋಹ್ಲಿ ಪ್ರಕಾರ ಪರ್ಫೆಕ್ಟ್ ಟೆಸ್ಟ್ ಬೌಲರ್ ಯಾರು?
ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?