ಮಗುವಿಗೆ ಸ್ವಲ್ಪವೇ ಸ್ವಲ್ಪ ಹೆಚ್ಚುಕಡಿಮೆ ಆದ್ರೆ ತಂದೆ-ತಾಯಿಗೆ ತಡ್ಕೊಳ್ಳಕ್ಕೆ ಆಗಲ್ಲ..! ಮಕ್ಕಳು ಚೆನ್ನಾಗಿರಬೇಕು ಅನ್ನೋದೇ ಅಪ್ಪ-ಅಮ್ಮನ ಆಸೆ..! ಮಕ್ಕಳಿಗೆ ಸಣ್ಣ ಜ್ವರ ಬಂದ್ರು ದೇವರಿಗೆ ಪಾರ್ಥನೆ ಮಾಡ್ತಾರೆ..! ಆದರೆ, ಮಗುವಿನ ತಲೆ ಕಂಬಿಗಳ ನಡುವೆ ಸಿಲುಕಿಕೊಂಡಾಗ ತಂದೆ ಏನ್ ಮಾಡ್ದ ಗೊತ್ತಾ..? ಇದನ್ನು ನೋಡಿದ್ರೆ ನೀವು ಶಾಕ್ ಆಗ್ತೀರಿ..!
ಚೀನಾದ ಫುಜಿಯಾನ ಪ್ರಾಂತ್ಯದಲ್ಲಿ ಬಾಲ್ಕನಿಯ ಕಂಬಿಗಳ ನಡುವೆ ಸಿಲುಕಿತ್ತು. ಆಗ ತಂದೆ ಮಗುವಿನ ತಲೆಯನ್ನು ಹೊರಗೆ ತೆಗೆಯಲು ಪ್ರಯತ್ನ ಪಟ್ಟಿಲ್ಲ..! ಅಗ್ನಿಶಾಮಕ ಸಿಬ್ಬಂದಿ ಮಗುವಿಗೆ ಯಾವುದೇ ತೊಂದರೆ ಆಗದಂತೆ ತಲೆಯನ್ನು ಹೊರಗೆ ತೆಗೆಯಲು ಪ್ರಯತ್ನಪಡುತಿದ್ರೆ ತಂದೆ ಅನಿಸಿಕೊಂಡ ಪುಣ್ಯಾತ್ಮ ವೀಡಿಯೋ ಮಾಡ್ತಿದ್ದ..! ಮಗುವನ್ನು ರಕ್ಷಿಸಿದ ಬಳಿಕವಷ್ಟೇ ವೀಡಿಯೋ ಮಾಡೋದನ್ನು ನಿಲ್ಲಿಸಿದ್ದಾನಂತೆ ಆಸಾಮಿ..!