No menu items!
9.1 C
Munich
Thursday, May 7, 2026

ಐಸಿಸ್ ದಾಳಿ : ಪ್ರಿಯಾಂಕಾ ಚೋಪ್ರಾ ಅಪಾಯದಿಂದ ಪಾರು

Must read

ಶಂಕಿತ ಐಸಿಸ್ ಉಗ್ರರು ನ್ಯೂಯಾರ್ಕ್‍ನಲ್ಲಿ ದಾಳಿ ನಡೆಸಿದ್ದು, ಅದೃಷ್ಟವಶಾತ್ ನಟಿ ಪ್ರಿಯಾಂಕಾ ಚೋಪ್ರಾ ಅಪಾಯದಿಂದ ಪಾರಾಗಿದ್ದಾರೆ..!
ನ್ಯೂಯಾರ್ಕ್‍ನಲ್ಲಿ ಪ್ರಿಯಾಂಕ ವಾಸವಿರೋ ಮನೆಯ ಬಳಿಯೇ ಉಗ್ರನೋರ್ವ ಪಿಕಪ್ ವಾಹನ ಹರಿಸಿ 8 ಮಂದಿಯನ್ನು ಹತ್ಯೆಗೈದಿದ್ದಾನೆ. ಪ್ರಿಯಾಂಕಿ ಹಾಲಿವುಡ್ ಸಿನಿಮಾ ಮತ್ತು ರಿಯಾಲಿಟಿ ಶೋನಲ್ಲಿ ಭಾಗವಹಿಸಿರೋ ಕಾರಣ ನ್ಯೂಯಾರ್ಕ್ ನಗರದಲ್ಲಿ ವಾಸವಾಗಿದ್ದಾರೆ. ಸಿನಿಮಾ ಮತ್ತು ಕ್ವಾಂಟಿಕೋ ಸೀಸನ್-3ನಲ್ಲಿ ಬ್ಯುಸಿಯಾಗಿರೋ ಪ್ರಿಯಾಂಕಾ ಚೋಪ್ರಾ, ಹಾಲಿವುಡ್ ಸಿನಿಮಾದ ಬಳಿಕ ಪಿ.ಟಿ ಉಷಾ ಜೀವನಾಧಾರಿತ ಸಿನಿಮಾದ ಶೂಟಿಂಗ್‍ನಲ್ಲಿ ಭಾಗವಹಿಸ್ತಾರೆ ಎಂದು ತಿಳಿದುಬಂದಿದೆ.
ಸಧ್ಯ ಹಾಲಿವುಡ್‍ನಲ್ಲಿ ಬ್ಯುಸಿ ಆಗಿರೋ ನಟಿ ನಿನ್ನೆ ಕೆಲಸ ಮುಗಿಸಿಕೊಂಡು ಮನೆಗೆ ವಾಪಾಸ್ಸಾಗುವಾಗ ಆ್ಯಂಬುಲೆನ್ಸ್ ಸೈರನ್‍ಗಳಿಂದಾಗಿ ಉಗ್ರರ ದಾಳಿ ನಡೆದಿರೋದು ಪ್ರಿಯಾಂಕಾಗದೆ ಗೊತ್ತಾಗಿದೆ. ಈ ಅಮಾನವೀಯ ಕೃತ್ಯದಲ್ಲಿ ಸಾವಿಗೀಡಾದವರ ಕುಟುಂಬದವರಿಗೆ ಚೇತರಿಸಿಕೊಳ್ಳುವ ಶಕ್ತಿ ಸಿಗಲಿ ಎಂದು ಪ್ರಿಯಾಂಕಾ ಹೇಳಿದ್ದಾರೆ.
ದುರಂತ ನಡೆದ ಸ್ಥಳದಲ್ಲಿ ಇಂಗ್ಲಿಷ್‍ನಿಂದ ಬರೆದಿರೋ ಪತ್ರ ಸಿಕ್ಕಿದ್ದು, ಶಂಕಿತ ಐಸಿಸ್ ಉಗ್ರ ಕೃತ್ಯವೆಸಗಿದ್ದಾನೆ ಎಂದು ಹೇಳಲಾಗ್ತಿದೆ. ಉಜ್ಬೇಕಿಸ್ತಾನ್‍ನ 29 ವರ್ಷದ ಸೈಫಲೋಲೋ ಹಬಿಬುಲ್ಲೇವಿಕ್ ಸೈಫೋವ್ ಎಂದು ಶಂಕಿಸಲಾಗಿದೆ. ಈತ 2010ರಲ್ಲಿ ಅಮೆರಿಕಾಕ್ಕೆ ಬಂದಿದ್ದ ಎನ್ನಲಾಗ್ತಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article