ಎರಡು ಬಲಿಷ್ಠ ತಂಡಗಳ ನಡುವೆ ಜಿದ್ದಾ ಜಿದ್ದಿನ ಕ್ರಿಕೆಟ್ ಮ್ಯಾಚ್ ನಡೀತಾ ಇದ್ರೆ ಅಲ್ಲಿ ನೆರೆದಿರೊ ಸಾವಿರಾರು ಅಭಿಮಾನಿಗಳಿಗೆ ಇನ್ನಿಲ್ಲದ ಕುತೂಹಲ ಕಾಡ್ತಾ ಇರುತ್ತೆ. ಇದೇ ವೇಳೆ ಅಚಾನಕ್ಕಾಗಿ ಮಳೆ ಬಂದು ಅಭಿಮಾನಿಗಳ ರಂಜನೆಗೆ ನೀರೆರಚಿದ್ರೆ ಅವರಲ್ಲಾಗೊ ನಿರಾಸೆ ಇನ್ನೆಲ್ಲೂ ಆಗಲ್ಲ. ಕುತೂಹಲಕಾರಿ ಪಂದ್ಯದ ವೇಳೆ ಮಳೆ ಅಡ್ಡಿ ಬಂದು ಪಂದ್ಯ ಸ್ವಲ್ಪ ಸಮಯ ತಡವಾಗಿಯೋ ಅಥವಾ ಪಂದ್ಯ ರದ್ದೋ ಆದ್ರೆ ಒಂದು ಕಡೆ ಅಭಿಮಾನಿಗಳಿಗೆ ನಿರಾಸೆ, ಇನೊಂದ್ಕಡೆ ಆಯೋಜಕರಿಗೆ ಕೋಟಿ-ಕೋಟಿ ಲಾಸ್ ಆಗುತ್ತೆ. ಆದ್ರೆ ಇನ್ಮುಂದೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ರೀತಿಯ ಯಾವುದೇ ನಿರಾಸೆ, ಯಾವುದೇ ನಷ್ಟ ಆಗೋದಿಲ್ಲ..! ಯಾಕಂದ್ರೆ ಈ ಕ್ರೀಡಾಂಗಣ ವಿಶ್ವದಲ್ಲೆ ಪ್ರಪ್ರಥಮ ಬಾರಿಗೆ ‘ಸಬ್ ಏರ್ ಸಿಸ್ಟಮ್’ ಅಳವಡಿಸಿಕೊಂಡಿದೆ. ಈ ತಂತ್ರಜ್ಞಾನದ ಮೂಲಕ ಎಷ್ಟೇ ದೊಡ್ಡ ಪ್ರಮಾಣದಲ್ಲಿ ಮಳೆ ಬಂದ್ರೂ ಕೂಡ ಮೈದಾನದಲ್ಲಿ ನೀರು ನಿಲ್ಲೋದಿಲ್ಲ. ನಿಂತ ನೀರು ಕೆಲವೇ ಕ್ಷಣದಲ್ಲಿ ಮಾಯವಾಗಿ ಬಿಡುತ್ತೆ. ಅಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಬಿಟ್ರೆ ಬೇರೆ ಯಾವುದೇ ದೇಶದಲ್ಲಿ ಅಳವಡಿಸಿಕೊಂಡಿಲ್ಲ..!
ಮಳೆ ಬಂದ ಕೂಡಲೆ ಅತ್ಯಾಧುನಿಕ ಸಬ್‍ಏರ್ ಸಿಸ್ಟಮ್ ಮೂಲಕ ನೀರು ಪಾಸಾಗಲು ಆರಂಭವಾಗುತ್ತೆ. ಕಳೆದೊಂದು ವರ್ಷಗಳಿಂದ ಸಬ್‍ಏರ್ ಸಿಸ್ಟಮ್ ಅಳವಡಿಕೆಗಾಗಿ ಇಡೀ ಮೈದಾನವನ್ನೆ ಅಗೆದು ಪೈಪ್‍ಗಳನ್ನು ಅಳವಡಿಸಲಾಗಿದೆ. ಮಳೆಯ ವೇಗದ ಪ್ರಮಾಣದಲ್ಲೆ ಮೈದಾನದಲ್ಲಿ ನಿಂತ ನೀರು ಅಷ್ಟೆ ವೇಗವಾಗಿ ಇಂಗು ಗುಂಡಿಗಳ ಮೂಲಕ ಹರಿದು ಹೊರ ಹೋಗುತ್ತದೆ. ಅದು ಎಷ್ಟರ ಮಟ್ಟಿಗೆ ಅಂದ್ರೆ ನಿಮಿಷಕ್ಕೆ 10 ಸಾವಿರ ಲೀಟರ್ ನೀರು ಹೊರ ಹಾಕುವ ಸಾಮಥ್ರ್ಯವನ್ನು ಈ ಸಬ್ ಏರ್ ಯಂತ್ರ ಒಳಗೊಂಡಿದೆ. ಹೀಗಾಗಿ ಈ ಹಿಂದೆ ಮಳೆ ಬಂದಾಗ ಮೈದಾನವೆಲ್ಲಾ ಒದ್ದೆಯಾಗಿ ಪಂದ್ಯ ವಿಳಂಬವಾಗುವುದು ಇನ್ನು ಮುಂದೆ ತಪ್ಪಲಿದೆ ಎಂದು ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ.
ಈ ಅತ್ಯಾಧುನಿಕ ಸಬ್ ಏರ್ ಸಿಸ್ಟಮ್‍ನ್ನು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಳವಡಿಸಿದ್ದಾದ್ರೂ ಹೇಗೆ ಎಂಬ ಪ್ರಶ್ನೆ ನಿಮ್ಮಲ್ಲಿ ಕಾಡ್ತಾ ಇದ್ರೆ..! ಈ ತಂತ್ರಜ್ಞಾನ ಅಳವಡಿಕೆಗಾಗಿ ರಾಜ್ಯ ಕ್ರಿಕೆಟ್ ಸಂಸ್ಥೆ ಮೈದಾನದ 1000 ಟ್ರಕ್ ಲೋಡ್ ಮಣ್ಣನ್ನು ಹೊರ ತೆಗ್ದಿದ್ದಾರೆ. ಅದಾದ ನಂತರ ಮೈದಾನದ ಒಳಗೆ ಗೇಡಿಂಗ್, ಕಂಪ್ಯಾಕ್ಷನ್, ಜಿಯೊ- ಟೆಕ್ಸ್ ಟೈಲ್ ಅಳವಡಿದ್ದಾರೆ. ಟ್ರೆಂಜಿಂಗ್ 150 ಎಂಎಂ ನಿಂದ 800 ಎಂಎಂ ಅಳತೆಯ ಪರ್ಫಾ ರೇಟಡ್ ಪೈಪ್‍ಗಳನ್ನು 4.5 ಕಿ.ಮೀ ಉದ್ದದಲ್ಲಿ ಮೈದಾನದ ಸುತ್ತಲೂ ಅಳವಡಿಸಲಾಗಿದೆ. ಅದಾದ ನಂತರ ಜಲ್ಲಿ ಹಾಗೂ ಉತ್ತಮ ಗುಣಮಟ್ಟದ ಮಣ್ಣನ್ನು ಸಾವಯವ ಗೊಬ್ಬರದ ಮಿಶ್ರಣದೊಂದಿಗೆ ಬರ್ಮುಡಾ ಹುಲ್ಲನ್ನು ಬೆಳೆಸಲಾಗಿದೆ. ಭೂಮಿಯ ಒಳಗೆ ಸಬ್ ಏರ್ ಪೈಪ್‍ಗಳನದ್ನು ಅಳವಡಿಸಿ, ಮೈದಾನಕ್ಕೆ ಎಷ್ಟು ಸಾಮರ್ಥ್ಯವಿದೆಯೊ ಅಷ್ಟು ಪ್ರಮಾಣದ ನೀರನ್ನು ಇಂಗಲು ಬಿಟ್ಟು ಇನ್ನುಳಿದ ನೀರನ್ನು ಪೈಪ್‍ಗಳ ಮೂಲಕ ಬೇರೊಂದು ಸ್ಥಳದಲ್ಲಿ ಸಂಗ್ರಹ ಮಾಡಲಾಗುತ್ತದೆ. ಸಂಗ್ರಹವಾದ ನೀರನ್ನು ಕ್ರೀಡಾಂಗಣದ ಇತರೆ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತದೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಅಂತೂ ಮುಗೀತು ಜಿಯೋ ವೆಲ್‍ಕಮ್ ಆಫರ್..! ಹಾಗಾದ್ರೆ ಮುಂದಿನ ಪ್ಲಾನ್ ಏನು..?