ಚೌಕಾಬಾರ ಆಟ ಶುರು..!

Date:

ಚೌಕಾಬಾರ ಮೊದಲನೆ ಗರಾ 3 ನೇ ತಾರೀಖಿನಂದು ಬೀಳ್ತಿದೆ. ಅದೇನಪ್ಪಾ ಅಂದ್ರೆ ವಿಭಿನ್ನ ಕಥಾಹಂದರದೊಂದಿದೆ ಪಾಪಾ ಪಾಂಡು ಸಿಲ್ಲಿ ಲಲ್ಲಿ ಖ್ಯಾತಿಯ ವಿಕ್ರಮ್ ಸೂರಿ ನಿರ್ದೇಶನದ ಚೌಕಾಬಾರದ ಆಡಿಯೋ ಲಾಂಚ್ ಜುಲೈ 3 ರಂದು ಆಗುತ್ತಿದೆ. ಈ ಚೌಕಾಬಾರದ ಆಟಕ್ಕೆ ಚಿತ್ರಕತೆ ಹಾಗೂ ನಿರ್ದೇಶನ ವಿಕ್ರಮ್ ಸೂರಿ ಮಾಡಿದ್ರೆ , ನಮಿತಾ ರಾವ್ ಈ ಸಿನಿಮಾದ ನಿರ್ಮಾಪಕಿ ‌ . ನಟ ರಘ ಭಟ್ ಅವರ ಲಕ್ಷ್ಮೀ ಗಣೇಶ ಪ್ರೋಡೆಕ್ಷನ್ ಸಹಕಾರದೊಂದಿಗೆ ನವಿ ನಿರ್ಮಿತಿ ಪ್ರೋಡೆಕ್ಷನ್ ನಲ್ಲಿ ಚೌಕಾಬಾರದ ಕಾಯಿಗಳು ನಡೆಯುತ್ತಿವೆ . ಇದಕ್ಕೆ ಕಥೆ ಮಣಿ ಆರ್ ರಾವ್ ಬರೆದ್ರೆ , ಮಾತುಗಳು ರೂಪಾ ಪ್ರಭಾಕರ್ ಬರೆದಿದ್ದಾರೆ . ಸಾಹಿತ್ಯ ಖ್ಯಾತ ಕವಿಗಳಾದ ಹೆಚ್ ಎಸ್ ವೆಂಕಟೇಶ ಮೂರ್ತಿ ಮತ್ತು ಬಿ ಆರ್ ಲಕ್ಷ್ಮಣ ರಾವ್ . ಹಾಗೂ , ಸ್ವತಃ ವಿಕ್ರಮ್ ಸೂರಿ ಕೂಡಾ ಸಾಹಿತ್ಯ ಬರೆದಿರುವುದು ಗಮನಾರ್ಹ .

 

ಈ ಸಾಹಿತ್ಯಕ್ಕೆ ಅಶ್ವಿನ್ ಪಿ ಕುಮಾರ್ ಸಂಗೀತ ಸಂಯೋಜನೆ ಇದೆ. ಮತ್ತು ಈ ಜೀವನದ ಚೌಕಾಬಾರದ ಆಟವನ್ನು ರವಿರಾಜ್ ಹೊಂಬಾಳ ಸೆರೆ ಹಿಡಿದಿದ್ದಾರೆ .

 

ಚೌಕಾಬಾರ ಸಿನಿಮಾದ ಆಡಿಯೋ ಲಾಂಚ್ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ , ಡಾ ಅಂಬರೀಶ್ ಆಡಿಟೋರಿಯಂ ಚಾಮರಾಜ ಪೇಟೆ ಬೆಂಗಳೂರಿನಲ್ಲಿ
ಸಂಜೆ ನಾಲ್ಕುಗಂಟೆಗೆ ಪ್ರಾರಂಭವಾಗಲಿದೆ .

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...