ಸಿನಿಮಾ… ಬಣ್ಣದ ಕನಸುಗಳೊಂದಿಗೆ ಈ ಬಣ್ಣದ ಜಗಕ್ಕೆ ಕಾಲಿಡಲು ನೀವು ವ್ಹೇಟ್ ಮಾಡ್ತಿದ್ದೀರಾ ಅಲ್ವಾ? ಹಾಗಾದ್ರೆ ಮಾತ್ರ ಈ ನ್ಯೂಸ್ ಓದಿ…ಸಿನಿಜರ್ನಿಯ ಕನಸಿರುವವರಿಗೆ ಮಾತ್ರ ಈ ನ್ಯೂಸ್….
ಯೆಸ್, ಸಿನಿಮಾ ಜಗತ್ತಿಗೆ ಕಾಲಿಡಲು ನೀವು ಉತ್ಸುಕರಾಗಿದ್ದೀರಾ? ಆ ನಿಟ್ಟಿನಲ್ಲಿ ಸತತ ಪ್ರಯತ್ನ ನಿಮ್ಮದಿದೆಯಾ? ಸಿನಿಮಾ ನಟ/ನಟಿಯಾಗಿ ಕಲಾ ಸೇವೆಯಲ್ಲಿ ತೊಡಗಿಸಿಕೊಳ್ಳುವ ಹಂಬಲ ನಿಜಕ್ಕೂ ನಿಮಗಿದೆಯಾ? ನಿಮ್ಮೊಳಗಿನ ಕಲಾವಿದ/ದೆ ‘ಯಾವಾಗಾ ಮಾರಾಯ/ಮಾರಾಯ್ತಿ ನಮ್ಮನ್ನು ಸಿನಿ ಜಗತ್ತಿಗೆ ಪರಿಚಯಿಸ್ತೀಯಾ ಅಂತ ಕೇಳ್ತಿದ್ದಾನಾ/ಳಾ?
ಹ್ಞೂಂ..ಕಣ್ರೀ…ಆದ್ರೆ, ಅವಕಾಶ ಸಿಕ್ತಿಲ್ಲ…ಒಂದೇ ಒಂದು ಚಾನ್ಸ್ ಗೆ ಕಾದು ಕಾದು ಸುಸ್ತಾಗಿದ್ದೀನಿ ಅಂತಿದ್ದೀರಾ…ಸಾಕು ಸಾಕು ಇನ್ನು ಜಾಸ್ತಿ ತಲೆ ಕೆಡಿಸಿಕೊಳ್ಬೇಡಿ…ನಿಮ್ಮ ಪ್ರತಿಭೆ ಅನಾವರಣಕ್ಕೆ, ನಿಮ್ಮ ಸಿನಿ ಜರ್ನಿ ಆರಂಭಕ್ಕೆ ಲಕ್ಷ್ಮಿ ಗಣೇಶ್ ಪ್ರೊಡಕ್ಷನ್ ಹೌಸ್ ಒಂದೊಳ್ಳೆ ಅವಕಾಶವನ್ನು ಕಲ್ಪಿಸುತ್ತಿದೆ.
ಹೌದು, ನಿಮ್ಮ ದಿ ನ್ಯೂ ಇಂಡಿಯನ್ ಟೈಮ್ಸ್ ನ ಸಹೋದರ ಸಂಸ್ಥೆ ಲಕ್ಷ್ಮಿ ಗಣೇಶ್ ಪ್ರೊಡಕ್ಷನ್ ಹೌಸ್ ಹೊಸ ಸಿನಿಮಾವೊಂದನ್ನು ನಿರ್ಮಾಣ ಮಾಡ್ತಿದೆ. ಸ್ಯಾಂಡಲ್ ವುಡ್ ನ ಜನಪ್ರಿಯ ಸ್ಟಾರ್ ಡೈರೆಕ್ಟರ್ ಒಬ್ರು ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದು, ಸದ್ಯ ಚಿತ್ರತಂಡ ‘ನಿಮ್ಮ’ ಹುಡುಕಾಟದಲ್ಲಿದೆ. ಅಂದ್ರೆ, ಹೊಸ ಮುಖಗಳನ್ನು ಹುಡುಕ್ತಿದೆ.
ನೀವು ಅವಕಾಶವನ್ನು ಎದುರು ನೋಡ್ತಿದ್ದರೆ ಕೂಡಲೇ lakshmiganeshproductionhouse@gmail.com ಮತ್ತು namocinecreations@gmail.com ಗೆ ನಿಮ್ಮ ಚಂದದ ಫೋಟೋಗಳು ಮತ್ತು ಸ್ವ ವಿವರ ಕಳುಹಿಸಿ ಕೊಡಿ. ಆದಷ್ಟು ಬೇಗ ಚಿತ್ರತಂಡದಿಂದ ನಿಮಗೊಂದು ಕರೆ ಬರುತ್ತೆ. ಆಡಿಷನ್ ಗೆ ಕರೀತಾರೆ. ಅಲ್ಲಿ ನಿಮ್ಮೊಳಗಿನ ಕಲಾ ಪ್ರತಿಭೆಯನ್ನು ಪ್ರದರ್ಶಿಸಿ ಸಿನಿ ಜರ್ನಿ ಆರಂಭಿಸಿ. ಆಲ್ ದಿ ಬೆಸ್ಟ್…
ಹ್ಞಾಂ …ಮೊದಲೇ ಹೇಳಿದ್ರೂ ಕೇಳ್ದೆ ಸಿನಿಮಾ ಕ್ಷೇತ್ರಕ್ಕೆ ಕಾಲಿಡುವ ಆಸಕ್ತಿ ಇಲ್ದೆ ಇದ್ರೂ ಕೂಡ ಈ ನ್ಯೂಸ್ ಓದಿದ್ರೆ, ನಿಮ್ ಫ್ರೆಂಡ್ಸ್ ಗೆ ಶೇರ್ ಮಾಡಿ…ಅವರ ಕನಸು ನನಸು ಮಾಡಿಕೊಳ್ಳಲು ನೀವು ದಾರಿತೋರಿದಂತಾಗುತ್ತೆ….