ಗಂಟಲಿನಲ್ಲಿ ತೆಂಗಿನ ಕಾಯಿ ಚೂರು ಸಿಲುಕಿ‌ ಶಿಕ್ಷಕಿ ಸಾವು…!

admin
By admin
1 Min Read

ಸಾವು ಹೇಗೆ ಸಂಭವಿಸುತ್ತೆ ಅಂತ ಹೇಳೋಕೆ ಆಗಲ್ಲ.‌ ಗಂಟಲಿನಲ್ಲಿ ತೆಂಗಿನ ಕಾಯಿ ಚೂರು ಸಿಲುಕಿ ಶಿಕ್ಷಕಿಯೊಬ್ಬರು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.


ನವ್ಯಶ್ರೀ (28) ಮೃತರು. ಇವರು ಚಿಕ್ಕಮಗಳೂರು ನಗರದ ಸಂಜೀವಿನಿ ಶಾಲೆಯ ಶಿಕ್ಷಕಿ. ಇವರಿಗೆ ದೇವರ ಮೇಲೆ ಅಪಾರ ಭಕ್ತಿ. ಪ್ರತಿನಿತ್ಯದಂತೆ ನಗರದಲ್ಲಿನ ಸಾಲುಮರದಮ್ಮ ದೇವಾಲಯಕ್ಕೆ ಸಹ ಶಿಕ್ಷಕಿಯರೊಡನೆ ಹೋಗಿ ಬಂದಿದ್ದಾರೆ.


ದೇವರಿಗೆ ಪೂಜೆ ಸಲ್ಲಿಸಿದ ತೆಂಗಿನ ಕಾಯಿಯನ್ನು ಚೂರು ಮಾಡಿ ಎಲ್ಲರಿಗೂ‌ ಹಂಚಿ , ತಾವೂ ತಿಂದಿದ್ದಾರೆ.‌ಆದರೆ , ಇದ್ದಕ್ಕಿದ್ದಂತೆ ಏನಾಯ್ತೋ, ಇದ್ದಕ್ಕಿದ್ದಂತೆ ಎದೆನೋವಿನಿಂದ ಬಳಲಿ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮೂಲತಃ ಚಿಕ್ಕ ಮಗಳೂರಿನ ಹಿರೇಮಗಳೂರು ನಿವಾಸಿಯಾಗಿರುವ ನವ್ಯಶ್ರೀ ಅವರಿಗೆ 5ವರ್ಷದ ಹಿಂದಷ್ಟೇ ವಿವಾಹವಾಗಿತ್ತು. ಇವರಿಗೆ 10ತಿಂಗಳ ಮಗು ಕೂಡ ಇದೆ.

 

Share This Article