ಬಿ ಎಸ್ ಯಡಿಯೂರಪ್ಪ ಕೇವಲ 55 ಗಂಟೆಗಳಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದಾರೆ. ಭಾರತ ಕಂಡ ಅತ್ಯಂತ ಅಲ್ಪಾವಧಿಯ ಮುಖ್ಯಮಂತ್ರಿಗಳಲ್ಲಿ ಇವರು ಸಹ ಒಬ್ಬರು. ಯಾರೆಲ್ಲಾ ಅತ್ಯಂತ ಕಡಿಮೆ ಸಮು ಸಿಎಂ ಸ್ಥಾನದಲ್ಲಿದ್ದರು ಎಂಬ ಪಟ್ಟಿ ಇಲ್ಲಿದೆ.
1) ಜಗದಂಬಿಕಾ ಪಾಲ್ ( ಉತ್ತರ ಪ್ರದೇಶ -ಫೆಬ್ರವರಿ 21-23( 1998) (3 ದಿನ)
2) ಬಿ ಎಸ್ ಯಡಿಯೂರಪ್ಪ (ಕರ್ನಾಟಕ -ಮೇ 17-19 (2018) (3ದಿನ)
3) ಸತೀಶ್ ಪ್ರಸಾದ್ ಸಿಂಗ್ ( ಬಿಹಾರ (ಮಧ್ಯಾಂತರ ಸಿಎಂ) ಜನವರಿ28-ಫೆಬ್ರವರಿ1(1968) (5 ದಿನ)
4) ಓಂ ಪ್ರಕಾಶ್ ಔಟಾಲ (2ನೇ ಬಾರಿ ಸಿಎಂ ಆದಾಗ , (ಹರಿಯಾಣ) ಜುಲೈ 12-17(1990) (6 ದಿನ)
5) ಬಿ ಎಸ್ ಯಡಿಯೂರಪ್ಪ ( ಕರ್ನಾಟಕ) – ಮೊದಲ ಬಾರಿ ಸಿಎಂ ಆದಾಗ .ನವೆಂಬರ್ 12-19( 2007) (7ದಿನ)
6) ನಿತೀಶ್ ಕುಮಾರ್ (ಬಿಹಾರ, ಮಾರ್ಚ್ 3-10( 2000) (8ದಿನ)
7) ಎಸ್ ಸಿ ಮಾರಕ್ ( ಮೇಘಾಲಯ – ಫೆಬ್ರವರಿ 27-ಮಾರ್ಚ್ 10 (1998) . (12 ದಿನ)
8) ಓಂ ಪ್ರಕಾಶ್ ಚೌಟಾಲ ( ಹರಿಯಾಣ -3ನೇ ಬಾರಿಗೆ ಸಿಎಂ ಆದಾಗ) , ಮಾರ್ಚ್ 21-ಏಪ್ರಿಲ್ 6(1991).(17 ದಿನ)
9) ಜಾನಕಿ ರಾಮಚಂದ್ರನ್ (ತಮಿಳುನಾಡು , ಜನವರಿ 7-30 (1998) (24 ದಿನ)
10) ಬಿಂದೇಶ್ವರ್ ಪ್ರಸಾದ್ ಮಂಡಲ್ (ಬಿಹಾರ ) ಫೆಬ್ರವರಿ 1-ಮಾರ್ಚ್ 2 (1968) (31ದಿನ)
11) ಸಿ ಎಚ್ ಮೊಹಮ್ಮದ್ ಕೋಯಾ -(ಕೇರಳ -ಅಕ್ಟೋಬರ್ 12ಡಿಸೆಂಬರ್ 1-1979) (51 ದಿನ)