ದೃಡವಾದ, ಉದ್ದನೆಯ ಕೂದಲಿಗೆ ನೀವು ಯಾವ ಹೇರ್ ಆಯಿಲ್ ಬಳಸ್ತಾ ಇದ್ದೀರಾ…? ಯಾವ ಶಾಂಪು ಬಳಸಲು ಶುರು ಮಾಡಿದ ಮೇಲೆ ನಿಮ್ಮ ಕೂದಲು ಉದುರುವುದು ನಿಂತೇ ಹೊಯ್ತು..? ನೀವು ಡ್ಯಾಂಡ್ರಫ್ ಸಮಸ್ಯೆ ನಿವಾರಣೆಗಾಗಿ ಏನ್ ಮಾಡ್ತಾ ಇದ್ದೀರಿ..! ಬೊಕ್ಕಲು ತಲೆ ನಿಮ್ಮನ್ನು ಕಾಡ್ತಾ ಇದೆಯಾ..? ಆ ಬೊಕ್ಕಲು ತಲೆ ನಿವಾರಣೆಗಾಗಿ ನೀವು ಯಾವ ಔಷಧ ಬಳಸ್ತಾ ಇದ್ದೀರಾ..? ಕೂದಲಿನ ಸಿಕ್ಕು ಕಡಿಮೆಯಾಗಿ ಕಾಂತಿಯುತ, ಪಳಪಳನೆ ಹೊಳೆಯುವ ಕೂದಲಿಗಾಗಿ ಏನೇನೆಲ್ಲಾ ಮಾಡ್ತಾ ಇದ್ದೀರ..?ಅಯ್ಯೋ ಸಾರ್ ನೀವೆಲ್ಲಾ ನಿಮ್ಮ ತಲೆ ಕೂದಲ ಸಮಸ್ಯೆಗೆ ಏನ್ ಮಾಡ್ತಾ ಇದ್ದೀರೋ.., ಬಿಡ್ತಾ ಇದ್ದೀರೋ ನಮಗೆ ಗೊತ್ತಿಲ್ಲ..! ಬಟ್, ಇನ್ಮುಂದೆ ಕೂದಲಿನ ಎಲ್ಲಾರೀತಿಯ ಸಮಸ್ಯೆಗೆ “ಕೋಕ ಕೋಲಾ” ಬಳಸಿ..!
ಏನ್ ಮುಖ ಮುಖ ನೋಡ್ತಾ ಇದ್ದೀರಾ..? ರೀ, ಕೋಕ ಕೋಲಾ ಬಳಸ್ರೀ.. ಕೋಕ ಕೋಲಾ ತಲೆಗೆ ಹಾಕಿ ಸ್ನಾನ ಮಾಡ್ರೀ..! ಹಿಂಗಂತ ದೇವ್ರಾಣೆಗೂ ನಾನ್ ಹೇಳ್ತಾ ಇಲ್ಲಪ್ಪ..! ಯಾರೋ ಒಬ್ಬಳು ಹುಡುಗಿ ಹೇಳ್ತಾ ಇದ್ದಾಳೆ..! ಹುಡುಗಿ ಹೇಳ್ತಾ ಇದ್ದಾಳೆಂದ್ರೆ ಫಾಲೋ ಮಾಡ್ದೇ ಇದ್ರೆ ಹೆಂಗ್ರೀ..!
ಈ ವೀಡೀಯೋ ನೋಡಿ, ಇಲ್ಲೊಬ್ಬಳು 2 ಬಾಟಲ್ ಕೋಕ ಕೋಲಾ ತನ್ನ ಉದ್ದನೆಯ ಕೂದಲಿಗೆ ಹಾಕಿ ಕೊಳ್ತಾ ಇದ್ದಾಳೆ..! ಆಮೇಲೆ ಅವಳೇ ಹೇಳುವಂತೆ ಅವಳ ಕೂದಲು ಸಾಫ್ಟ್ ಆಗಿದೆ ಅಂತೆ..! ಪಳಪಳ ಹೊಳೆಯುತ್ತಿದೆಯಂತೆ..! ಎಲ್ಲವೂ ಅಂತೆ ಕಂತೆ.. ಆದ್ರೂ ಯಾವ್ದಕ್ಕೂ ಒಂದ್ಸಲ ಸುಂದರ ಕೇಶಕ್ಕಾಗಿ ಕೋಕ್ ಉಪಯೋಗಿಸಿ..! ಫಸ್ಟ್ ಈ ವೀಡಿಯೋ ನೋಡಿ, ಆಮೇಲೆ ಅವಳು ಬಳಸಿದಂತೆ ನೀವು ಕೋಕ್ ಬಳಸುವುದಾದ್ರೆ ಬಳಸಿ..! ಕೂದಲಿಗೆ ಕೋಕ್ ಬಳಸಿ ಒಳ್ಳೆಯದಾದ್ರೂ ಆ ಕ್ರೆಡಿಟ್ ನಮಗೆ ಬೇಡ..! ಕೆಟ್ಟದಾದ್ರೆ ನಾವಂತೂ ಜವಬ್ದಾರರಲ್ಲ..! ತಮಾಷೆಗಾಗಿ ಈ ವೀಡಿಯೋ ನೋಡಿ ಬಿಡಿ..!
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com