ಇಂಗ್ಲೆಂಡ್ ವಿರುದ್ದದ ಟೆಸ್ಟ್ ಪಂದ್ಯಾವಳಿ ಮುಗಿದ ನಂತರ ಈಗ ಟಿಂ ಇಂಡಿಯಾ ಆಟಗಾರರು ಕುಟುಂಬಸ್ಥರ ಜೊತೆ ಕಾಲ ಕಳಿತಾ ಇದಾರೆ. ಮಾಲ್, ಹೋಟೆಲ್, ಪ್ರವಾಸಿ ತಾಣ ಅಂತ ಸಖತ್ ಎಂಜಾಯ್ ಮಾಡ್ತಾ ಇದಾರೆ. ಅದರಲ್ಲಿ ಮಹಮ್ಮದ್ ಶಮಿ ಏನು ಹೊರತಾಗಿಲ್ಲ. ಆದ್ರೆ ವಿಷಯ ಅದಲ್ಲ. ಮಹಮ್ಮದ್ ಶಮಿ ಅವರ ಪತ್ನಿಯ ಡ್ರೆಸ್ ಕುರಿತು..! ಹೌದು ಟಿಂ ಇಂಡಿಯಾದ ವೇಗದ ಬೌಲರ್ ಮಹಮ್ಮದ್ ಶಮಿ ಕಳೆದ ಕೆಲವು ದಿನಗಳ ಹಿಂದೆ ತನ್ನ ಪತ್ನಿಯೊಂದಿಗೆ ತೆಗೆಸಿಕೊಂಡ ಫೋಟೋವನ್ನು ಫೇಸ್‍ಬುಕ್‍ಗೆ ಅಪ್ಲೋಡ್ ಮಾಡಿದ್ರು. ಆದ್ರೆ ಕೆಲವು ಸಂಪ್ರದಾಯವಾದಿಗಳು ಶಮಿ ಪತ್ನಿ ಧರಿಸಿದ್ದ ಡ್ರೆಸ್ ಬಗ್ಗೆ ಟೀಕೆ ಮಾಡಿದ್ದಾರೆ. ಶಮಿ ಓರ್ವ ಮುಸ್ಲೀಂ ಧರ್ಮನವನಾಗಿದ್ದು, ಮುಸ್ಲೀಂ ಹೆಣ್ಣು ಮಕ್ಕಳು ಮೈ ತುಂಬಾ ಬಟ್ಟೆ ತೊಡಬೇಕು. ಅಷ್ಟೆ ಅಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಅರೆಬರೆ ಉಡುಗೆ ತೊಡಬಾರದು ಎಂದು ಟೀಕಾಪ್ರಹಾರ ಮಾಡಿದ್ದಾರೆ.
ಆದರೆ ಇದಕ್ಕೆಲ್ಲಾ ಕ್ಯಾರೆ ಎನ್ನದ ಶಮಿ ತಮ್ಮ ಮಾತಿನ ವರಸೆಯಿಂದಲೆ ಸಖತ್ ಟಾಂಗ್ ಕೊಟ್ಟಿದ್ದಾರೆ. ಇದು ನನ್ನ ಜೀವನದ ವಿಷಯ. ಅದಕ್ಕೆ ಬೇರೆಯವರ್ಯಾರೂ ಮೂಗು ತೂರಿಸುವ ಅಗತ್ಯ ಇಲ್ಲ. ಯಾವುದು ಸರಿ ಯಾವುದು ತಪ್ಪು ಎಂಬುದರ ಬಗ್ಗೆ ನನಗೂ ಚೆನ್ನಾಗಿಯೇ ತಿಳಿದಿದೆ. ನಾವೆಷ್ಟು ಒಳ್ಳೆಯವರೆಂಬುದು ಮೊದಲು ನಮ್ಮ ಅಂತರಾಳವನ್ನು ಕೇಳಿಕೊಳ್ಳಬೇಕು ಎಂದಿದ್ದಾರೆ. ಶಮಿ ಅವರ ಮಾತಿಗೆ ಬೆಂಬಲ ನೀಡಿದ ಟೀಂ ಇಂಡಿಯಾದ ಇನ್ನೋರ್ವ ಆಟಗಾರ ಮಹಮ್ಮದ್ ಕೈಫ್, ಧರ್ಮವಾದಿಗಳ ಕಮೆಂಟ್‍ಗೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಇಂತಹ ಕಾಮೆಂಟ್ ನಿಜಕ್ಕೂ ನಾಚಿಕೆ ತರುವಂತಹದ್ದು, ದೇಶದಲ್ಲಿ ಮಾಡೋಕೆ ಇನ್ನು ತುಂಬಾ ಕೆಲಸ ಇದೆ. ಅದರ ಬಗ್ಗೆ ಮೊದಲು ಗಮನ ಹರಿಸಿ ಎಂದು ಕೈಫ್ ಖಾರವಾಗಿ ನುಡಿದಿದ್ದಾರೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಬೇನಾಮಿ ಆಸ್ತಿ ಹೊಂದಿರುವರ ಮೇಲಿದೆ ಮೋದಿಯ ಹದ್ದಿನ ಕಣ್ಣು..!
ಆಧಾರ್ ಪೇಮೆಂಟ್ ಆ್ಯಪ್ ಬಳಸೋದಾದ್ರೂ ಹೇಗೆ..?
ಎಚ್ಚರ..! ಚೆಕ್ ಬೌನ್ಸ್ ಆದ್ರೆ ಅದು ಜಾಮೀನು ರಹಿತ ಅಪರಾಧ..!
ಕನ್ನಡಿಗರಿಗಿಲ್ಲಿದೆ ಶುಭ ಸುದ್ದಿ: ಖಾಸಗಿ ವಲಯದಲ್ಲಿ ಕನ್ನಡಿಗರಿಗೂ ಮೀಸಲಾತಿ
25 ಪೈಸೆಯಿಂದ ಲಕ್ಷಾಧಿಪತಿಯಾದ್ರು..! ಹೇಗೆ ಗೊತ್ತಾ..?