ಬೆಂಗಳೂರು : ಪ್ರತಿಭಟನೆ ಮಾಡುವುದು ನಮ್ಮ ಹಕ್ಕು. ಆದರೆ ನಮ್ಮವರನ್ನು ಬಂಧಿಸಿದ್ದಾರೆ. ನಮ್ಮ ನಾಯಕರು ಯಾವ ತಪ್ಪು ಮಾಡಿಲ್ಲ.
ಬಿಜೆಪಿಯರು ತುರ್ತು ಪರಿಸ್ಥಿತಿಗಿಂತ ದೊಡ್ಡ ವಿಚಾರ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಇಡಿಗೆ ಕರೆದುಕೊಂಡು ಹೋಗಿದ್ದಾಗ ನ್ಯಾಷನಲ್ ಕಾಲೇಜಿನಿಂದ ಫ್ರೀಡಂ ಪಾರ್ಕ್ ವರೆಗೂ ರ್ಯಾಲಿ ಮಾಡಿದ್ದರು. ಯಾರಾದರೂ ಗಲಾಟೆ ಮಾಡಿದ್ದರಾ? ಅವರು ನೋವು, ದುಃಖ ದುಮ್ಮಾನ ಹೇಳಿಕೊಂಡರು. ದೇಶದ ಉದ್ದಗಲಕ್ಕೂ ನಮ್ಮ ನಾಯಕರು ತಮ್ಮ ನೋವು ವ್ಯಕ್ತಪಡಿಸಿದ್ದಾರೆ. ಆದರೆ ಪ್ರತಿಭಟನೆ ಮಾಡಬಾರದು ಎಂದರೆ ಹೇಗೆ ಎಂದರು.