ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿಯಿಂದ ದ್ರೋಹವಾಗಿದೆ

Date:

ಮಂಡ್ಯ ಜಿಲ್ಲೆಗೆ ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿಯಿಂದ ದ್ರೋಹವಾಗಿದೆ ಎಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿಕಾರಿದ್ದಾರೆ. ಮಂಡ್ಯದಲ್ಲಿ ಮಾತ್ನಾಡಿದ ಅವರು, ಬಿಜೆಪಿ ಜೊತೆ ಸೇರಿ ಚಲುವರಾಯಸ್ವಾಮಿ ಮಂಡ್ಯ ವ್ಯವಸ್ಥೆಗಳನ್ನ ಹಾಳು ಮಾಡಿದ್ದಾರೆ. ಮಂಡ್ಯ ಜಿಲ್ಲೆಗೆ ಕುಮಾರಸ್ವಾಮಿ 9 ಸಾವಿರ ಕೋಟಿ ರೂ. ಕೊಟ್ರು. ಆ ಅನುದಾನ ವಾಪಸ್ ಹೋಗಲಿಕ್ಕೆ ಚಲುವರಾಯಸ್ವಾಮಿ ಕಾರಣ. ಬಿಜೆಪಿ ಜೊತೆ ಸೇರಿ ವ್ಯವಸ್ಥೆಗಳನ್ನ ಹಾಳು ಮಾಡಿದ್ದು ಇವರೇ ಎಂದು ಟೀಕಿಸಿದ್ರು. ಕುಮಾರಸ್ವಾಮಿ ಸುಳ್ಳುಗಾರ ಎಂಬ ಚಲುವರಾಯಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ರವೀಂದ್ರ ಶ್ರೀಕಂಠಯ್ಯ, ಬಡವರ ಕಷ್ಟ ಕೇಳಿ, ರೈತರ ಸಾಲಮನ್ನಾ ಮಾಡ್ತಾರೆ, ನಿಜ ಅವರು ಸುಳ್ಳುಗಾರ.
ಆದ್ರೆ, ಟವಲ್ ಹಾಕೊಂಡು ಪ್ರಮಾಣ ವಚನ ತಗೊಂಡವರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ್ರು.
ಮಂಡ್ಯ ಕೆಡಿಪಿ ಸಭೆ ವಿಳಂಬ, ಅಭಿವೃದ್ಧಿ ಕೆಲಸಗಳು ಕುಂಠಿತವಾಗ್ತಿರುವ ಬಗ್ಗೆ ಮಾತ್ನಾಡಿದ ಅವರು,
ಉಸ್ತುವಾರಿ ಸಚಿವ ಹಾಗೂ KC ನಾರಾಯಣಗೌಡ ಇಬ್ಬರೂ ಸಚಿವರು ಕೆ.ಆರ್.ಪೇಟೆಗೆ ಸೀಮಿತವಾಗಿದ್ದಾರೆ. ಅವರಿಗೆ K.R.ಪೇಟೆ ಒಂದೇ ಮಂಡ್ಯ ಜಿಲ್ಲೆಯಾಗಿದೆ. K.R.ಪೇಟೆಯಿಂದ ಹೊರ ಬರಲು ಅವರಿಗೆ ಸಾಧ್ಯವಾಗ್ತಿಲ್ಲ. ಮಂಡ್ಯ ಜಿಲ್ಲೆ ಸಮಗ್ರ ಅಭಿವೃದ್ಧಿ ಆಗುವುದು ಅವರಲ್ಲಿ ಕಾಣ್ತಿಲ್ಲ‌ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.

Share post:

Subscribe

spot_imgspot_img

Popular

More like this
Related

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...

ರಸ್ತೆ ಗುಂಡಿಗಳಿಂದ ಕಾಂಗ್ರೆಸ್ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ: ಸಚಿವ ರಾಮಲಿಂಗಾರೆಡ್ಡಿ

ರಸ್ತೆ ಗುಂಡಿಗಳಿಂದ ಕಾಂಗ್ರೆಸ್ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ: ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರು:...