ತಾಮ್ರವನ್ನು ಪ್ರಕೃತಿಯಲ್ಲಿರೋ ಒಲಿಗೋ ಡ್ಯಾನಾಮಿಕ್ (ಬ್ಯಾಕ್ಟೀರಿಯಾ ನಿರ್ಮೂಲನಕಾರಿ)ಎಂದೇ ಕರೆಯಲಾಗುತ್ತದೆ.ತಾಮ್ರದ ಪಾತ್ರೆಯಲ್ಲಿಟ್ಟ ನೀರನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಅನೇಕ ಲಾಭವಿದೆ ಎಂಬುದು ಹಲವಾರು ವೈದ್ಯಕೀಯ ಅಧ್ಯಯನಗಳಿಂದ,ನಮಗೆ ಸಾಬೀತಾಗಿರೋ ವಿಷಯವಾಗಿದೆ.ಆಯುರ್ವೆದಿಕ್ ಪದ್ಧತಿಯೂ ಸಹಾ ಸುಮಾರು 8 ಘಂಟೆಗೂ ಹೆಚ್ಚಾಗಿ ತಾಮ್ರದ ಪಾತ್ರೆಯಲ್ಲಿ ತುಂಬಿಸಿಟ್ಟ ನೀರಿನ ಸೇವನೆಯಿಂದ ಅನೇಕ ರೋಗಗಳನ್ನು ತಡೆಗಟ್ಟಬಹುದು ಎಂದು ಹೇಳುತ್ತದೆ.ಆಯುರ್ವೇದಿಕ್ ತಜ್ಝರಾದ ಡಾ! ಬಿ.ಎಸ್.ರಾಥೋರ್ ಹೇಳುವಂತೆ ನಮಗೆ ಇವುಗಳ ಕುರಿತು ಈ ಮಾಹಿತಿಗಳು ಲಭ್ಯವಾಗಿದೆ.
1.ಆರೋಗ್ಯ ಪೂರ್ಣ ಚರ್ಮ
ದಿನ ನಿತ್ಯವೂ ನೀವು ರಾತ್ರಿ ಪೂರ್ತಿ ತಾಮ್ರದ ಪಾತ್ರದಲ್ಲಿ ನೀರಿಟ್ಟು ಬೆಳಗ್ಗೆ ಸೇವಿಸಿದಲ್ಲಿ, ನೀವು ಆರೋಗ್ಯ ಪೂರ್ಣ ಚರ್ಮ ಹೊಂದುವುದಲ್ಲದೆ ಚರ್ಮದ ಕಾಂತಿಯನ್ನು ಪಡೆಯುತ್ತೀರಿ.
2.ಥೈರಾಯ್ಡ್ ನಿಂದ ರಕ್ಷಣೆ
ತಾಮ್ರದಲ್ಲಿರುವ ಲೋಹೀಯ ಗುಣದಿಂದ ಥೈರೋಕ್ಸಿನ್ ಹಾರ್ಮೋನು ಸಮಪ್ರಮಾಣದಲ್ಲಿರುತ್ತದೆ.ಇದರಿಂದ ಥೈರಾಯ್ಡ್ ಅಪಾಯ ತಪ್ಪುತ್ತದೆ.
3.ಗಂಟು ನೋವು ಪರಿಹಾರ
ತಾಮ್ರದ ಪಾತ್ರೆಯಿಂದ ಸೇವಿಸುವ ನೀರಿನಿಂದ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಯೂರಿಕ್ ಆಸಿಡ್ ಪ್ರಮಾಣ ಕಡಿಮೆಯಾಗುತ್ತದೆ,ನಮ್ಮ ಗಂಟುನೋವಿಗೆ ಉತ್ತಮ ಪರಿಹಾರ ದೊರಕುತ್ತದೆ.
4.ಜೀರ್ಣ ಕ್ರಿಯೆ ಉತ್ತಮಗೊಳ್ಳುತ್ತದೆ.
ತಾಮ್ರದ ಪಾತ್ರೆಯಲ್ಲಿ ಸುಮಾರು 8 ಘಂಟೆಗೂ ಅಧಿಕ ಹೊತ್ತು ತುಂಬಿಟ್ಟ ನೀರಿನಿಂದ ಅಸಿಡಿಟಿ ದೂರವಾಗಿ ಜೀರ್ಣ ಕ್ರಿಯೆ ಉತ್ತಮಗೊಳ್ಳುತ್ತದೆ.
5.ಅನೀಮಿಯಾ(ರಕ್ತದ ಕೊರತೆ)ನಿವಾರಣೆ
ತಾಮ್ರದ ಲೋಹೀಯ ಗುಣದಿಂದ ರಕ್ತದ ಕೊರತೆ ನಿವಾರಣೆಯಾಗುತ್ತದೆ.
6.ಹೃದಯಕ್ಕೂ ಉತ್ತಮ
ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಟ್ಟು ನಮ್ಮ ಹೃದಯಕ್ಕೆ ಸಂಪೂರ್ಣ ಆರೋಗ್ಯ ನೀಡುತ್ತದೆ.
7.ಕ್ಯಾನ್ಸರ್ ನಿಂದ ಮುಕ್ತಿ
ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವ ಆಂಟಿ ಓಕ್ಸಿಡೆಂಟ್ಸ್ ನಮಗೆ ಕ್ಯಾನ್ಸರ್ ವಿರುದ್ದ ಹೋರಾಡಲು ಸಹಾಯ ಮಾಡುತ್ತದೆ.
8.ಡಯಾರಿಯಾ,ಕಾಮಾಲೆ ಹಾಗೂ ಇನ್ನಿತರ ರೋಗಗಳ ವಿರುದ್ಧ ರಕ್ಷಣೆ
ತಾಮ್ರದಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಗುಣದಿಂದ,ನೀರಿನಲ್ಲಿರೋ ಅನೇಕ ಬ್ಯಾಕ್ಟೀರಿಯಾವನ್ನು ನಿವಾರಿಸಿ,ಡಯಾರಿಯಾ,ಕಾಮಾಲೆ ಹಾಗೂ ಇನ್ನಿತರ ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ.
9.ದೇಹಕ್ಕೆ ಬರಬಹುದಾದ ಬೊಜ್ಜನ್ನು ತಡೆಗಟ್ಟುತ್ತದೆ.
ಶರೀರದ ಬೊಜ್ಜು ತಡೆಗಟ್ಟುವುದಲ್ಲದೆ,ಇದರಿಂದ ನಮ್ಮ ದೇಹದ ತೂಕವನ್ನು ನಿಯಂತ್ರಣದಲ್ಲಿಡುತ್ತದೆ.
10.ವಯಸ್ಸನ್ನು ಮರೆಮಾಚುತ್ತದೆ.
ತಾಮ್ರದ ಪಾತ್ರೆಯಲ್ಲಿ ನೀರಿನ ಸೇವನೆಯಿಂದ ವಯೋಮಿತಿಗನುಗುಣವಾಗಿ ಚರ್ಮದಲ್ಲುಂಟಾಗುವ ನೆರಿಗೆ,ಸುಕ್ಕುಗಳನ್ನು ನಿವಾರಿಸಿ,ಚರ್ಮದಲ್ಲಿ ಸತ್ತುಹೋಗಿರೋ ಅಂಗಾಂಶಗಳನ್ನು ಮತ್ತೆ ಜೀವಂತವಾಗಿಸುತ್ತಲ್ಲದೆ,ವಯಸ್ಸನ್ನು ಮರೆಮಾಚುತ್ತದೆ.
- ಸ್ವರ್ಣಲತ ಭಟ್
POPULAR STORIES :
ಪತಂಜಲಿಯ ಸಿ.ಇ.ಒ ಆಚಾರ್ಯ ಬಾಲಕೃಷ್ಣ , ಈಗ ದೇಶದ ಅತ್ಯಂತ ಶ್ರೀಮಂತರಲ್ಲಿ ಒಬ್ಬರು..!
ಸಿರಿಯಾ ದೇಶದ ಮಹಿಳೆಯರನ್ನು ಲೈಂಗಿಕ ಗುಲಾಮಗಿರಿಯಿಂದ ರಕ್ಷಿಸಲು ಪಣ ತೊಟ್ಟು ನಿಂತ ದಿಟ್ಟ ಮಹಿಳೆ.
ಬಿಎಸ್‍ಎನ್‍ಎಲ್ ಜೊತೆ ಜಿಯೋ ಒಪ್ಪಂದ…!
ಬಂದ್ ಎಫೆಕ್ಟ್: ರಾಜ್ಯಕ್ಕೆ ಇಪ್ಪತ್ತೈದು ಸಾವಿರ ಕೋಟಿ ಲಾಸ್..!
ಪ್ಯಾರಾಲಿಂಪಿಕ್‍ನಲ್ಲಿ ಭಾರತಕ್ಕೆ ಬೆಳ್ಳಿಯ ಬೆಳಕು ನೀಡಿದ ದೀಪಾ..
ಸೀದಾ ಮನೆಗೆ ಬಂದ ನಾನು ನಡೆದ ಘಟನೆಯನ್ನೆಲ್ಲಾ ನನ್ನ ಮಗನ ಬಳಿ ಹೇಳಿಕೊಂಡೆ..