ಪೊಲೀಸರೇ ವಿದ್ಯಾರ್ಥಿಗಳ ಮೊಬೈಲ್ ಕದ್ದರು..!!

Date:

ಕಳೆದ ಕೆಲವು ತಿಂಗಳುಗಳಿಂದ ದೆಹಲಿ ವಿಶ್ವವಿದ್ಯಾನಿಲಯಗಳಲ್ಲಿ ಮೊಬೈಲ್ ಕಳ್ಳರ ಸಂಖ್ಯೆ ಹೆಚ್ಚಾಗಿದೆ. ಯಾರೋ ಓರ್ವ ಅಪರಿಚಿತ ವ್ಯಕ್ತಿ ನಿಮಗೆ ಅರಿವಿಗೆ ಬಾರದ ರೀತಿಯಲ್ಲಿ ಮೊಬೈಲ್ ಕಳ್ಳತನ ಮಾಡಿರುವ ಹಲವಾರು ಪ್ರಕರಣಗಳು ದೆಹಲಿ ಪೊಲೀಸರಿಗೆ ವರದಿಯಾಗಿದೆ.
ಸಭ್ಯರಂತೆ ಉಡುಪನ್ನು ಧರಿಸಿ ಕ್ಯಾಂಪಸ್ ಒಳಗೆ ಬರುವ ಓರ್ವ ಯುವತಿ ತನ್ನ ಮೊಬೈಲ್‍ನಲ್ಲಿ ಕರೆನ್ಸಿ ಖಾಲಿಯಾಗಿದೆ, ಸ್ವಿಚ್ ಆಫ್ ಎಂದೇಳಿ ಸ್ವಲ್ಪ ಪ್ರಾಬ್ಲಮ್ ಆಗಿದೆ ಒಂದು ಕಾಲ್ ಮಾಡ್ಬೋದಾ…? ಎಂದು ವಿಧ್ಯಾರ್ಥಿಗಳನ್ನು ಯಾಮಾರಿಸುವ ಇವರು ಬೇರೆಯವರಿಗೆ ಕರೆ ಮಾಡುವ ನಾಟಕವಾಡಿ ತಮ್ಮ ವಾಹನದಿಂದ ಪರಾರಿಯಾಗುತ್ತಾರೆ.. ಇತ್ತ ವಿದ್ಯಾರ್ಥಿಗಳು ಸಹಾಯ ಮಾಡಿದಕ್ಕಾಗಿ ತಮ್ಮ ಮೊಬೈಲ್ ಕಳೆದುಕೊಂಡು ಕಣ್ಣು ಬಾಯಿ ಬಿಟ್ಟು ನೋಡ್ತಾ ಇರ್ತಾರೆ..! ಆದ್ರೆ ಈ ಎಲ್ಲಾ ಕಥರ್‍ನಾಕ್ ಕೆಲ್ಸ ಕೇವಲ ಒಂದು ಹೆಣ್ಣು ಮಾಡುತ್ತಾಳಾ..? ಅಂತ ಕನ್ಪ್ಯೂಸ್ ಆಗ್ಬೇಡಿ.. ಈಕೆಗೆ ಪುರುಷರ ದೊಡ್ಡ ಗ್ಯಾಂಗೆ ಸಪೋರ್ಟ್ ಮಾಡ್ತಾ ಇದೆ. ಈ ಒಂದು ಘಟನೆಯ ಬಗ್ಗೆ ತಿಳಿದುಕೊಂಡ ದೆಹಲಿ ಪೊಲೀಸರು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಯಾರಿಗೂ ಗೊತ್ತಾಗದಿರಲಿ ಎಂದು ಸಿವಿಲ್ ಡ್ರಸ್‍ನಲ್ಲಿ ಬಂದು ವಿದ್ಯಾರ್ಥಿಗಳ ಮೊಬೈಲ್ ಕೇಳಿದ್ದಾರೆ.. ಹೆಡ್ ಕಾನ್ಸ್ಟೆಬಲ್ ವಿರೇಂದರ್ ಸಿಂಗ್ ಮತ್ತು ಗುರ್‍ದೀಪ್ ಕೌರ್ ಜೊತೆಯಲ್ಲಿ ಬಂದ ಸಬ್‍ಇನ್ಸ್ ಪೆಕ್ಟರ್ ಕ್ಯಾಂಪಸ್ ಒಳಗೆ ವಿದ್ಯಾರ್ಥಿಗಳ ಚಲನಾವಲನಗಳನ್ನು ಗಮನಿಸಿದ್ದಾರೆ. ತಮ್ಮ ವಾಹನವನ್ನು ಪಕ್ಕದ ಮೆಟ್ರೋ ಸ್ಟೇಷನ್ ಬಳಿ ಪಾರ್ಕ್ ಮಾಡಿ ವಿದ್ಯಾರ್ಥಿಗಳ ಬಳಿ ಬಂದು ನನ್ನ ಮೊಬೈಲ್ ಸ್ವಿಚ್ ಆಫ್ ಆಗಿದೆ ನಿಮ್ಮ ಮೊಬೈಲ್ ಸ್ವಲ್ಪ ಕೊಡ್ತೀರಾ ಎಂದು ಕೇಳಿದ್ದಾರೆ..! ಆಶ್ಚರ್ಯ ಅಂದ್ರೆ ತಮ್ಮ ಕ್ಯಾಂಪಸ್‍ನಲ್ಲಿ ಇದೇ ರೀತಿಯ ಪ್ರಕರಣಗಳ ಕುರಿತಾಗಿ ತಿಳಿದಿದ್ದರೂ ಕೂಡ ಅದರ ಅರಿವೇ ಇಲ್ಲದೇ ಮತ್ತೆ ತಮ್ಮ ಮೊಬೈಲ್‍ಗಳನ್ನು ಅಪರಿಚಿತರು ಎಂದು ತಿಳಿದಿದ್ದ ಪೊಲೀಸರಿಗೆ ನೀಡಿದ್ದಾರೆ.. ಮೊಬೈಲ್ ಪಡೆದ ಪೊಲೀಸರು ಅಲ್ಲಿಂದ ಕಾಲ್ಕಿತ್ತಿದ್ದಾರೆ.! ಮೊಬೈಲ್ ಕಳೆದುಕೊಂಡು ಮುಂದೇನೂ ತೋಚದಂತಾದ ವಿದ್ಯಾರ್ಥಿಗಳಲ್ಲಿ ದಿವ್ಯ ಕುಮಾರಿ ಎಂಬ ವಿದ್ಯಾರ್ಥಿನಿಯೂ ಕೂಡ ಒಬ್ಬರು.. ಇವರಿಗೆ ಸಹಾಯ ನೀಡುವ ನೆಪದಲ್ಲಿ ಬಂದ ಪೊಲೀಸ್ ಹೆಡ್ ಕಾನ್ಸ್ಟಬಲ್ ನರೇಶ್ ಕುಮಾರ್ ಕಾರನ್ನು ಹಿಂಬಾಲಿಸಿಕೊಂಡು ಹೋಗಿ ಅವರನ್ನು ಹಿಡಿಯುವಂತೆ ನಾಟಕವಾಡಿದ್ದಾರೆ.. ಆ ನಂತರ ಮೊಬೈಲ್ ಪಡೆದು ಅಲ್ಲಿಂದ ಪರಾರಿಯಾವರು ಪೊಲೀಸರು ಎಂದು ಹೇಳಿ ವಿದ್ಯಾರ್ಥಿಗಳಿಗೆ ಅಪರಿಚಿತ ವ್ಯಕ್ತಿಗಳಿಗೆ ಮೊಬೈಲ್ ಕೊಡೋಕು ಮುನ್ನ ಎಚ್ಚರದಿಂದಿರಿ ಎಂದು ಜಾಗೃತಿ ಮೂಡಿಸಿದ್ದಾರೆ. ಕ್ಯಾಂಪಸ್‍ಗಳಲ್ಲಿ ಮಾತ್ರವಲ್ಲದೇ ಹೊರವಲಯದಲ್ಲಿ ಆಟೋ ರಿಕ್ಷಾದಲ್ಲಿ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೂ ಮೊಬೈಲ್ ಬಗ್ಗೆ ಎಚ್ಚರವಿರಲಿ ಎಂಬ ಸಂದೇಶವನ್ನು ಅಲ್ಲಿನ ಮಹಳಾ ಪೊಲೀಸ್ ಅಧಿಕಾರಿ ಆರತಿ ಶರ್ಮಾ ಹೇಳಿದ್ದಾರೆ. ವಿದ್ಯಾರ್ಥಿಗಳು ಆಟೋ ರಿಕ್ಷಾದಲ್ಲಿ ಅಥವಾ ದಾರಿ ಮಧ್ಯೆ ಮೊಬೈಲ್‍ನಲ್ಲಿ ಮಾತನಾಡುವ ಸಂದರ್ಭದಲ್ಲಿ ಅದನ್ನು ಸುಲಭವಾಗಿ ಕಿತ್ತುಕೊಳ್ಳುತ್ತಾರೆ.. ಅದಕ್ಕೆ ನೀವು ಎಡೆಮಾಡಿ ಕೊಡದೇ ಜೋಪಾನವಾಗಿ ಕಾಪಾಡಿಕೊಳ್ಳಿ ಎಂಬ ಸಂದೆಶವನ್ನು ನೀಡಿದ್ದಾರೆ. ಇದೇ ರೀತಿ ವಿದ್ಯಾರ್ಥಿಗಳು ಮೊಬೈಲ್ ಕಳೆದುಕೊಂಡು ಕಂಪ್ಲೆಂಟ್ ಕೊಟ್ಟ ಹಲವಾರು ನಿದರ್ಶನಗಳಿದ್ದು ಈ ಕುರಿತು ಎಚ್ಚರದಿಂದಿರಿ ಎಂದಿದ್ದಾರೆ..

Like us on Facebook  The New India Times

POPULAR  STORIES :

ಇಲಿಗಳ ದಾಳಿಗೆ ನವಜಾತ ಶಿಶು ಬಲಿ..!

ವಿಶ್ವದಲ್ಲೇ ಅತೀ ಹೆಚ್ಚು ಸಂಬಳ ಪಡೆಯುವ ಪ್ರಧಾನಿ ಯಾರು ಗೊತ್ತಾ..?

ಹೌದು ಸ್ವಾಮಿ.. ಪ್ರಥಮ್‍ಗೆ ಬಿಗ್‍ಬಾಸ್ ಕರ್ದೇ ಇರ್ಲಿಲ್ವಂತೆ..!

ಹತ್ತು ರೂ ಜಗಳಕ್ಕೆ ಏಳು ವರ್ಷ ಸಜೆ..!

ಪ್ರಧಾನಿ ಅಂಗಳಕ್ಕೆ ತಲುಪಿದ ಜಗನ್-ಚಂದ್ರಬಾಬು ಬ್ಲಾಕ್‍ಮನಿ ಫೈಟ್..!

ಇನ್ನು ಕ್ರಿಕೆಟ್ ಮೈದಾನದಲ್ಲಿ 14 ಜನ ಫೀಲ್ಡರ್..!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...