ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಿ ಅಂತಾ ದೊಡ್ಡೋರ್ ಮಾತು ವಾಡಿಕೆಯಂತೆ ಸತ್ಯಾನೇ ಬಿಡಿ, ಆದರೆ ಇಲ್ಲೊಂದು ಜೋಡಿ ನಾವು ನೇತಾಡ್ಕೊಂಡೇ ಮದ್ವೆ ಆಗ್ತೀವಿ ಏನ್ ಮಾಡ್ಕೊಳ್ತಿರಾ ಮಾಡ್ಕೋಳಿ ಅಂತ ವಿಭಿನ್ನ ಶೈಲಿಯಲ್ಲಿ ಮದ್ವೆ ಮಾಡ್ಕೊಂಡಿದಾರೆ…! ಕಳೆದ ತಿಂಗಳಿಂದೆ ಇಬ್ಬರು ದಂಪತಿಗಳು ಸರಳವಾಗಿ ವಿವಾಹವಾಗಿ ತಮ್ಮ ಊರಿನ ರೈತರಿಗೆ ಗ್ರಥಾಲಯಗಳಿಗೆ ಸಹಾಯ ಮಾಡಿ ಮಾದರಿ ದಂಪತಿ ಎಂದನಿಸಿಕೊಂಡಿರೋದು ನಿಮಗೆ ತಿಳಿದೇ ಇದೆ ಈಗ ಮತ್ತೊಂದು ದಂಪತಿ ಈ ಸಾಧನೆಗೆ ಕೈ ಹಾಕಿದ್ದಾರೆ. ಆದರೆ ಇಲ್ಲಿ ರೈತರಿಗೆ ಹಳ್ಳಿಗಳಿಗೆ ಸಹಾಯ ಮಾಡುವದಲ್ಲ, ಬದಲಿಗೆ ಸಾಹಸ ಕ್ರೀಡೆಗಳಿಗೆ ಜಾಗೃತಿ ಮೂಡಿಸಲು ತಮ್ಮ ವಿವಾಹವನ್ನು ಸುಮಾರು 600 ಅಡಿ ಎತ್ತರದಲ್ಲಿ ಹಗ್ಗದಲ್ಲಿ ನೇತಾಡುತ್ತಲೇ ಮದುವೆಯಾಗಿದ್ದಾರೆ.
ಪರ್ವಾತಾರೋಹಿ ಜಾಧವ್ ಹಾಗೂ ಐಎಎಸ್ ಆಕಾಕ್ಷಿಯಾದ ರೇಷ್ಮಾ ಪಾಟೀಲ್ ಅವರು ಕೋಲ್ಹಾಪುರದ ಕಣಿವೆಯೊಂದರ ಮೇಲೆ ಸುಮಾರು 600 ಅಡಿ ಎತ್ತರದಲ್ಲಿ ಹಗ್ಗದಲ್ಲೇ ನೇತಾಡುತ್ತಾ ರೂಢೀಗತ ವಿಧಿವಿಧಾನದೊಂದಿಗೆ ವಿವಾಹವಾಗಿ ಸಾಹಸ ಮೆರೆದಿದ್ದಾರೆ.
ಇವರು ಈ ರೀತಿ ಯಾಕೆ ಮದುವೆ ಆದ್ರು ಅಂತಿರಾ..? ಭಾರತದಲ್ಲಿ ಸಾಹಸ ಕ್ರೀಡೆಗಳಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ರೀತಿಯ ವಿಭಿನ್ನ ಮದುವೆಗೆ ಕೈ ಜೋಡಿಸಿದ್ದಾರೆ. ಇದಕ್ಕೆ ಸಾಥ್ ನಿಡಿದ್ದು ಮೆಂಟರ್ ಪಶ್ಚಿಮ ಘಟ್ಟ ಕ್ರೀಡೆಗಳ ಅಧ್ಯಕ್ಷ ವಿನೋದ್ ಕಾಂಬೋಜ್.
ವಿಶಾಲ್‍ಗಢ್ ಮತ್ತು ಪನ್ಹಾಲಾ ಬೆಟ್ಟಗಳ ನಡುವಿನ ಕಣಿವೆಯ ಮೇಲೆ ಮಹರಾಷ್ಟ್ರದ ಸಾಂಪ್ರದಾಯಿಕ ವಸ್ತ್ರವನ್ನು ಧರಿಸಿ , ನೈಲಾನ್ ಹಗ್ಗವನ್ನು ಸೊಂಟಕ್ಕೆ ಕಟ್ಟಿಕೊಂಡು ಮುಹೂರ್ತಕ್ಕೆ ಸರಿಯಾಗಿ 600 ಅಡಿ ಎತ್ತರಕ್ಕೆ ಏರಿದರು. ಈ ವಿವಾಹ ಕಾರ್ಯ ನೆರವೇರಿಸಲು 35 ವರ್ಷದ ಪುರೋಹಿತರೂ ನೇತಾಡುತ್ತಲೇ ಮಂತ್ರ ಫಟನೆ ಮಾಡಿದ್ದು ವಿಷೇಶವಾಗಿತ್ತು ನೋಡಿ.
ಎಲ್ಲೆಡೆ ಆಶಿರ್ವಾದಿಸುವ ಕೈಗಳು ಮೇಲಿದ್ದರೆ. ಇಲ್ಲಿ ಹೊಸ ದಂಪತಿಗಳನ್ನು ಆಶಿರ್ವಾದಿಸಲು ಎಲ್ಲರೂ ತಲೆ ಎತ್ತಿ ನೋಡಬೇಕಾಯಿತು. ಇವರ ಈ ವಿಭಿನ್ನ ವಿವಾಹಕ್ಕೆ 200 ಸಂಬಂಧಿಕರು ಹಾಗು ಸಾವಿರಾರು ಜನರು ಸಾಕ್ಷಿಯಾಗಿದ್ದರು. ಈ ವೇಳೆ ಸ್ವಲ್ಪ ತುಂತುರು ಮಳೆ ಬಂದಿದ್ದರಿಂದ ಪ್ರಕೃತಿಯೂ ಇವರ ಮದುವೆಗೆ ಆಶಿರ್ವಾದಿಸಿದಂತಿತ್ತು. 40 ನಿಮಿಷಗಳ ಕಾಲ ನೇತಾಡುತ್ತಲೇ ಸಕಲ ವಿಧಿ ವಧಾನದೊಂದಿಗೆ ಧಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ ನಂತರ ಹತ್ತಿರದ ದೇವಾಲಯಕ್ಕೆ ಹೋಗಿ ದೇವರ ದರ್ಶನ ಪಡೆದುಕೊಂಡರು. ನಂತರ ಸಿಂಪಲ್ ಊಟವೂ ಮದುವೆಯಲ್ಲಿ ಸಾಮಾನ್ಯವಾಗಿತ್ತು.
POPULAR STORIES :
ನಿಜವಾದ ಪ್ರೀತಿಗೆ ಸಾವಿಲ್ಲವಂತೆ.. ಇದೊಂದು ಇಂಟ್ರೆಸ್ಟಿಂಗ್ ಪ್ರೇಮ್ ಕಹಾನಿ..!
ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಫೇಸ್‍ಬುಕ್‍ನಲ್ಲಿ ಮುಖ್ಯಮಂತ್ರಿಗಳ ರಾಜೀನಾಮೆ..!!
ಮಹಿಳೆಯರೆ… ಸ್ಮೋಕ್ ಮಾಡ್ತಾ ಇದೀರಾ…! ಹುಷಾರ್…!
ಅಬ್ಬಾ.. ಈ ವಿಡಿಯೋ ನೋಡಿದ್ರೆ ಕರಳು ಚುರುಕ್ ಅನ್ನತ್ತೆ..!
ಅರ್ನಬ್ ಗೋಸ್ವಾಮಿ ವಿರುದ್ದ 500 ಕೋಟಿ ರೂ ದಾವೆ ಹೂಡಿದ ಝಾಕೀರ್…!
ಮೊಬೈಲ್ ಫೋನ್ ಚಾರ್ಜ್ ಗೆ ಇಟ್ಟಿರುವಾಗ ಬ್ಲಾಸ್ಟ್ ಆಗಬಹುದು ಹುಷಾರ್…!
ಯಾಹೂ ಸಿಬ್ಬಂದಿಗಳಿಗೆ ಸಿ.ಇ.ಓ.ನ ಕೊನೆಯ ಪತ್ರ
ಸಲ್ಮಾನ್ ಗುಂಡು ಹಾರಿಸಿದ್ದು ನನ್ನ ಕಣ್ಣಾರೆ ನೋಡಿದ್ದೇನೆ: ಕೃಷ್ಣ ಮೃಗ ಬೇಟೆಯಲ್ಲಿ ಹೊಸ ಟ್ವಿಸ್ಟ್.