ಹೀಗೊಂದು ಹೊಸದಾಗಿ ಗೋವಿನ ಹಾಡು ಹುಟ್ಟಿದ್ರೆ ಆಶ್ಚರ್ಯಪಡಬೇಕಿಲ್ಲ. ಯಾಕೆಂದ್ರೆ ಭಾರತೀಯ ಸಂಸ್ಕೃತಿಯಲ್ಲಿ ದೈವೀ ಭಾವನೆ ಪಡೆದ ಗೋವುಗಳು, ಮಾನವನಿಗೆ ಸದಾ ಉಪಕಾರಿ. ಹಾಲು, ತುಪ್ಪ, ಮೊಸರು, ಗೊಬ್ಬರ ಇತ್ಯಾದಿಗಳಿಗೆ ಗೋವುಗಳೇ ಆಧಾರ. ಇದೀಗ ಈ ಪಟ್ಟಿಗೆ ಬಂಗಾರವೂ ಸೇರಲಿದೆ. ಯಾಕೆಂದ್ರೆ ಗೋವಿನ ಮೂತ್ರಗಳಲ್ಲಿ ಬಂಗಾರ ಸಿಗೋ ವಿಚಾರವನ್ನ ವಿಜ್ಞಾನಿಗಳು ಸಂಶೋಧನೆ ಮೂಲಕ ದೃಢಪಡಿಸಿದ್ದಾರೆ.
ಗುಜರಾತ್‌ನ ಪ್ರಸಿದ್ಧ ಗಿರ್ ತಳಿಯ ಗೋ ಮೂತ್ರದಲ್ಲಿ ಬಂಗಾರದ ಅಂಶ ಪತ್ತೆಯಾಗಿರೋದನ್ನ ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ಜುನಾಗಢ್ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸತತ 4 ವರ್ಷ ಈ ಬಗ್ಗೆ ಅಧ್ಯಯನ ನಡೆಸಿ ಗೋವುಗಳ ಮೂತ್ರದಲ್ಲಿ ಚಿನ್ನದ ಅಂಶವಿರೋದನ್ನ ದೃಢಪಡಿಸಿದ್ದಾರೆ.
ಸುಮಾರು 400 ಗಿರ್ ತಳಿಗಳ ಮೂತ್ರದ ಮಾದರಿಯನ್ನು ಪರೀಕ್ಷೆಗೊಳಪಡಿಸಿರುವ ಕೃಷಿ ವಿಶ್ವವಿದ್ಯಾನಿಲಯದ ಸಂಶೋಧಕರು, ಒಂದು ಲೀಟರ್ ಗೋಮೂತ್ರದಲ್ಲಿ ಸುಮಾರು 3 ಎಂಜಿ ಯಿಂದ 10 ಎಂಜಿವರೆಗಿನ ಚಿನ್ನದ ಅಂಶವನ್ನು ಪತ್ತೆ ಮಾಡಿದ್ದಾರೆ. ಗೋಮೂತ್ರದಲ್ಲಿ ಚಿನ್ನದ ಅಂಶ ಅಯಾನಿಕ್ ರೂಪದಲ್ಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಗೋಮೂತ್ರದಿಂದ ಚಿನ್ನದ ಅಂಶವನ್ನು ರಾಸಾಯನಿಕ ಪ್ರಕ್ರಿಯೆಗಳ ಮೂಲಕ ಹೊರತೆಗೆಯಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಗೋವಿನ ಮೂತ್ರ ಮಾತ್ರವಲ್ಲದೆ ಒಂಟೆ, ಎಮ್ಮೆ, ಕುರಿ ಸೇರಿದಂತೆ ಹಲವು ಪ್ರಾಣಿಗಳ ಮೂತ್ರಗಳನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು. ಆದ್ರೆ ಗೋವಿನ ಮೂತ್ರದಲ್ಲಿ ಮಾತ್ರ ಪ್ರತಿಜೀವಕ ಅಂಶಗಳು ಪತ್ತೆಯಾಗಿದೆ.
ಭಾರತದ ಪುರಾತನ ಗ್ರಂಥಗಳಲ್ಲಿ ಗೋವಿನ ಮೂತ್ರದಲ್ಲಿ ಚಿನ್ನ, ಔಷಧಗಳ ಅಂಶವಿರುವ ಬಗ್ಗೆ ಉಲ್ಲೇಖಗಳಿವೆಯಾದರು, ಈ ವರೆಗೂ ಅದನ್ನು ನಿರೂಪಿಸುವಂತಹ ಸಂಶೋಧನೆ ನಡೆದಿರಲಿಲ್ಲ. ಇದೀಗ ಜುನಾಗಢ್ ಕೃಷಿ ವಿವಿಯ ಸಂಶೋಧಕರು ಸತತ ಅಧ್ಯಯನ ನಡೆಸಿ ಗೋಮೂತ್ರದಲ್ಲಿ ಚಿನ್ನದ ಅಂಶ ಪತ್ತೆ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಒಟ್ಟಾರೆ, ಗೋವುಗಳು ಎಷ್ಟೊಂದು ಸಂಪದ್ಭರಿತ ಜೀವಿಗಳು ಅನ್ನೋದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕಿಲ್ಲ. ಮಾತ್ರವಲ್ಲ ಇಟ್ಟರೆ ಸಗಣಿಯಾದೆ, ತಟ್ಟಿದರೆ ಉರುಳಾದೆ ಎಂಬ ಪ್ರಸಿದ್ಧ ಗೋವಿನ ಹಾಡಿಗೆ ಈ ಒಂದು ಮಾತನ್ನೂ ಸೇರಿಸಬಹುದಾಗಿದೆ. ನಾ ಚಿನ್ನವನ್ನೂ ಕೊಡುವೆ ನೀ ಏತಕಾದೆಯೋ ಎಲೆ ಮಾನವ..! ಎನ್ನಬಹುದು
- ಶ್ರೀ
POPULAR STORIES :
ಹಾಳಾಗಿ ಹೋಗ್ತೀಯಾ…! ಕೊಳ್ಳೇಗಾಲ ಅಂದಾಕ್ಷಣ ಸಿಎಂ ಕಾಲ್ಕಿತ್ತಿದ್ದು ಯಾಕೆ..?
ಹುಡುಗಿಯರಿಗೆ ಕಿರುಕುಳ ಕೊಡ್ತಿದ್ದ 420ಗೆ ಧರ್ಮದೇಟು..! ಹೆಂಗಿದ್ದಾ ಹೆಂಗಾದ? ಬೇಕಿತ್ತಾ ಪಾಪಿ ನಿನಗಿದು?
ಗ್ರೇಟ್ ಖಲಿಯ ಶಿಷ್ಯನನ್ನು ಸೋಲಿಸಿದ ಹರ್ಭಜನ್ ಸಿಂಗ್..!
ವೆಂಕಟ್ ಗೆ ಮತ್ತೆ ಹುಚ್ಚು ಹಿಡೀತಾ? ಹುಚ್ಚ ವೆಂಕಟ್ ರಮ್ಯಾಗೆ ಎನಂದ್ರು ಗೊತ್ತಾ..?
26 ವರ್ಷದ ಮಾಡೆಲಿಂಗ್ ಹುಡುಗಿ 62 ವರ್ಷದ ತಾತನನ್ನೇ ಯಾಕೆ ಮದುವೆಯಾದ್ಲು?
ರೈಲು ನಿಲ್ದಾಣದಲ್ಲಿ ಪುಕ್ಕಟೆ ವೈ-ಫೈನಲ್ಲಿ ಭಾರತೀಯರು ಏನ್ ಹುಡುಕುತ್ತಾರೆ? ಗೂಗಲ್ ಬಯಲು ಮಾಡಿದ ರಹಸ್ಯ!
ಪ್ರೀತಿಸಿದ ಹುಡುಗನ ಎದೆಗೊರಗಿ ಪ್ರಾಣ ಬಿಡುವ ಮೊದಲು..!? ಅವಳು ಯಾರು? ಯಾಕಾಗಿ ಅವನನ್ನು ದೂರವಿಟ್ಟಳು..!?