ಐಪಿಎಲ್ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಟೆಲಿಕಾಂ ಕಂಪನಿಗಳು ಕ್ರಿಕೆಟ್ ಪಂದ್ಯ ನೋಡುವ ಸಲುವಾಗಿ ಹೆಚ್ಚು ಡೇಟಾಗಳನ್ನು ಅತ್ಯಂತ ಕಡಿಮೆ ಬೆಲೆಗೆ ನೀಡಲು ಮುಂದಾಗಿವೆ. ಇದೇ ಮಾದರಿಯಲ್ಲಿ ಈ ಐಪಿಎಲ್ ಮಜವನ್ನು ಮತ್ತಷ್ಟು ಹೆಚ್ಚಿಸಲು ಮ್ಯಾಚ್ ನೋಡುತ್ತಲೇ ಹಣವನ್ನು ಗಳಿಸಬಹುದಾಗಿದೆ.
ಹೌದು ಬೆಟ್ಟಿಂಗ್ ಆಡದೇ ಐಪಿಎಲ್ ನಲ್ಲಿ ಹಣ ಗೆಲ್ಲಬಹುದು. ಬಳಕೆದಾರರಿಗೆ ಕ್ಯಾಶ್ ಪ್ರೈಸ್ವನೀಡುವ ಗೇಮೊಂದನ್ನು ಜಿಯೋ ಲಾಂಚ್ ಮಾಡಿದೆ. ಅಲ್ಲದೆ ಹಾಟ್ ಸ್ಟಾರ್ ಕೂಡ ತಮ್ಮ ಬಳಕೆದಾರರಿಗೆ ಮ್ಯಾಚ್ ನೋಡುವ ಮಧ್ಯೆಯೇ ಹಣ ಗೆಲ್ಲೋ ಅವಕಾಶ ಕಲ್ಪಿಸಿದೆ.
ಜೊತೆಗೆ ಡ್ರೀಮ್ 11 ಆ್ಯಪ್ ಕೂಡ ಕ್ಯಾಷ್ ಪ್ರೈಸ್ ನೀಡುತ್ತಿದೆ. ಈ ಆ್ಯಪ್ ನಲ್ಲಿ ನಾವು ನಮ್ಮದೇ ಟೀಂ ಮಾಡಿಕೊಂಡು ಆಡಿ ಹಣ ಗೆಲ್ಲಬಹುದು.