ಚೆಂಡಿಗೆ ಚಿಪ್ ಅಳವಡಿಕೆ….!

Date:

ಆಧುನಿಕ ಕ್ರಿಕೆಟಿನಲ್ಲಿ ಹೊಸ ಹೊಸ ತಂತ್ರಜ್ಞಾನಗಳು ಆಟಕ್ಕೆ ಮತ್ತಷ್ಟು ಮೆರಗು ನೀಡುತ್ತಿದ್ದು, ಆಟದ ಗುಣಮಟ್ಟ, ಆಟಗಾರರ ಅವರ ಪ್ರದರ್ಶನದ ಸುಧಾರಣೆಗೆ ನೆರವಾಗುತ್ತಿವೆ. ಕಳೆದ ವರ್ಷ ಇಂಗ್ಲೆಂಡ್‍ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ವೇಳೆ ಬ್ಯಾಟನಲ್ಲಿ ಚಿಪ್ ಬಳಸಿ ಬ್ಯಾಟ್ಸ್‍ಮನ್‍ಗಳು ಯಾವ ಹೊಡೆತಗಳನ್ನು ಬಾರಿಸುತ್ತಾರೆ ಎಂಬುದನ್ನು ನಿಖರವಾಗಿ ಗುರುತಿಸುವ ಪ್ರಯತ್ನ ನಡೆದಿತ್ತು.


ಆದರೆ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಕಿರಿಯರ ಮತ್ತು ಕರ್ನಾಟಕ ತಂಡದ ಆಟಗಾರ ಮಯಾಂಕ್ ಅಗರ್ವಾಲ್ ಸೇರಿದಂತೆ ಅನೇಕ ಕ್ರಿಕೆಟರಿಗೆ ಕೋಚ್ ಆಗಿದ್ದ ಮುರಳೀಧರ್ ಹೊಸ ಸಾಹಸವೊಂದನ್ನು ಮಾಡುತ್ತಿದ್ದಾರೆ. ಬೌಲರ್ಗಳು ಎಸೆಯುವ ಎಸೆತಗಳ ಮರ್ಮವನ್ನು ನಿಖರವಾಗಿ ಅಳೆಯುವ ನಿಟ್ಟಿನಲ್ಲಿ ಬಾಲಿನ ಒಳಗೆ ಚಿಪ್ ಒಂದನ್ನು ಅಳವಡಿಸುವ ಕಾರ್ಯ ನಡೆಯತ್ತದೆ.ವೈಟ್‍ಫೀಲ್ಡ್ ನಲ್ಲಿರುವ ಮುರುಳೀಧರ್ ಅವರ ಅಕಾಡಮಿಯಲ್ಲಿ ಈ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.


ಈ ತಂತ್ರಜ್ಞಾನವನ್ನು ಬಳಕೆಗೆ ತರುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಸಾಫ್ಟವೇರ್ ಕಂಪನಿಗಳ ನೆರವಿನಿಂದ ತಂತ್ರಜ್ಞಾನವನ್ನು ಅಭಿವೃದ್ಧಿ ಪಡೆಸುವ ಕಾರ್ಯ ನಡೆಯುತ್ತಿದೆ. ಚೆಂಡಿನಲ್ಲಿರುವ ಚಿಪ್ನ ಮೂಲಕ ಎಸೆತದ ಬಗ್ಗೆ ನಿಖರವಾದ ಮಾಹಿತಿಯನ್ನು ಪಡೆಯಬಹುದ್ದಾಗಿದೆ. ಈಗಿನ ತಂತ್ರಜ್ಞಾನದ ಪ್ರಕಾರ ಬೌಂಡರಿ ಗೆರೆಯ ಹೊರಗೆ ಯಂತ್ರಗಳನ್ನು ಇಟ್ಟು ಎಸೆತವನ್ನು ಅಳೆಯಲಾಗುತ್ತದೆ. ಆದರೆ ಈ ತಂತ್ರಜ್ಞಾನದ ಪ್ರಕಾರ ಚೆಂಡಿನೊಳಗಿರುವ ಚಿಪ್ ಮೂಲಕವೇ ಎಲ್ಲಾ ಮಾಹಿತಿಗಳನ್ನು ನಿಖರವಾಗಿ ಪಡೆಯಬಹುದು.


ಬೌಲರ್ ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ ಎಂಬುದನ್ನು ಕಣ್ಣಳತೆಯಲ್ಲಿ ಅಥವಾ ವಶ್ಲೇಷಕ ಕೊಟ್ಟ ಮಾಹಿತಿಯ ಆಧಾರದಲ್ಲಿ ಹೇಳುತ್ತಾರೆ ವಿನಃ, ಅದಕ್ಕೆ ಯಾವುದೇ ನಿಖರ ಅಂಕಿ ಸಂಖ್ಯೆಯ ಮಾಹಿತಿ ಇರುವುದಿಲ್ಲ. ಆದರೆ ಈ ಹೊಸ ತಂತ್ರಜ್ಞಾನದಿಂದಾಗಿ ಬೌಲರ್ ಎಲ್ಲಿ ತಪ್ಪು ಮಾಡಿದ್ದಾನೆ, ಯಾವ ರೀತಿ ಎಸೆದಿದ್ದಾನೆ ಎಂಬುದರ ಬಗ್ಗೆ ಸ್ಪಷ್ಟವಾಗಿ ಹೇಳಬಹುದು. ಇದು ಕೋಚಿಂಗ್‍ಗೆ ತುಂಬಾ ಸಹಾಯವಾಗಿದ್ದು, ಸಹಜ ತಪ್ಪುಗಳಿಗೆ ಆಸ್ಪದವೇ ಇಲ್ಲದೆ ಸಂಪೂರ್ಣವಾಗಿ ಯಾಂತ್ರೀಕೃತಗೊಳಿಸುವ ಪ್ರಯತ್ನ ಇದಾಗಿದೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...