ಸ್ಪೋರ್ಟ್ಸ್ ಚಾನಲ್‍ಗಳಲ್ಲಿ ಕ್ರಿಕೆಟ್ ಲೈವ್ ನೋಡ್ತೀರಿ. ಅದು ಲೈವ್ ಆಗಿದ್ರೂ ಈ ಆ್ಯಪ್ ಮುಂದೆ ಟ್ಯೂಬ್‍ಲೈಟ್..! ಇದರಲ್ಲಿ ಅಪ್‍ಡೇಟ್ ಸಿಕ್ಕ ಬಳಿಕ ನಿಮ್ಮ ಸ್ಪೋಟ್ಸ್ ಚಾನಲ್‍ನಲ್ಲಿ ಸ್ಕೋರ್ ವಿವರ ಗೊತ್ತಾಗುತ್ತೆ..!
ನೀವು ನಂಬ್ತೀರೋ ಬಿಡ್ತಿರೋ. ಕೆಲವರಿಗೆ ಆಲ್‍ರೆಡಿ ಇದರ ಬಗ್ಗೆ ಗೊತ್ತಿದೆ. ಹಾಗಂತ ಇದು ಅಂತಿಂತ ಆ್ಯಪ್ ಅಲ್ಲ. ಕ್ರಿಕ್‍ಬಜ್, ಕ್ರಿಕ್ ಇನ್ಫೋ ಅಂತಹ ಆ್ಯಪ್‍ಗಳೂ ಅಲ್ಲ.
ಹೌದು, ಇದು ಕ್ರಿಕೆಟ್ ಬೆಟ್ಟಿಂಗ್ ಲೋಕದ ಅಸ್ತ್ರ ‘ಲೈವ್ ಲೈನ್’ (Live Line) ಆ್ಯಪ್. ಇದು ಕ್ರಿಕೆಟ್‍ನ ತಾಜಾ ಸ್ಕೋರ್ ಅನ್ನು ಟಿವಿ ಲೈವ್‍ಗಿಂತಲೂ ವೇಗವಾಗಿ ನೀಡುವ ಅಪ್ಲಿಕೇಶನ್. ಈ ಅಪ್ಲಿಕೇಶನ್‍ನ ಬುಕ್ಕಿಗಳು ಹಾಗೂ ಬೆಟ್ಟಿಂಗ್ ಆಡುವವರು ಬಳಸ್ತಾರೆ..!
ಜಗತ್ತಿನ ಯಾವುದೇ ಮೂಲೆಯಲ್ಲಿ ಪಂದ್ಯ ನಡೀಲಿ, ತಂಡದ ಮತ್ತು ಪಂದ್ಯದ ಬಜಾರ್ ತಿಳಿಯುತ್ತೆ! ಷೇರು ಮಾರುಕಟ್ಟೆ ಏರಿತಗಳ ಬಗ್ಗೆ ನಿಮಗೆ ಅರಿವಿದೆ ಅಲ್ಲವೇ..? ಅದೇ ರೀತಿ ಲೈವ್ ಕ್ರಿಕೆಟಿನ ಮಾರ್ಕೆಟಿಂಗ್ ಏರಿಳಿತಗಳು ಈ ಆ್ಯಪ್‍ನಲ್ಲಿ ತಿಳಿಯುತ್ತೆ. ಇದರ ಆಧಾರದಲ್ಲಿ ಬೆಟ್ಟಿಂಗ್ ದುನಿಯಾ ನಿಂತಿದೆ..!
ಇದೊಂದೇ ಅಪ್ಲಿಕೇಶನ್ ಅಲ್ಲ ಇದೇ ರೀತಿ ವಿಶ್ವದಲ್ಲಿ ಬೆಟ್ 365, ಲ್ಯಾಡ್ ಬ್ರೋಕರ್ಸ್, ಸನ್ ಬೆಟ್ಸ್, 10 ಬೆಟ್, ಬೆಟ್ ಫ್ರೆಡ್ ಸೇರಿದಂತೆ ಹತ್ತಾರು ಇಂತಹ ಬೆಟ್ಟಿಂಗ್ ಆ್ಯಪ್ ಮತ್ತು ಸೈಟ್‍ಗಳಿವೆ. ಕ್ರಿಕೆಟ್ ಮಾತ್ರವಲ್ಲದೆ ಎಲ್ಲಾ ಪ್ರತಿಷ್ಠಿತ ಕ್ರೀಡೆಗಳ ಕ್ಷಣ ಕ್ಷಣದ ಮಾಹಿತಿ ಇಂತಹ ಸೈಟ್‍ಗಳಲ್ಲಿ ಸಿಗ್ತವೆ.
ಕಿವಿಮಾತು :
ಪ್ರತಿಯೊಬ್ಬರ ಮೊಬೈಲ್‍ನಲ್ಲಿ ಹತ್ತಾರು ಆ್ಯಪ್‍ಗಳಿವೆ. ನಿಮ್ಮ ಮೊಬೈಲ್‍ಗೆ ಈ ರೀತಿಯ ಅಪ್ಲಿಕೇಶನ್‍ಗಳು ಸೇರುವ ಮುನ್ನ ಎಚ್ಚರವಿರಲಿ, ಮಾಹಿತಿ ಇರಲಿ.