ಕ್ರಿಕೆಟ್‍ನಲ್ಲಿ ಕೋಟಿ ಕೋಟಿ ಸಂಭಾವನೆಯನ್ನ ಪಡೆಯೋ ವಿಶ್ವದ ಶ್ರೇಷ್ಠ ಆಟಗಾರರ ಮನೆಗಳು ಹೇಗಿವೆ ಗೊತ್ತಾ..?

Date:

ಕ್ರಿಕೆಟ್‍ನಲ್ಲಿ ಕೋಟಿ ಕೋಟಿ ಸಂಭಾವನೆಯನ್ನ ಪಡೆಯೋ ವಿಶ್ವದ ಶ್ರೇಷ್ಠ ಆಟಗಾರರ ಮನೆಗಳು ಹೇಗಿವೆ ಗೊತ್ತಾ..? ಒಬ್ಬರಿಗಿಂತ ಒಬ್ಬರ ಮನೆಗಳು ಅದ್ಭುತ.. ಅಂತಹ 8 ಕ್ರಿಕೆಟಿಗರ ವೈಭವೋಪೆತ ಮನೆಗಳು ಇಲ್ಲಿವೆ ನೋಡಿ..

ಕ್ರಿಸ್‍ಗೇಲ್..

chris-gayle-home
ಜಮೈಕಾದ ದೈತ್ಯ ವೆಸ್ಟ್ಇಂಡೀಸ್ ಕ್ರಿಕೆಟ್ ದಿಗ್ಗಜ ಕ್ರಿಸ್‍ಗೇಲ್ ತನ್ನ ಲೈಫ್‍ನ ಬಿಂದಾಸಾಗಿ ಲೀಡ್ ಮಾಡೋದ್ರಲ್ಲಿ ಎಂದಿಗೂ ಮುಂದು.. ಪಾರ್ಟಿ ಪಬ್ ಅಂತ ಯಾವಾಗ್ಲೂ ತನ್ನ ಸಮಯವನ್ನ ಎಂಜಾಯ್ ಮಾಡೋ ಈ ಕ್ರಿಕೆಟಿಗನ ಮನೆಯೂ ಕೂಡ ಅಷ್ಟೇ ಅದ್ದೂರಿಯಾಗಿದೆ.. ಡ್ಯಾನ್ಸ್ ಫ್ಲೋರ್, ಸ್ವಿಮಿಂಗ್‍ಪುಲ್, ಚಿಕ್ಕದೊಂದು ಥೇಟರ್, ಬಿಲಿಯಡ್ರ್ಸ್ ರೂಮ್, ಪ್ರೈವೇಟ್ ಸ್ಟ್ರಿಪ್ ಕ್ಲಬ್‍ನ ಒಳಗೊಂಡಿದೆ..

ಶೇನ್‍ವಾರ್ನ್

Shane-Warne-House
ಆಸ್ಟ್ರೇಲಿಯಾ ಕ್ರಿಕೆಟ್‍ನ ಸ್ಪಿನ್ ಮಾಂತ್ರಿಕ ಶೇನ್‍ವಾರ್ನ್ ಕೂಡ ಈ ಸಾಲಿನಲ್ಲಿದ್ಧಾರೆ.. ನಾಲ್ಕು ರೂಮ್‍ಗಳನ್ನ ಒಳಗೊಂಡಿರೋ 10 ಕಾರ್‍ಗಳನ್ನ ಒಟ್ಟಿಗೆ ಪಾರ್ಕ್ ಮಾಡಬಹುದಾದಷ್ಟು ದೊಡ್ಡದಾದ ಅಂಡರ್‍ಗ್ರೌಂಡ್, ಇಟಾಲಿಯನ್ ಶೈಲಿಯ ಮಹಲಿ ವಿನ್ಯಾಸವನ್ನ ಹೊಂದಿರೋ ಬಂಗಲೆ ಇದು.. ಟೆನ್ನಿಸ್ ಕೋರ್ಟ್, ಸ್ವಿಮ್ಮಿಂಗ್‍ಪುಲ್‍ನ ಒಳಗೊಂಡಿದೆ..

ಸಚಿನ್ ತೆಂಡುಲ್ಕರ್..

sachinbandraht_1441362475
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ 5 ಹಂತಸ್ತಿನ ಐಷಾರಾಮಿ ವಿಲ್ಲಾವನ್ನ ಹೊಂದಿದ್ದಾರೆ.. 6000 sq ft ಜಾಗದಲ್ಲಿ ನಿರ್ಮಾಣವಾಗಿದೆ.. ಬೇಸ್ಮೆಂಟ್ ಫುಲ್ ಕಾರ್ ಪಾರ್ಕಿಂಗಿದೆ.. ಇನ್ನೂ ಗ್ರೌಂಡ್‍ಫ್ಲೋರ್ ಈ ಲಿಟಲ್ ಮಾಸ್ಟರ್ ಸಾಧನೆಗಳು ಹಾಗೆ ಪ್ರಶಸ್ತಿಗೆ ಮುಡುಪಾಗಿದೆ.. ಸೆಕೆಂಡ್ ಫ್ಲೋರ್ ತನ್ನ ಮಕ್ಕಳಿಗೆ ಹಾಗೆ ಬರುವ ಅತಿಥಿಗಳಿಗೆ.. ಟಾಪ್ ಫ್ಲೋರ್‍ನಲ್ಲಿ ಸಚಿನ್ ದಂಪತಿಗಳಿರ್ತಾರೆ.. ಜೊತೆಗೆ ಸ್ವಿಮ್ಮಿಂಗ್ ಪೂಲ್‍ನ ಕೂಡ ಹೊಂದಿದೆ ಈ ಬಂಗಲೆ..
ಡೇವಿಡ್ ವಾರ್ನರ್

067244-702d5582-99f6-11e4-a07e-aa4690f5ace2
ಸದ್ಯಕ್ಕೆ ಹೈದ್ರಬಾದ್ ತಂಡದ ನಾಯಕನಾಗಿ ಒಳ್ಳೆ ಪರ್ಫಾಮೆನ್ಸ್ ನೀಡ್ತಿರೋ ಡೇವಿಡ್ ವಾರ್ನರ್ ನಾಲ್ಕು ಅಂತಸ್ತಿರೋ ಮನೆಯ ಒಡೆಯ.. 5 ಬೆಡ್ ರೂಮ್‍ಗಳಿವೆ.. ಜೊತೆಗೆ ಅಲ್ಲಿನ ಬೀಚ್ ಆದ ಗಾರ್ಡನ್ ವಿಹಂಗಮ ನೋಟ ಈ ವಿಲ್ಲದ ಮೂಲಕ ಕಾಣೋಕೆ ಸಿಗುತ್ತೆ.. ವಾರ್ನರ್ ದಂಪತಿ ಹಾಗೆ ಇವ್ರ ಮುದ್ದು ಮಗಳು ಈ 6.25 ಮಿಲಿಯನ್ ಬೆಲೆ ಬಾಳೋ ಮನೆಯಲ್ಲಿ ವಾಸವಿದ್ದಾರೆ..

ಮೈಕಲ್ ಕ್ಲಾರ್ಕ್

462127-0324273e-d0fe-11e3-8191-aea8f3c37bd2
ಆಸ್ಟೇಲಿಯಾದ ಮಾಜಿ ನಾಯಕ ಸದ್ಯಕ್ಕೆ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿರೋ ಮೈಕಲ್ ಆಸ್ಟ್ರೇಲಿಯಾ ಕ್ರಿಕೆಟಿಗರಲ್ಲಿ ಐಷಾರಾಮಿ ಮನೆಯನ್ನ ಹೊಂದಿರುವವರಲ್ಲಿ ಈತ ಕೂಡ ಒಬ್ಬ.. ಮನೆ ಸುತ್ತಮುತ್ತಲಿನ ಪ್ರದೇಶವನ್ನೆಲ್ಲ ಸೇರಿ 230 acre ಎಸ್ಟೆಟ್‍ನ ಒಳಗೊಂಡಿದೆ.. ಇಲ್ಲಿನ ವಿಶೇಷತೆ ಏನು ಅಂದ್ರೆ ಕ್ಲಾರ್ಕ್ ತನ್ನದೆ ಕ್ರಿಕೆಟ್ ಪಿಜ್‍ನ ಕೂಡ ಹೊಂದಿದ್ದಾರೆ.. ಇದಲ್ಲದೆ ಟೆನ್ನಿಸ್ ಕೋರ್ಟ್, ಸ್ವಿಮಿಂಗ್‍ಪುಲ್ ಹೊಂದಿರೊ ಈ ಮನೆ 8.5 ಮಿನಿಯನ್‍ಗಳಷ್ಟು ಬೆಲೆಬಾಳುತ್ತೆ..
ಶೇನ್‍ವ್ಯಾಟ್ಸನ್

0_142-Hewlett-Street-1
ಆರ್‍ಸಿಬಿ ತಂಡದ ಕ್ರಿಕೆಟ್ ಪಟು ಆಸ್ಟ್ರೇಲಿಯಾ ತಂಡದ ಮತ್ತೊಬ್ಬ ಶ್ರೇಷ್ಟ ಆಟಗಾರನಾದ ಶೇನ್‍ವ್ಯಾಟ್ಸನ್‍ನ ಕೂಡ ಈ ಸಾಲಿನಲ್ಲಿ ಮರೆಯೋ ಹಾಗಿಲ್ಲ.. ಈತನ ಮನೆಯೂ ವೈಭವ ಅನ್ನೋ ಪದಕ್ಕೆ ಹೇಳಿ ಮಾಡಿಸಿದಂತಿದೆ.. ಐಷಾರಾಮಿ ವಾಸ್ತುಶಿಲ್ಪದಿಂದ ಕೂಡಿದೆ.. ನಾಲ್ಕು ಬೆಡ್‍ರೂಮ್‍ನ ಹೊಂದಿರೋ ಈ ವಿಲ್ಲದ ಬೆಲೆ ಕೇವಲ 9 ಮಿನಿಯನ್ ಅಷ್ಟೆ…

ಸೌರವ್ ಗಂಗೂಲಿ

07pic1
ಇನ್ನೂ ನಮ್ಮ ಕೊಲ್ಕತ್ತಾದ ಮಹಾರಾಜನೆಂದೆ ಖ್ಯಾತಿ ಪಡೆದಿರೋ ಸೌರವ್ ಗಂಗೂಲಿಯ ಮನೆ ಕೂಡ ರಾಜ ಅರಮನೆಯಂತದ್ದು.. ಈ ಮನೆಯಲ್ಲಿ ಬರೊಬ್ಬರಿ 48 ರೂಮ್‍ಗಳಿವೆ.. ನಾಲ್ಕು ಅಂತಸ್ಥಿನ ಈ ಮನೆಯಲ್ಲಿ 50 ಜನ ವಾಸಿಸುವಷ್ಟು ಅವಕಾಶವಿದೆ.. ಇನ್ನೂ ಡೈನಿಂಗ್ ಹಾಲ್, ಸೇರಿದಂತೆ ಎಲ್ಲೆಡೆ ಪುರಾತನ ಪೀಠೋಪಕರಣಗಳಿಂದ ಅಲಂಕೃತವಾಗಿದ್ರೆ, ಕ್ರಿಕೆಟ್ ಪಿಜ್‍ನ ಸಹ ಒಳಗೊಂಡಿದೆ.
ರಿಕ್ಕಿ ಪಾಟಿಂಗ್

0_ponting1_1024
ಆಸ್ಟ್ರೇಲಿಯಾ ಕ್ರಿಕೆಟ್ ಟೀಮ್ ಕಂಡ ಅತ್ಯಂತ ಶ್ರೇಷ್ಟ ಕ್ಯಾಪ್ಟನ್ ರಿಕ್ಕಿ ಪಾಟಿಂಗ್ ನಿವಾಸ ಆಸ್ಟ್ರೇಲಿಯಾ ಕ್ರಿಕೆಟ್ ಪ್ಲೈಯರ್‍ಗಳಲ್ಲಿ ಅತೀ ಹೆಚ್ಚು ಬೆಲೆ ಬಾಳುವಂತದ್ದು.. 7 ಬೆಡ್‍ರೂಮ್‍ಗಳನ್ನ ಹೊಂದಿರುವ ಈ ಭಂಗಲೆ ಅಮೃತ ಶಿಲೆಯನ್ನ ಒಳಗೊಂಡಿದೆ.. ಟೆನ್ನಿಸ್ ಕೋರ್ಟ್, ಪ್ರತ್ಯೇಕ ಥೇಟರ್ ಹೊಂದಿದೆ.. ಇದು 10 ಮಿಲಿಯನ್ ಬೆಲೆ ಬಾಳುವಂತಹದ್ದು..

  • ಅಶೋಕ್ ರಾಜ್

POPULAR  STORIES :

ಪ್ರೀತಿಸಿದ ಹುಡುಗಿ ನಡು ನೀರಲ್ಲಿ ಬಿಟ್ಟಾಗ, ಈಜು ಕಲಿಸಿದ ಹುಡುಗಿ ಹೀಗೇಕೆ ಒಂಟಿ ಮಾಡಿ ಹೊರಟಳು?

ಸಿಸಿ ಟಿವಿಯಲ್ಲಿ ಸೆರೆಯಾದ ನಟ ರಿತೇಶ್ ದೇಶ್ ಮುಖ್ ಕಳ್ಳತನ..!

ವೆಸ್ಟ್ ಇಂಡೀಸ್ ಆಟಗಾರರಿಗೆ `ಸೆಕ್ಸ್’ ಅಂದ್ರೆ ಅಷ್ಟಿಷ್ಟಾನಾ..? ಕ್ರಿಸ್ ಗೇಲ್ ಬ್ಯಾಟು.. ಪತ್ರಕರ್ತೆಯ ಎರಡು ಕೈ..!!

ಪ್ರತಿ 10 ನಿಮಿಷಕ್ಕೆ ಶುರುವಾಗುತ್ತೆ ಹೊಸ ಜೀವನ..!! ಇದು ರೀಲ್ ಅಲ್ಲ ರಿಯಲ್ ಗಜನಿಯ ಕಥೆ..!!!

ಪ್ರಿಯಕರನಿಗೆ ಕಾಯುತ್ತಾ ಬಸ್ಟ್ಯಾಂಡ್‍ನಲ್ಲಿ ನಿಂತಿದ್ದಳು..!? ಆಟೋಡ್ರೈವರ್‍ಗಳು ಏನ್ ಮಾಡಿದ್ರು ಗೊತ್ತಾ..!?

ಚೀನಾ-ಪಾಕ್ ಗೆ ಖಡಕ್ಕು ಸಂದೇಶ..! ನರೇಂದ್ರ ಮೋದಿ ಗೇಮ್ ಸ್ಟಾರ್ಟ್..!

ಹುಚ್ಚ ವೆಂಕಟ್ ಗೆ ಮಡಿಕೇರಿಯಲ್ಲಿ ಸಿಕ್ಕಳು ಹುಡುಗಿ..! `ಕೋಟಿ’ ಬೇಕಾದರೂ ಖರ್ಚಾಗಲಿ ಎಂದರಂತೆ..!?

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...