17 ವರ್ಷದ ತಂದೆ ತನ್ನ 2 ತಿಂಗಳ ಮಗುವನ್ನು ಹತ್ಯೆಗೈದ ಘಟನೆ ನವದೆಹಲಿಯ ಮಂಗೋಲ್ ಪುರಿಯಲ್ಲಿ ನಡೆದಿದೆ.
ಮಗುವಿನ ತಂದೆ ಮತ್ತು ತಾಯಿ ಇಬ್ಬರೂ ಅಪ್ರಾಪ್ತರು. 10 ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ತಾಯಿಯ ಅಕ್ರಮ ಸಂಬಂಧದಿಂದ ಮಗು ಹುಟ್ಟಿದೆ ಎಂದು ತಂದೆ ಮಗುವನ್ನು ಕೊಲೆ ಮಾಡಿದ್ದಾನೆ.

ಘಟನೆ ನಡೆದಾಗ ತಾಯಿ ಮಗುವನ್ನು ತಂದೆಯೊಡನೆ ಬಿಟ್ಟು ಬಜಾರ್ ಗೆ ಕೆಲಸ ಹುಡುಕಿಕೊಂಡು ಹೋಗಿದ್ದರು. ವಾಪಸ್ಸು ಬಂದಾಗ ಮಗು ಅಂಗಾತ ಬಿದ್ದಿತ್ತು, ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ , ಅಷ್ಟೊತ್ತಿಗಾಗಲೇ ಅದು ಸಾವನ್ನಪ್ಪಿತ್ತು. ತಂದೆ ಎನಿಸಿಕೊಂಡ ಭೂಪ ನಾಪತ್ತೆಯಾಗಿದ್ದ.
ತಾಯಿ ಪೊಲೀಸರಿಗೆ ದೂರು ನೀಡಿದ್ದು, ತನ್ನ ಪತಿಯೇ ಮಗುವನ್ನು ಕೊಲೆ ಮಾಡಿರೋದಾಗಿ ದೂರಿನಲ್ಲಿ ತಿಳಿಸಿದ್ದಾರೆ.







