ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಿಷೇಧದಿಂದ ಎರಡು ವರ್ಷ ತಪ್ಪಿ ಹೋಗಿದ್ದ ರೋಚಕ ಕಾಳಗಕ್ಕೆ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಗಲಿದೆ.
ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಹಾಲಿ ನಾಯಕ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡಗಳು ಇಂದು ಸೆಣೆಸಲಿವೆ.
ಈ ಆವೃತ್ತಿಯಲ್ಲಿ ಆಡಿರುವ 5 ಪಂದ್ಯಗಳಲ್ಲಿ 4 ರಲ್ಲಿ ಗೆಲುವು 1ರಲ್ಲಿ ಚೆನ್ನೈ ಸೋಲುಂಡಿದೆ. ಆರ್ ಸಿಬಿ 5ಪಂದ್ಯಗಳಿಂದ 2ಜಯ 3 ಸೋಲು ಅನುಭವಿಸಿದೆ.
ಕಳೆದ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಎದುರು 6ವಿಕೆಟ್ ಗೆಲುವು ಪಡೆದಿರುವುದು ಆರ್ ಸಿಬಿಗೆ ಪ್ಲಸ್ ಪಾಯಿಂಟ್. ವಿರಾಟ್ , ಡಿವಿಲಿಯರ್ಸ್ ಬಲ ಆರ್ ಸಿಬಿಗಿದೆ.
ಚೆನ್ನೈ ಕೂಡ ಕಳೆದ ಪಂದ್ಯದಲ್ಲಿ ಸನ್ವರೈಸರ್ಸ್ ವಿರುದ್ಧ 4 ವಿಕೆಟ್ ಗೆಲುವು ದಾಖಲಿಸಿದ್ದು , ಈ ಪಂದ್ಯವನ್ನೂ ಗೆಲ್ಲುವ ವಿಶ್ವಾಸದಲ್ಲಿದೆ.
ಈ ವರೆಗೆ ಈ ಎರಡು ತಂಡಗಳು 21ಬಾರಿ ಮುಖಾಮುಖಿಯಾಗಿದ್ದು ಚೆನ್ನೈ 17ಪಂದ್ಯದಲ್ಲಿ ಸಿಎಸ್ ಕೆ 13ರಲ್ಲಿ ಸೋಲುಕಂಡಿದ್ದು 1ಪಂದ್ಯ ರದ್ದಾಗಿದೆ.