ಬೆಂಗಳೂರಿನ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಿಸಲೆತ್ನಿಸಿದ್ದ 100ಕೆ.ಜಿ ಚಿನ್ನಾಭರಣ ವಶಕ್ಕೆ ಪಡೆದು , 34 ಆರೋಪಿಗಳನ್ನು ಬಂಧಿಸಿದ್ದಾರೆ.
ಅಕ್ರಮವಾಗಿ ಸಾಗಿಸಲೆತ್ನಿಸಿದ್ದ ಚಿನ್ನದ ಬೆಲೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 30ಕೋಟಿ ರೂಗೂ ಅಧಿಕವಾಗಿದೆ.
ಮಧ್ಯ ಏಷ್ಯಾ, ಗಲ್ಫ್ ರಾಷ್ಟ್ರಗಳು ಸೇರಿದಂತೆ ಜೋರ್ಡಾನ್, ಶ್ರೀಲಂಕಾ ಹಾಗೂ ದಕ್ಷಿಣ ಏಷ್ಯಾದ ಅಕ್ರಮ ಸ್ಮಗ್ಲರ್ಸ್ ಇದೀಗ ಕಂಬಿ ಎಣಿಸ್ತಿದ್ದಾರೆ.
ಬಟ್ಟೆ , ಕೊರಿಯರ್, ಬೆಲ್ಟ್ ಬಕಲ್, ಚಪ್ಪಲಿ, ಚಾಕೊಲೇಟ್, ಸೋಪ್ , ಒಳ ಉಡುಪು ಹೀಗೆ ವಿವಿಧ ರೂಪದಲ್ಲಿ ಸ್ಮಂಗ್ಲಿಂಗ್ ನಡೆಸುತ್ತಿದ್ದರು.