ಬಡ ಹುಡುಗನೊಬ್ಬನನ್ನು ಶ್ರೀಮಂತ ಹುಡುಗಿಯೊಬ್ಬಳು ಭೇಟಿ ಆಗ್ತಾಳೆ..! ಅವರಿಬ್ಬರ ನಡುವೆ ಪ್ರೀತಿ ಹುಟ್ಟುತ್ತೆ..! ಹುಡುಗಿ ತನ್ನ ದೇಶಕ್ಕೆ ಹಿಂತಿರುಗುತ್ತಾಳೆ..! ಹುಡುಗ ಆ ದೇಶಕ್ಕೆ ಬರುವ ಭರವಸೆಯನ್ನೂ ಕೊಡ್ತಾನೆ..! ಕಾಲ ಕಳೀತಾ ಇದೆ, ಆದರೆ ಆತನಿಗೆ ನೂರೆಂಟು ಸಮಸ್ಯೆಗಳು..! ಹಾಗಾಗಿ ಆಕೆಯನ್ನು ಭೇಟಿ ಮಾಡಲು ಆಗಲೇ ಇಲ್ಲ..! ಕೊನೆಗೂ ಆತ ಒಂದು ತಿರ್ಮಾನಕ್ಕೆ ಬರ್ತಾನೆ. ಸೈಕಲ್ ತಗೊಂಡು 8 ದೇಶಗಳನ್ನು ದಾಟಿ ಆಕೆ ಇದ್ದಲ್ಲಿಗೆ ಹೋಗಿ ಆಕೆಯ ಇಷ್ಟವನ್ನು ಪೂರೈಸ್ತಾನೆ..!
ಇದು ಮುಂದಿನ ಬಾಲಿವುಡ್ ಸಿನಿಮಾದ ಕಥೆಯಲ್ಲ..! ಆದರೆ ಸಿನಿಮಾ ಮಾಡಬಹುದಾದ ರಿಯಲ್ ಸ್ಟೋರಿ. ಡಾ. ಪ್ರದ್ಯುಮ್ನ ಕುಮಾರ್ ಮಹಾನಂದಿಯಾ ಎಂಬ ಭಾರತೀಯ ಹಾಗೂ ಷಾರ್ಲೊಟ್ ವಾನ್ ಶೇಡ್ವಿನ್ ಎಂಬ ಸ್ವೀಡನ್ ಮಹಿಳೆಯ ಪ್ರೇಮಕಥೆ..! ಇದು ಬಾಲಿವುಡ್ ನ ಯಾವ ಪ್ರೇಮಕಥಾ ಆಧಾರಿತ ಸಿನಿಮಾಕ್ಕೆ ಕಡಿಮೆ ಇಲ್ಲ..! ಇದೊಂದು ಪ್ರೇಮ ಮಹಾಕಾವ್ಯ..!
ಪ್ರದ್ಯುಮ್ನ ಕುಮಾರ್ (ಪಿಕೆ)ಒರಿಸ್ಸಾದ ಬಡ ನೇಕಾರ ಕುಟುಂಬದಲ್ಲಿ 1949ರಲ್ಲಿ ಹುಟ್ಟಿದರು..! ಇವರದ್ದು ಅಸ್ಪೃಶ್ಯರೆಂದು ದೂರ ಇಟ್ಟಿದ್ದ ದೆನಕನಲ್ ಎಂಬ ಮನೆತನ. ಬಡತನ ಮತ್ತು ಅಸ್ಪೃಶ್ಯರೆಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಇವರಲ್ಲೊಬ್ಬ ಕಲಾಕಾರನಿದ್ದ..! ಪಿಕೆ ಒಬ್ಬ ಕಲಾವಿದನಾಗಿದ್ದರು. ಅವರ ಶಿಕ್ಷಣಕ್ಕೆ ಹಣ ಹೊಂದಿಸೋದು ಅವರ ಕುಟುಂಬಕ್ಕೆ ಕಷ್ಟವಾಗುತ್ತೆ..! ಏನೇನೋ ಕಷ್ಟದ ಬದುಕನ್ನು ಸವೆಸುತ್ತಾ 1971ರಲ್ಲಿ ನವದೆಹಲಿಯ ಕಲಾ ಕಾಲೇಜನ್ನು ಸೇರಿದ್ರು..! ಇವರು ತಯಾರಿಸಿದ ಭಾವಚಿತ್ರ ಜನಪ್ರಿಯತೆಯನ್ನೂ ತಂದುಕೊಟ್ಟಿತು..!
ಹೀಗಿರುವಾಗ, ಅದು 1975ರ ಸಮಯ. ಅವತ್ತೊಂದು ದಿನ ಲಂಡನ್ನಿನ 19 ವರ್ಷದ ವಿದ್ಯಾರ್ಥಿನಿಯೊಬ್ಬಳು ಪಿಕೆಯನ್ನು ನೋಡಲು ಬರ್ತಾರೆ..! ಪಿಕೆಯ ಬಗ್ಗೆ ತಿಳಿಯುವ ಕುತೂಹಲದಿಂದಲೇ ಬಂದ ಲಂಡನ್ನಿನ ಆಕೆ, ಪಿಕೆಯಿಂದ ತನ್ನ ಭಾವಚಿತ್ರವನ್ನೂ ಬಿಡಿಸಿಕೊಂಡು ಬಿಡ್ತಾಳೆ..! ಅಂದು ಪಿಕೆಗಾಗಿ ಲಂಡನ್ನಿಗೆ ಬಂದಾಕೆ ಬೇರ್ಯಾರೂ ಅಲ್ಲ..! ಈ ರಿಯಲ್ ಸ್ಟೋರಿ ಕಥಾನಾಯಕಿ `ಷಾರ್ಲೊಟ್ ವಾನ್ ಶೇಡ್ವಿನ್’..!
ಲಂಡನ್ನಿಂದ ಬಂದ ಷಾರ್ಲೊಟ್ ಸಿಂಪ್ಲಿಸಿಟಿ ಮತ್ತು ಸೌಂದರ್ಯಕ್ಕೆ ಪಿಕೆ ಮನಸೋಲ್ತಾರೆ..! ಇಬ್ಬರ ನಡುವೆ ಪ್ರೀತಿಹುಟ್ಟುತ್ತೆ..! ಷಾರ್ಲೊಟ್ `ಚಾರುಲತಾ’ ಎಂಬ ಭಾರತೀಯ ಹೆಸರನ್ನು ಇಟ್ಟುಕೊಳ್ತಾಳೆ..! ಅವರಿಬ್ಬರೂ ಸಂಪ್ರದಾಯದಂತೆ ಮದುವೆಯನ್ನೂ ಆಗ್ತಾರೆ..!
ಕೆಲವು ಕಾಲದ ನಂತರ ಚಾರುಲತಾ ಭಾರತವನ್ನು ಬಿಟ್ಟು ಸ್ವದೇಶಕ್ಕೆ ಮರಳಬೇಕಾಗುತ್ತೆ. ಆಕೆ ಅವಳೊಡನೆ ಪಿಕೆಯನ್ನೂ ಬರುವಂತೆ ಒತ್ತಾಯಿಸ್ತಾಳೆ..! ಆಗಿನ್ನೂ ವಿದ್ಯಾರ್ಥಿಯೇ ಆಗಿದ್ದ ಪಿಕೆ ಅವಳೊಡನೆ ಹೋಗಿ, ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಡಲು ಇಷ್ಟಪಡಲ್ಲ..! ಓದು ಮುಗಿದ ಮೇಲೆ ಖಂಡಿತಾ ನಿನ್ನ ನಾಡಿಗೆ ನಾ ಬರುವೆನೆಂದು ಹೇಳಿಕಳುಹಿಸ್ತಾನೆ.
ಚಾರುಲತಾ ಸ್ವೀಡನ್ ನಲ್ಲಿ ಅವಳ ಪತಿದೇವ ಪಿಕೆ ಭಾರತದಲ್ಲಿ..! ಇಬ್ಬರ ನಡುವೆ ಪತ್ರಗಳ ವಿನಿಮಯ ಮಾತ್ರ..!
ಓದು ಮುಗಿದ ಮೇಲೆ ಪಿಕೆಯ ಮನಸ್ಸಲ್ಲಿ ಚಾರುಲತಾಳಿಗೆ ಕೊಟ್ಟ ಭಾಷೆಯನ್ನು ಉಳಿಸಿಕೊಳ್ಳಬೇಕೆಂಬ ಆಸೆ ಇದ್ದೇ ಇತ್ತು. ಆದ್ರೆ ವಾಸ್ತವ ಅಂದ್ರೆ ಹಣದ ಸಮಸ್ಯೆ ಪಿಕೆಯನ್ನು ಸ್ವೀಡನ್ಗೆ ಹೋಗಲು ತಡೆಗೋಡೆಯಾಗಿ ಬಿಡುತ್ತೆ..! ಹಣದ ಸಮಸ್ಯೆಯಿದೆ ಅಂತ ಸ್ವೀಡನ್ಗೆ ಹೋಗೋ ಪ್ಲಾನ್ ಅನ್ನು ಪಿಕೆ ಕೈ ಬಿಡಲ್ಲ..! ತನ್ನ ಬಳಿಯಿದ್ದ ಅಮೂಲ್ಯ ವಸ್ತುಗಳನ್ನೆಲ್ಲಾ ಮಾರಿದ ಪಿಕೆ ಸೆಕೆಂಡ್ ಹ್ಯಾಂಡ್ ಬೈಸಿಕಲ್ ಅನ್ನು ತೆಗದು ಕೊಳ್ತಾನೆ..! ಅದರೊಡನೆ ತನ್ನೆಲ್ಲಾ ಪೇಯಿಂಟಿಂಗ್ ಗಳನ್ನು ಪೇಯಿಟಿಂಗ್ ಬ್ರಶ್ ಗಳನ್ನು ತೆಗೆದುಕೊಳ್ತಾನೆ..! ಆ ಬೈಸಿಕಲ್ಲನ್ನು ಯೋಚನೆ ಮಾಡಲಾಗದೇ ಇರೋ ರೀತಿಯಲ್ಲಿ ಬದಲಾಯಿಸಿ ಬಿಡ್ತಾನೆ..! ತನ್ನ `ಪ್ರೀತಿ’ಯ ಜೊತೆ ಕಾಲಕಳೆಯಲು ಮಡದಿಯ ನಾಡಿನತ್ತ ಸಾಗ್ತಾನೆ..!
ಅದು 1978ರ ಕಾಲಘಟ್ಟ. ಪಿಕೆ ದೆಹಲಿಯಿಂದ ಹೊರಟು ಅಫಘಾನಿಸ್ಥಾನ್, ಇರಾನ್, ಟರ್ಕಿ, ಬಲ್ಗೇರಿಯಾ ಯುಗಸ್ಲೋವಿಯಾ, ಜರ್ಮನಿ, ಆಸ್ಟ್ರೀಯಾ ಮತ್ತು ಡೆನ್ಮಾರ್ಕ್ (ಒಟ್ಟು 8 ದೇಶಗಳನ್ನು) ದೇಶಗಳನ್ನು ದಾಟಿ ಸ್ವೀಡನ್ಗೆ ಹೋಗ್ತಾನೆ..! ಸ್ವೀಡನ್ ಅಧಿಕಾರಿಯೊಬ್ಬರು ಇವನನ್ನು ವಿಚಾರಿಸಿದಾಗ ತನ್ನ ಮತ್ತು ಚಾರುಲತಾಳ ಪ್ರೀತಿ ಪುರಾಣವನ್ನು ಹೇಳ್ತಾನೆ..! ಬಡ ಭಾರತೀಯನೊಬ್ಬನನ್ನು ಸ್ವೀಡನ್ನ ಮಹಳೆ ಪ್ರೀತಿಸಿ ಮದುವೆ ಆದ ಸತ್ಯ ಕಥೆಯನ್ನು ಆ ಅಧಿಕಾರಿಗೆ ನಂಬಲಾಗಲೇ ಇಲ್ಲ..! ಐದು ತಿಂಗಳಕಾಲ ಪ್ರಯಾಣಿಸಿ ತನ್ನ ನಾಡಿಗೆ ತನಗಾಗಿ ತನ್ನ ಗಂಡ ಬಂದಿದ್ದಾನೆಂಬುದನ್ನು ತಿಳಿದ ಖುಷಿಯಲ್ಲಿ ಚಾರುಲತಾ ಗೋತೆಂಗ್ ಬರ್ಗ್ ಎಂಬಲ್ಲಿಗೆ ಬರ್ತಾಳೆ..! ಆಗಲೇ ಪಿಕೆ ಪ್ರೇಮಕಥೆಯನ್ನು ಎಲ್ಲರೂ ಒಪ್ಪಿಕೊಂಡಿದ್ದು..!
ಈಗ ಚಾರುಲತಾ ಮತ್ತು ಪ್ರದ್ಯುಮ್ನ ಕುಮಾರ್ ಇಬ್ಬರೂ ತಮ್ಮ ಇಬ್ಬರು ಮಕ್ಕಳೊಂದಿಗೆ ಸ್ವೀಡನ್ನಲ್ಲಿದ್ದಾರೆ..! ಹಿಂದೊಮ್ಮೆ ಪ್ರದ್ಯುಮ್ನ ಕುಮಾರ್ರನ್ನು ಅಸ್ಪೃಶ್ಯರೆಂದು ದೂರವಿಟ್ಟಿದ್ದ ಹಳ್ಳಿಯವರು ಈಗ ಪ್ರದ್ಯುಮ್ನ ಕುಮಾರ್ ತನ್ನ ಹೆಂಡತಿ ಮಕ್ಕಳೊಂದಿಗೆ ಅಪರೂಪಕ್ಕೊಮ್ಮೆ ಹಳ್ಳಿಗೆ ಬಂದಾಗ ಸಂತೋಷದಿಂದ ಬರಮಾಡಿಕೊಳ್ತಾರೆ..! ಪ್ರದ್ಯುಮ್ನ ಕುಮಾರ್ರವರ ಚಿತ್ರಗಳು ವಿಶ್ವದ ನಾನಾ ಭಾಗಗಳಲ್ಲಿ ಪ್ರದರ್ಶನಗೊಳ್ಳುವುದರ ಮೂಲಕ ಅವರಿಗೆ ಮನ್ನಣೆ ತಂದುಕೊಟ್ಟಿದೆ..! ಜನವರಿ 4, 2012ರಲ್ಲಿ ಉತ್ಕಲ್ ಯೂನಿವರ್ಸಿಟಿ ಆಫ್ ಕಲ್ಚರ್( ಯುಯುಸಿ) ನೀಡಿರೋ ಗೌರವ ಡಾಕ್ಟರೇಟ್ ಸೇರಿದಂತೆ ಅನೇಕ ಪ್ರಶಸ್ತಿ, ಗೌರವಗಳಿಗೆ ಪ್ರದ್ಯುಮ್ನ ಕುಮಾರ್ ಪಾತ್ರರಾಗಿದ್ದಾರೆ..!
ಇವರ ಸ್ಟೋರಿಯಲ್ಲಿ ಒಂದೊಳ್ಳೆ ಪ್ರೇಮಪಾಠ, ಪ್ರೇಮಕಥೆ ಕೂಡ ಇದೆ..! ಜೊತೆ ಜೊತೆಗೇನೇ ಕಷ್ಟಪಟ್ಟು ಮೇಲೆಬಂದ ವ್ಯಕ್ತಿಯ ಆದರ್ಶ ಬದುಕೂ ಇದೆ..! ಇವರ ಪ್ರೇಮಕಥೆಯನ್ನಾಧಿರಿಸಿ ಸಿನಿಮಾ ಮಾಡುವ ಯೋಚನೆಯನ್ನು ಹೆಸರಾಂತ ನಿರ್ದೇಶಕ, ನಿರ್ಮಾಪಕರಾಗಿರೋ ಸಂಜಯ್ ಲೀಲ್ ಬನ್ಸಾರಿ ಮಾಡಿದ್ದಾರೆ..!
- ಶಶಿಧರ ಡಿ ಎಸ್ ದೋಣಿಹಕ್ಲು
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಇಲ್ಲಿ ಉಳಿದುಕೊಳ್ಳೋಕೆ ಬೇಕಾಗಿದ್ದನ್ನೆಲ್ಲಾ ಸರ್ಕಾರವೇ ಕೊಟ್ಟು, ಸಂಬಳವನ್ನೂ ನೀಡುತ್ತೆ..!
ಭಾರತದ ಅಗ್ರ ಸೆಲೆಬ್ರಿಟಿ ಯಾರು ಗೊತ್ತಾ..? ಟಾಪ್ 10 ಪಟ್ಟಿಯಲ್ಲಿದ್ದಾಳೆ ನಮ್ಮ ಕನ್ನಡತಿ..!
ಈ ವ್ಯಕ್ತಿಗೆ ನಿದ್ದೆ ಮಾಡುವುದೇ ಮರೆತುಹೋಗಿದೆ..! 40 ವರ್ಷದಿಂದ ನಿದ್ದೆಯೇ ಮಾಡಿಲ್ವಂತೆ ಈ ಭೂಪ..!
ಸಲ್ಮಾನ್ ಖಾನ್ ನಿರಪರಾಧಿ..! ಹಾಗಾದರೆ ನಿಜವಾದ ಆಪರಾಧಿ ಯಾರು..?
ಇವರಿಗೆ 25 ವರ್ಷಗಳ ನಂತರ ಅಮ್ಮ ಸಿಕ್ಕಳು..! ಗೂಗಲ್ ಅರ್ಥ್ ಸಹಾಯದಿಂದ ತಾಯಿಯನ್ನು ಹುಡುಕಿದ ಮಗ..!
ಕೈ ಇಲ್ಲದ ಈ ಕ್ರಿಕೆಟಿರ್ ಗೂಗ್ಲೀ ಎಸೆಯುತ್ತಾನೆ..! ಸಿಕ್ಸರ್ ಸಿಡಿಸಿ ಮನೋರಂಜನೆ ಒದಗಿಸುತ್ತಾನೆ..!
ಬರೀ ಪೈರಸಿ ಸಿನಿಮಾಗಳನ್ನು ನೋಡ್ಕೊಂಡು ಕನ್ನಡ ಸಿನಿಮಾಗಳ ವಿರುದ್ಧವೇ ಮಾತಾಡಿದ್ರೆ ಹೇಗೆ ಸ್ವಾಮಿ..
ಇವರು ಎಂಬಿಬಿಎಸ್ ಸ್ಟೂಡೆಂಟ್, ಆಟೋ ಡ್ರೈವರ್..! ಇವರು ಉಚಿತ ಆಟೋ ಸೇವೆ ಕೊಡ್ತಾರೆ ಯಾಕೆ ಗೊತ್ತಾ..?