ದರ್ಶನ್‌ʼ‌ಗೆ ನಾನೊಬ್ಬಳೇ ಪತ್ನಿ: ಕಮಿಷನರ್ ಬಿ.ದಯಾನಂದ್ʼಗೆ ಪತ್ರ

Date:

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಕೇಸ್‌ʼನಲ್ಲಿ ನಟ ದರ್ಶನ್‌ ಸಿಲುಕಿದ್ದು, A2 ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇನ್ನೂ ದರ್ಶನ್ ಗೆಳತಿ ಪವಿತ್ರಾ ಗೌಡ ಮೊದಲ ಆರೋಪಿಯಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ. ದರ್ಶನ್ ಅವರನ್ನ ಜೈಲಿನಿಂದ ಹೊರಗೆ ಕರೆತರಲು ಪತ್ನಿ ವಿಜಯಲಕ್ಷ್ಮೀ ಹರಸಾಹಸ ಪಡುತ್ತಿದ್ದಾರೆ. ಹೀಗಿರುವಾಗಲೇ, ‘’ನಾನು ದರ್ಶನ್‌ ಅವರ ಏಕೈಕ ಪತ್ನಿ’’ ಎಂದು ಪೊಲೀಸ್ ಕಮಿಷನರ್‌ ದಯಾನಂದ್ ಅವರಿಗೆ ವಿಜಯಲಕ್ಷ್ಮೀ ದರ್ಶನ್ ಪತ್ರ ಬರೆದಿದ್ದಾರೆ.

ಹೌದು, ಪವಿತ್ರಾ ಗೌಡ ದರ್ಶನ್‌ ಅವರ ಪತ್ನಿ ಅಲ್ಲ ಎಂದು ನಗರ ಪೊಲೀಸ್‌ ಆಯುಕ್ತರಿಗೆ ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಪತ್ರ ಬರೆದು ಸ್ಪಷ್ಟನೆ ನೀಡಿದ್ದಾರೆ. 2003ರಲ್ಲಿ ದರ್ಶನ್ ಮತ್ತು ನಾನು ಮದುವೆ ಆಗಿದ್ದೀವಿ. ಆ ವರ್ಷದ ಮೇ 19 ರಂದು ದರ್ಶನ್ ಅವರ ಧರ್ಮಪತ್ನಿಯಾಗಿದ್ದೀನಿ. ನಮ್ಮಿಬ್ಬರಿಗೆ ಒಬ್ಬ ಮಗ ಇದ್ದಾನೆ. ಪವಿತ್ರಗೌಡ, ಸಂಜಯ್ ಸಿಂಗ್ ಎಂಬವರನ್ನು ಮದುವೆ ಆಗಿದ್ದಾರೆ. ಅವರಿಬ್ಬರಿಗೂ ಒಬ್ಬಳು ಹೆಣ್ಣು ಮಗಳಿದ್ದಾಳೆ ಎಂದು ವಿಜಯಲಕ್ಷ್ಮಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನೀವು ಮಾಧ್ಯಮಗೋಷ್ಠಿಯಲ್ಲಿ ದರ್ಶನ್ ಅವರ ಪತ್ನಿ ಪವಿತ್ರಗೌಡ ಅಂತಾ ಹೇಳಿದ್ದೀರಿ. ಗೃಹ ಸಚಿವರೂ ಕೂಡ ಒಮ್ಮೆ ಅದನ್ನೇ ಉಚ್ಛಾರಣೆ ಮಾಡಿದ್ದಾರೆ. ಹೀಗಾಗಿ ಪೊಲೀಸ್ ರೆಕಾರ್ಡ್ ಅಲ್ಲಿ ಪವಿತ್ರಗೌಡ ದರ್ಶನ್ ಅವರ ಪತ್ನಿ, ದರ್ಶನ್ ಅವರನ್ನು ಮದುವೆಯಾಗಿದ್ದಾರೆ ಎಂದು ಉಲ್ಲೇಖಿಸಬೇಡಿ. ದಾಖಲೆಗಳಲ್ಲಿ ದರ್ಶನ್ ಅವರ ಪತ್ನಿ ಎಂದು ಬರೆಯಬೇಡಿ ಎಂದು ಮನವಿ ಮಾಡಿದ್ದಾರೆ. ಈ ಪತ್ರ ನಗರ ಪೊಲೀಸ್‌ ಆಯುಕ್ತ ದಯಾನಂದ್‌ ಅವರ ಕಚೇರಿಗೆ ತಲುಪಿದೆ.

Share post:

Subscribe

spot_imgspot_img

Popular

More like this
Related

ಲಷ್ಕರ್-ಇ-ತೊಯ್ಬಾ ಸೇರಿಸಲು ಯತ್ನಿಸಿದ ಆರೋಪಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ

ಲಷ್ಕರ್-ಇ-ತೊಯ್ಬಾ ಸೇರಿಸಲು ಯತ್ನಿಸಿದ ಆರೋಪಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಉತ್ತರ...

ಹಳೆಯ ಬಟ್ಟೆಗಳಿಂದ ಮನೆ ಒರೆಸುವುದು ಅಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು?

ಹಳೆಯ ಬಟ್ಟೆಗಳಿಂದ ಮನೆ ಒರೆಸುವುದು ಅಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು? ಮನೆ ಸ್ವಚ್ಛತೆಗೆ...

ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ತೀವ್ರ ಚಳಿ: ಮಂಜು ಕವಿದ ವಾತಾವರಣ

ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ತೀವ್ರ ಚಳಿ: ಮಂಜು ಕವಿದ ವಾತಾವರಣ ಬೆಂಗಳೂರು: ರಾಜ್ಯದಲ್ಲಿ...

ಮದ್ದೂರು ನಗರಸಭೆ ವ್ಯಾಪ್ತಿಗೆ ಗ್ರಾಪಂಗಳ ಸೇರ್ಪಡೆ ಕೈ ಬಿಡುವಂತೆ ನಿಖಿಲ್ ಕುಮಾರಸ್ವಾಮಿ ಆಗ್ರಹ

ಮದ್ದೂರು ನಗರಸಭೆ ವ್ಯಾಪ್ತಿಗೆ ಗ್ರಾಪಂಗಳ ಸೇರ್ಪಡೆ ಕೈ ಬಿಡುವಂತೆ ನಿಖಿಲ್ ಕುಮಾರಸ್ವಾಮಿ...