ದಾದ್ರಿ ಹತ್ಯಾಕಾಂಡಕ್ಕೆ ರಾಜಕೀಯ ತಿರುವು..! ಯಾರನ್ನು ನಂಬೋದು ಹೇಳಿ..!?

Date:

2015 ರ ಸೆಪ್ಟೆಂಬರ್ 28ರಂದು ಉತ್ತರ ಪ್ರದೇಶದ ದಾದ್ರಿಯ ಬಿಶಾಹ್ರಾ ಗ್ರಾಮದಲ್ಲಿ ಗೋಮಾಂಸ ಶೇಖರಿಸಿಟ್ಟುಕೊಂಡಿದ್ದಾನೆ ಅಂತ ಮೊಹಮ್ಮದ್ ಅಖ್ಲಾಕ್ ಹಾಗೂ ಆತನ ಪುತ್ರ ದನಿಷ್‍ನನ್ನ ನಡುರಸ್ತೆಯಲ್ಲಿ ಕಿಡಿಗೇಡಿ ಗುಂಪೊಂದು ಹಲ್ಲೆ ನಡೆಸಿತ್ತು. ಪರಿಣಾಮ ಅಖ್ಲಾಕ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ದನಿಷ್ ಪ್ರಾಣಾಪಾಯದಿಂದ ಪಾರಾದ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಮುಖಂಡ ಸಂಜಯ್ ರಾಣಾ ಪುತ್ರ ಸೇರಿದಂತೆ 18 ಮಂದಿಯನ್ನ ಬಂಧಿಸಲಾಗಿತ್ತು. ಗೋಹತ್ಯೆ ನಿಷಿದ್ಧವಾಗಿರುವ ಉತ್ತರಪ್ರದೇಶದಲ್ಲಿ ಗೋಮಾಂಸ ಸೇವನೆಗೆ ಅವಕಾಶವಿದೆ. ಇಂಥಾ ಗೊಂದಲದ ನಿಯಮಗಳು ಕಿಡಿಗೇಡಿಗಳಿಗೆ ವರದಾನವಾಗಿದ್ದು ಕಟುವಾಸ್ತವ. ಕೊಲೆಯಾದ ಅಖ್ಲಾಕ್ ಕುಟುಂಬಕ್ಕೆ ನ್ಯಾಯ ಒದಗಿಸುವ ರಾಜಕೀಯದಾಟವನ್ನ ರಾಷ್ಟ್ರೀಯ ಪಕ್ಷಗಳು ಚಾಚೂತಪ್ಪದೆ ನಿಭಾಯಿಸಿದ್ದವು. ಅಂತೆಯೇ ಅಂದು ಅವರ ಮನೆಯಲ್ಲಿ ದೊರಕಿದ್ದು ಗೋಮಾಂಸವಾ ಎಂದು ನ್ಯಾಯಾಂಗ ತನಿಖೆಗೆ ಆದೇಶಿಸಿ ಕುಟುಂಬಕ್ಕೆ ನ್ಯಾಯ ಒದಗಿಸುವ ಚೆಂದದ ಕಥೆ ಕಟ್ಟಿದರು.

ಉತ್ತರ ಪ್ರದೇಶದ ನೊಯ್ಡಾದ ಪಶು ಇಲಾಖೆ ಪರಿಶೀಲಿಸಿ ಅಖ್ಲಾಕ್ ಮನೆಯಲ್ಲಿ ದೊರೆತದ್ದು ಮೇಕೆ ಮಾಂಸ ಎಂದು ದೃಢಪಡಿಸಿತ್ತು. ಆದ್ರೆ ಕಳೆದೆರೆಡು ದಿನಗಳ ಹಿಂದೆ ಮಥುರಾದ ಪಶುವೈದ್ಯ ಮತ್ತು ಪಶುಸಂಗೋಪನಾ ವಿಶ್ವವಿದ್ಯಾಲಯದ ನೀಡಿರುವ ವರದಿಯಲ್ಲಿ ಅಖ್ಲಾಕ್ ಮನೆಯಲ್ಲಿದ್ದದ್ದು ಗೋಮಾಂಸ ಎಂದಿದ್ದು ಪ್ರಕರಣದ ತನಿಖೆಗೆ ಮಹತ್ವದ ತಿರುವು ನೀಡಿದೆ. ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಯಾವ ವರದಿಯ£ನ್ನುಪರಿಗಣಿಸಬೇಕೆಂಬ ಗೊಂದಲದಲ್ಲಿದ್ದಾರೆ. ಆದರೆ ಪರೀಕ್ಷೆಗೊಳಪಡಿಸಿದ ಮಾಂಸದ ಮಾದರಿ ಒಂದೇ ಆಗಿದ್ದರಿಂದ ವರದಿ ಭಿನ್ನವಾಗಿ ಬರೋದಕ್ಕೆ ಕಾರಣವೇನೆಂಬ ಸಹಜ ಕುತೂಹಲ ಕಾಡದಿರದು. ತನಿಖಾ ಸಂಸ್ಥೆಗಳಿಗೆ ದೊರೆತ ವರದಿ ಒಂದಿಡೀ ಸಮುದಾಯದ ಒಳಿತಿಗೆ ಸೂಚಕವಾಗಬಹುದು. ಭವಿಷ್ಯದಲ್ಲಿ ಅನ್ಯಾಯವಾಗದಂತೆ ತಡೆಗಟ್ಟುವಲ್ಲಿ ಪ್ರಬಲ ಪುರಾವೆ ಆಗಬಹುದು. ಆದ್ರೆ ಯಾವ ವರಿದಿ ನಂಬಲರ್ಹ..?? ಈ ಪ್ರಶ್ನೆ ವರದಿಯನ್ನಿತ್ತ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುತ್ತಿದೆ. ದೋಷಪೂರಿತ ವರದಿಯನ್ನಿತ್ತ ಕಾರಣ ತಪ್ಪಿತಸ್ಥ ಸಂಸ್ಥೆ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುತ್ತಾ ಸರ್ಕಾರ..???

ಈಗ ಉತ್ತರ ಪ್ರದೇಶದಲ್ಲಿ ಚುನಾವಣಾ ತಯಾರಿಗಳು ಭರದಿಂದ ಸಾಗಿವೆ. ಆದಕಾರಣ ರಾಷ್ಟ್ರವನ್ನೇ ಬೆಚ್ಚಿಬೀಳಿಸಿದ ಅಖ್ಲಾಕ್ ಕೊಲೆ ಪ್ರಕರಣ ರಾಜಕೀಯ ಪ್ರೇರಿತ ತಿರುವು ಪಡೆದುಕೊಳ್ತಿರೋದ್ರಲ್ಲಿ ಅನುಮಾನವೇ ಬೇಡ. ವಿಪರ್ಯಾಸದ ಸಂಗತಿ ಎಂದರೆ ಸಾವಿಗೀಡಾದ ಅಖ್ಲಾಕ್ ಪುತ್ರ ಭಾರತೀಯ ವಾಯುಪಡೆಯಲ್ಲಿ ಯೋಧನಾಗಿ ಸೇವೆಸಲ್ಲಿಸುತ್ತಿದ್ದಾನೆ. ದೇಶರಕ್ಷಕನ ಕುಟುಂಬಕ್ಕೆ ಆಗುತ್ತಿರುವ ಅನ್ಯಾಯ ಅಂತ ಈ ಪ್ರಕರಣವನ್ನ ಪರಿಗಣಿಸಬಹುದಾ..?? ಆಳುವ ವರ್ಗದ ಅರಾಜಕತೆಗೆ ಕುಟುಂಬವೇ ನಲುಗಿರುವಾಗ ರಾಜಕೀಯ ಪ್ರೇರಿತ ತಿರುವುಗಳು ತನಿಖೆಯ ದಿಕ್ಕುತಪ್ಪಿಸುತ್ತಿರುವುದು ನೊಂದ ಕುಟುಂಬಕ್ಕೆ ನ್ಯಾಯ ದೊರೆಯುವ ಸಾಧ್ಯತೆಗಳು ಕ್ಷೀಣಿಸುತ್ತಿವೆ.

  •  ಅಭಿಷೇಕ್ ರಾಮಪ್ಪ

POPULAR  STORIES :

ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ..! ಇಪ್ಪತ್ನಾಲ್ಕು ಮಂದಿಯ ಆರೋಪ ಸಾಬೀತು..!

ಪೊಲೀಸರು ಮನುಷ್ಯರಲ್ವಾ..!? ಪ್ರತಿಯೊಬ್ಬರೂ ಓದಲೇಬೇಕಾದ ವರದಿ..!

ದುಬಾರಿ ದುನಿಯಾ ಮತ್ತು ಅಚ್ಛೇದಿನ್ ಎಂಬ ಸುಳ್ಳು..!

ಮತ್ತೆ ಹುಟ್ಟಿಬಂದರು ವಿಷ್ಣುವರ್ಧನ್..! ನಾಗರಹಾವು ಟೀಸರ್ ನೋಡಿದ್ರಾ..!?

ನಾಳೆಯಿಂದ ದುಬಾರಿಯಾಗಲಿದೆ ದುನಿಯಾ..! ನಮೋ.. ಹಗಲು ದರೋಡೆ ಶುರು..!

ಕೋಳಿ ತಿನ್ನಿ, ಗಾಡಿ ಓಡಿಸಿ..!? ಕೋಳಿಯಿಂದ ಡಿಸೇಲ್ ಉತ್ಪಾದಿಸಬಹುದು..!

ಟಿವಿಯಲ್ಲಿ ‘ಪಾರ್ವತಿ’ ಪಾತ್ರ ಮಾಡಿದ್ರೆ, ಬೀಚ್‌ ಪಾರ್ಟಿಗಳಲ್ಲಿ ಬಿಕಿನಿ ತೊಡಬಾರದಾ?

ಪಾಕ್ ಮಹಿಳೆಯರಿಗೆ ಕೊಹ್ಲಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ..! `ಲೈಕ್’ ಮಾಡಲು ಯಾವ ದೇಶವಾದ್ರೇನು..!?

ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...