ಇತ್ತೀಚೆಗೆ ಬೆಂಗಳೂರಿನ ನಾನಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಕೇಸುಗಳ ಆಧಾರದಲ್ಲಿ ಹೀಗೊಂದು ವರದಿಯನ್ನು ಬರೆಯಬೇಕಿದೆ. ಸಿಲಿಕಾನ್ ಸಿಟಿ, ಜಗತ್ತಿನಲ್ಲಿ ಹೆಗ್ಗಳಿಕೆಗೆ ಪಾತ್ರವಾಗುತ್ತಿರುವ ಬೆಂಗಳೂರಿನಲ್ಲಿ ವಿಕೃತಕಾಮಿಗಳು ಹೆಚ್ಚುತ್ತಿದ್ದಾರೆ ಎನ್ನಲಾಗುತ್ತಿದೆ. ಹೆಣ್ಣುಮಕ್ಕಳು ರೇಗಿಸಿ, ಅಶ್ಲೀಲವಾಗಿ ಸುರತಕ್ಕೆ ಕರೆಯುವುದರಿಂದ ಹಿಡಿದು, ಕೈ ಹಿಡಿದೆಳೆಯುವುದು, ಡ್ರೆಸ್ ಮೇಲೆ ಕೆಟ್ಟದಾಗಿ ಕಮೆಂಟ್ ಮಾಡುವುದು, ಒಬ್ಬಂಟಿಯಾಗಿ ಸಿಕ್ಕಾಗ ಅತ್ಯಾಚಾರಕ್ಕೆ ಯತ್ನಿಸುವುದು, ಪ್ರೀತಿ ಪ್ರೇಮದ ಹೆಸರಿನಲ್ಲಿ ಲೈಂಗಿಕವಾಗಿ ಬಳಸಿಕೊಂಡು ಕೈ ಬಿಡುವುದು, ಭರವಸೆಗಳನ್ನು, ಪದವಿಗಳ ಆಸೆಯನ್ನು ತೋರಿಸಿ ಕಾಮ ತಣಿಸಿಕೊಳ್ಳುವುದು, ಗುಂಪುಗೂಡಿಕೊಂಡು ಕಾಮತೃಷ್ಣೆಗೆ ಬಳಸಿಕೊಳ್ಳಲು ಹೊಂಚು ಹಾಕುವುದು- ಇತರೆ ಚಾಳಿಗಳು ಅಧಿಕವಾಗಿದೆ ಎನ್ನಲಾಗುತ್ತಿದೆ. ಇಲ್ಲಿ ಹೆಣ್ಣುಮಕ್ಕಳು ಮೈಯೆಲ್ಲಾ ಕಣ್ಣಾಗಬೇಕಿದೆ. ಏಕೆಂದರೇ ಎಲ್ಲಾ ಸಮಯದಲ್ಲೂ ಪೊಲೀಸರು ಕಾವಲು ಕಾಯುವುದಿಕ್ಕಾಗುವುದಿಲ್ಲ. ಇನ್ನು ಪೊಲೀಸರು ಮಾಡಬೇಕಾದ ಕೆಲಸವೇನೆಂದರೇ ಮಧ್ಯರಾತ್ರಿಯಾದರೂ ಮನೆ ಸೇರದೇ ರಸ್ತೆಗಳಲ್ಲಿ ಗುಂಪುಗೂಡುವ ಯುವಕರನ್ನು ಒದ್ದೋಡಿಸಬೇಕು. ಗಾಂಜಾ ಸೇದುತ್ತಾ ಸಢನ್ನ್ ಕ್ರೈಂಗಳಲ್ಲಿ ಇವರು ತೊಡಗಿಸಿಕೊಳ್ಳುತ್ತಾರೆ. ಅಂತಹ ಗುಂಪುಗಳು ಕಂಡೊಡನೇ ಸಾರ್ವಜನಿಕರು ಪೊಲೀಸರಿಗೆ ಮಾಹಿತಿಕೊಡಬೇಕು. ಇಲ್ಲವೆಂದರೇ ಇಂದಿನ ಅನಾಹುತಕ್ಕೆ ನಾಳೆ ಪಶ್ಚಾತಾಪಪಟ್ಟರೇ ಪ್ರಯೋಜನವಿಲ್ಲ. ಪೊಲೀಸರ ಜೊತೆ ಜನಸಾಮಾನ್ಯರು ಕೈ ಜೋಡಿಸಿದರೇ ಪಾತ್ರ ಕ್ರೈಂಗೆ ಕಡಿವಾಣ ಹಾಕಲು ಸಾಧ್ಯ..
POPULAR STORIES :
ಚೀನಾ-ಪಾಕ್ ಗೆ ಖಡಕ್ಕು ಸಂದೇಶ..! ನರೇಂದ್ರ ಮೋದಿ ಗೇಮ್ ಸ್ಟಾರ್ಟ್..!
ಹುಚ್ಚ ವೆಂಕಟ್ ಗೆ ಮಡಿಕೇರಿಯಲ್ಲಿ ಸಿಕ್ಕಳು ಹುಡುಗಿ..! `ಕೋಟಿ’ ಬೇಕಾದರೂ ಖರ್ಚಾಗಲಿ ಎಂದರಂತೆ..!?
ಐಶ್ ಮೇಲೆ ಅಭಿ ಗುರ್ರ್ ಅಂದಿದ್ದು ಇದಕ್ಕಾ… ?
ಆಕ್ರಮಣಶೀಲ ಆಟಗಾರ ಕೋಹ್ಲಿ `ಪೇಂಟಿಂಗ್’ ಮೂಲಕ ಎಲ್ಲರನ್ನೂ ನಗಿಸಬಲ್ಲ!
ಅಜರ್ ಯಾಕೆ ತನ್ನ ಕಾಲರ್ ನ ಮೇಲಕ್ಕೆತ್ತಿ ಆಟವಾಡ್ತಿದ್ರು ಗೊತ್ತಾ..?
2012 ಕಟ್ಟುಕಥೆ..! 2050 ಅಸಲಿ ಕಥೆ..! ನಡುಗಿಸುತ್ತದೆ ಈ ವರದಿ..!
ಹುಲಿದೈವ ಸ್ಪರ್ಶಿಸಿದ್ರೆ ಸಾವು ಖಚಿತ….!
400 ವರ್ಷಗಳ ಹಿಂದಿನ ಶವಗಳು ಕೊಳೆತಿಲ್ಲ..! ಈ ಗುಹೆ ಪ್ರವೇಶಿಸುವುದಕ್ಕೆ ಎಂಟೆದೆ ಬೇಕು..!?