ಭಾರತದಲ್ಲಿ ಒಂದಿಷ್ಟು ಮಂದಿ ತಲೆಯಲ್ಲಿ ಬಿಳಿ ಚರ್ಮವೇ ಸೌಂದರ್ಯ ಅನ್ನೋ ಭ್ರಮೆ ಇದೆ. ಅದಕ್ಕೆ ತಕ್ಕಂತೆ ನಾನಾ ಕಂಪನಿಗಳು ಸೌಂದರ್ಯವರ್ಧಕ ಉತ್ಪನ್ನಗಳು ಬಿಳಿ ಬಣ್ಣವೇ ಸೌಂದರ್ಯ ಎಂದು ಪ್ರಚಾರ ಮಾಡುತ್ತಾ, ಜಾಹಿರಾತುಗಳಲ್ಲಿ ಬಿಂಬಿಸುತ್ತಾ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಲಾಭಗಳಿಸುವಲ್ಲಿ ಯಶಸ್ವಿಯಾಗಿವೆ. ಆದರೆ, ಬುದ್ಧಿವಂತರು, ವೈಜ್ಞಾನನಿಕವಾಗಿ ಯೋಚಿಸುವವರು ದೇಹದ ಬಣ್ಣದಲ್ಲಿ ಸೌಂದರ್ಯ ಅಳೆದು ಹಾಳಾಗಿ ಹೋಗಲ್ಲ! ಕಾರಣ, ನಾವು ಬಿಳಿಂಯ ಬಣ್ಣದ ಕಾಂತಿಯುತ ತ್ವಚೆಗೆ ಬಳಸುವ ಕ್ರೀಮ್‍ಗಳು, ಪೌಡರ್‍ಗಳು, ಸೌಂದರ್ಯವರ್ಧಕಗಳು ಚರ್ಮದ ಕಾಯಿಲೆಯನ್ನು ತಂದೊಡ್ಡುತ್ತವೆ ಎನ್ನುವುದು ವೈಜ್ಞಾನಿಕವಾಗಿಯೇ ಸಾಭೀತಾಗಿರೋ ಸತ್ಯ! ಈ ಸತ್ಯ ಗೊತ್ತಿದ್ದರೂ ನಮ್ ಜನ ಮಾತ್ರ ಅಂತಹ ಉತ್ಪನ್ನಗಳನ್ನು ಬಳಸುವುದನ್ನು ಬಿಡಲ್ಲ! ಇಷ್ಟೆಲ್ಲಾ ಪೀಠಿಕೆ ಹಾಕೋಕೆ ಕಾರಣ ಆಫ್ರೀಕಾದ ಘಾನ ದೇಶ!
ಹೌದು, ಘಾನಾ ದೇಶ ಚರ್ಮವನ್ನು ಬಿಳಿಗಟ್ಟುವ (ಸ್ಕಿನ್ ಬ್ಲೀಚಿಂಗ್) ವಿಶ್ವದ ಎಲ್ಲಾ ಪ್ರೊಡೆಕ್ಟ್ ಗಳನ್ನು ತನ್ನದೇಶದಲ್ಲಿ ಆಗಸ್ಟ್ ನಿಂದ ಬ್ಯಾನ್‍ಮಾಡಲಿದೆ! ಹೈಡ್ರೋಕ್ಯೈನನ್ ಕಂಟೈನ್ ಇರುವ ಪ್ರತಿಯೊಂದು ಉತ್ಪನ್ನಗಳನ್ನು ಬ್ಯಾನ್ ಮಾಡಲು ಮುಂದಾಗಿ ಒಂದು ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿದೆ ಘಾನಾ ದೇಶ! ಇದರಿಂದ ಮಾರುಟಕಟ್ಟೆ ಸ್ಥಿತಿ-ಗತಿಗಳ ಮೇಲೆ ನೇತ್ಯಾತ್ಮಕ ಪರಿಣಾಮ ಬೀರುತ್ತದೆಯಾದರೂ ಇದಕ್ಕೆ ತಲೆಕೆಡಿಸಿಕೊಳ್ಳದೇ ದೇಶದ ಜನರ ಆರೋಗ್ಯ ದೃಷ್ಟಿಯಿಂದ ಘಾನಾ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.
ಹೈಡ್ರೋಕ್ಯೈನನ್ ಫೇರ್‍ನೆಸ್ ಪ್ರಾಡೆಕ್ಟ್‍ಗಳ ತಯಾರಿಕೆಯಲ್ಲಿ ಬಳಸುವ ಒಂದು ಮಿಶ್ರಣ. ಇದು ಕ್ಯಾನ್ಸರ್‍ಗೆ ಕಾರಣವಾಗುತ್ತೆ ಎಂದು ತಿಳಿದು ಬಂದಿದೆ. ಅಮೇರಿಕಾರದಲ್ಲಿ ಎಫ್‍ಡಿಎ (ಫುಡ್ ಡ್ರಗ್ ಅಡ್ಮಿನಿಸ್ಟ್ರೇಷನ್) ವರದಿಯಲ್ಲಿ ಹೈಡ್ರೋಕ್ಯೈನನ್‍ನಲ್ಲಿ ಕ್ಯಾನ್ಸರ್ ಗುಣಗಳಿತ್ತು ಎಂದು ಹೇಳಿದ ಬಳಿಕ ಅಮೇರಿಕಾ ಈ ಉತ್ಪನ್ನಗಳನ್ನು 2006ರಲ್ಲೇ ನಿಷೇಧಿಸಿದೆ. ಅಮೇರಿಕಾ ಅಷ್ಟೇ ಲ್ಲದೇ ಜಪಾನ್, ಆಸ್ಟ್ರೇಲಿಯಾ, ಐರೋಪ್ಯರಾಷ್ಟ್ರಗಳಲ್ಲಿ ಹೈಡ್ರೋಕ್ಯೈನನ್ ಅಂಶವಿರುವ ಎಲ್ಲಾ ಕಾಸ್ಮೆಟಿಕ್ ವಸ್ತುಗಳ ಬಳಕೆಯನ್ನು ನಿಷೇಧಿಸಲಾಗಿದೆ.
ವರದಿಯೊಂದರ ಪ್ರಕಾರ ಘಾನಾದಲ್ಲಿ ಶೇ30ರಷ್ಟು ಮಹಿಳೆಯರು ಈ ಫೇರ್‍ನೆಸ್ ಉತ್ಪನ್ನಗಳನ್ನು ಬಳಸುತ್ತಿದ್ದಾರಂತೆ. ಇದಕ್ಕಿಂತ ಹೆಚ್ಚಾಗಿ ನೈಜಿರಿಯಾದಲ್ಲಿ ಶೇ77, ಸೆನೆಗಲ್‍ನಲ್ಲಿ 52-67 ಶೇಕಡದಷ್ಟು ಫೇರ್‍ನೆಸ್ ಉತ್ಪನ್ನಗಳನ್ನು ಬಳಸುತ್ತಿದ್ದಾರಂತೆ! ಘಾನಾದ ಎಫ್‍ಡಿಎ ವಕ್ತಾರ ಜೇಮ್ಸ್ ಲಾರ್ಟೇ ಇದೇ ಆಗಸ್ಟ್‍ನಿಂದ ಆ ಉತ್ಪನ್ನಗಳನ್ನು ನಿಷೇಧಿಸುವುದಾಗಿ ತಿಳಿಸಿದ್ದಾರೆ.
ಆಫ್ರೀಕಾದ ದೇಶಗಳ ಜನರ ಕತೆ ಬಿಡಿ, ಭಾರತದಲ್ಲಿ ಬಹಳಷ್ಟು ಜನ ಫೇರ್‍ನೆಸ್ ಪ್ರಾಡೆಕ್ಟ್‍ಗಳನ್ನು ಬಳಕೆ ಮಾಡ್ತಾ ಇದ್ದಾರೆ, ನಮ್ ದೇಶದಲ್ಲಿ ಯಾವಾಗ ನಿಷೇಧ ಮಾಡ್ತಾರೋ? ಬಿಳಿ ಬಣ್ಣವೇ ಸೌಂದರ್ಯವಲ್ಲ, ಆ ಸೌಂದರ್ಯಕ್ಕಿಂತ ಆರೋಗ್ಯ ಮುಖ್ಯ ಎಂದು ಜನ ತಿಳಿದರೆ ಈ ಉತ್ಪನ್ನಗಳು ತನ್ನಿಂದ ತಾನೇ ನಿಂತು ಹೋಗುತ್ತವೆ. ಯಾವ ಸರಕಾರಗಳು ಬ್ಯಾನ್ ಮಾಡಬೇಕಿಲ್ಲ. ಇದು ಭಾರತದಲ್ಲಿ ಸಾಧ್ಯನಾ?
- ರಘು ಭಟ್
POPULAR STORIES :
ಪೆಟ್ರೋಲ್ ಬಂಕ್‍ನಲ್ಲಿ ಯಾವೆಲ್ಲಾ ಸೇವೆ, ಸೌಲಭ್ಯ ಉಚಿತವಾಗಿರಬೇಕು ಗೊತ್ತಾ?
ರಾಜೀನಾಮೆ ನಂತರ ಮೊದಲಬಾರಿಗೆ ಮೀಡಿಯಾ ಮುಂದೆ ಅನುಪಮಾ ಏನ್ ಹೇಳಿದ್ರು ಗೊತ್ತಾ?!
ಹೇರ್ ಟ್ರಾನ್ಸ್‍ಪ್ಲಾಂಟ್ ಮಾಡಿಸ್ಕೋತೀರಾ..!? ಸಾವು ಗ್ಯಾರಂಟಿ..!! ಹುಷಾರ್..!!?
ದೆಹಲಿಗೆ ಬಾಂಬಿಡ್ತಾನಂತೆ ದಾವೂದ್..! ನರರಾಕ್ಷಸನನ್ನು ಹಿಡಿಯೋ ತಾಕತ್ತಿಲ್ಲವೇ..!?
`ಭಾರತದಿಂದ ಮುಸ್ಲೀಮರನ್ನು ಓಡಿಸಬೇಕು..!?’ ಸಾದ್ವಿ ಪ್ರಾಚಿಯಿಂದ ಮತ್ತೊಂದು ವಿವಾದಾತ್ಮಕ ಹೇಳಿಕೆ #Video