ಚಾಲೆಂಜಿಗ್ ಸ್ಟಾರ್ ದರ್ಶನ್ ಅವರ ಮನೆಗೆ ಸ್ಟಾರ್ ನಟರು ಭೇಟಿ ನೀಡುತ್ತಿದ್ದಾರೆ. ದರ್ಶನ್ ಈಗಷ್ಟೇ ಕುರುಕ್ಷೇತ್ರ ಚಿತ್ರದ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ಬಂದಿದ್ದಾರೆ. ತಮ್ಮ ಮನೆಯ ಹೊಸ ಅತಿಥಿ ಲ್ಯಾಂಬೋರ್ಗಿನಿ ಹತ್ತಿ ಸುತ್ತುತ್ತಿದ್ದಾರೆ. ಹೀಗಿರುವಾಗ ಸ್ಟಾರ್ ನಟರು ಒಬ್ಬರ ಹಿಂದೆ ಒಬ್ಬರಂತೆ ದರ್ಶನ್ ಮನೆಗೆ ಭೇಟಿ ನೀಡ್ತಿದ್ದಾರೆ…! ಲ್ಯಾಂಬೋರ್ಗಿನಿ ಕಾರು ನೋಡಿ ಖುಷಿ ಪಡ್ತಿದ್ದಾರೆ.
`ಕುರುಕ್ಷೇತ್ರ’ ಸಿನಿಮಾದಲ್ಲಿ ದರ್ಶನ್ ಜೊತೆ ನಟಿಸಿದ ಮೇಲೆ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಹೆಚ್ಚಾಗಿ ದರ್ಶನ್ ಜೊತೆ ಕಾಣಿಸಿಕೊಳ್ತಿದ್ದಾರೆ. ಲ್ಯಾಂಬರ್ಗಿನಿ ನೋಡಲು ಅವರೂ ಸಹ ಭೇಟಿ ನೀಡಿದ್ದರು. ಅಲ್ಲದೆ ಅರ್ಜುನ್ ಸರ್ಜಾ ಅವರ ಜೊತೆ ಚಿರಂಜೀವಿ
ಸರ್ಜಾ, ಪ್ರಜ್ವಲ್ ದೇವರಾಜ್ ಕೂಡ ಭೇಟಿ ನೀಡಿ ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ಪಟ್ಟಿದ್ದಾರೆ. ನಿರ್ಮಾಪಕ ಎಂ.ಜಿ ರಾಮಮೂರ್ತಿ, ನಿರ್ದೇಶಕ ತರುಣ್ ಸುಧೀರ್, ನಟ ಯಶಸ್ ಸೂರ್ಯ ( ಕುರುಕ್ಷೇತ್ರದಲ್ಲಿಯೂ ಅಭಿನಯಿಸಿದ್ದಾರೆ) ಮತ್ತಿತರರು ಭೇಟಿ ನೀಡಿದ್ದಾರೆ.