ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುಮೊಟೋ ಕೇಸ್ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣ ಗಳಿಗೆಗೆ ಒಂದು ತಿರುವು ಪಡೆಯುತ್ತಿದೆ.
ಒಡೆಯ ಸಿನಿಮಾದ ಚಿತ್ರೀಕರಣ ಮುಗಿಸಿ ದರ್ಶನ್ ಬೆಂಗಳೂರಿಗೆ ಬರುತ್ತಿರುವಾಗ ಹಿನಕಲ್ ಹತ್ತಿರ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ದರ್ಶನ್ ಕೈ ಮುರಿದಿದೆ.ಜೊತೆಗಿದ್ದ ನಟ ದೇವರಾಜ್ ,ಪ್ರಜ್ವಲ್ ದೇವರಾಜ್ ಅವರಿಗೂ ಗಾಯಗಳಾಗಿವೆ. ದರ್ಶನ್ ಗೆ ಶಸ್ತ್ರ ಚಿಕಿತ್ಸೆ ನಡೆದಿದೆ.ಅವರಿಗೆ ಎರಡು ವಾರಗಳ ವಿಶ್ರಾಂತಿಯನ್ನು ವೈದ್ಯರು ಸೂಚಿಸಿದ್ದಾರೆ.
ಈ ನಡುವೆ ಖಾಸಗಿ ವಾಹಿನಿಯೊಂದ ಜೊತೆ ಮಾತಾಡಿದ ದರ್ಶನ್, ಆಸ್ಪತ್ರೆಗೆ ಯಾರೂ ಬರದಂತೆ , ತಾನೇ ನಾಳೆ ನಿಮ್ಮ ಮುಂದೆ ಬರುತ್ತೇನೆ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಜಿಟಿ ಜಿಟಿ ಮಳೆಯಲ್ಲಿ ವೇಗವಾಗಿ ಕಾರು ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಆದರೆ , ಕಾರನ್ನು ಮುಚ್ಚಿಹಾಕಿದ್ದು ಅನುಮಾನಗಳಿಗೆ ದಾರಿ ಮಾಡಿದೆ. ಸುಮೊಟೊ ಕೇಸ್ ದಾಖಲಿಸಿಕೊಂಡ ಮೈಸೂರು ವಿವಿ ಪುರಂ ಪೊಲೀಸರು ಕಾರು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ.