ಚಾಲೆಂಜಿಗ್ ಸ್ಟಾರ್ ವ್ಯಕ್ತಿತ್ವವೇ ಅಂತಹದ್ದು…! ಕರುಣಾಮಯಿ, ಸ್ನೇಹಜೀವಿ. ಅಭಿಮಾನಿಗಳು ತಮ್ಮನ್ನು ಎಷ್ಟು ಪ್ರೀತಿಸುತ್ತಾರೋ ಅದಕ್ಕಿಂತಲೂ ಹೆಚ್ಚಿನ ಪ್ರೀತಿಯನ್ನು ಚಾಲೆಂಜಿಂಗ್ ಸ್ಟಾರ್ ತಮ್ಮ ಅಭಿಮಾನಿಗಳಿಗೆ ನೀಡ್ತಾರೆ.
ಕ್ಯಾನ್ಸರ್ ನಿಂದ ಬಳಲುತ್ತಿರುವ ತಮ್ಮ ಅಪ್ಪಟ ಅಭಿಮಾನಿಗೆ ದರ್ಶನ್ ವೀಡಿಯೋ ಕಾಲ್ ಮಾಡಿ ಮಾತಾಡಿದ್ದಾರೆ. ಶಿವಮೊಗ್ಗದ ರೇವಂತ್ ಎಂಬುವವರು ದರ್ಶನ್ ಅವರ ಅಭಿಮಾನಿ. ದರ್ಶನ್ ಅಂದ್ರೆ ರೇವಂತ್ ಗೆ ತುಂಬಾನೇ ಇಷ್ಟ. ಇವರ ಎಲ್ಲಾ ಸಿನಿಮಾಗಳನ್ನು ರೇವಂತ್ ನೋಡಿದ್ದಾರೆ. ದರ್ಶನ ಅವರ ಪ್ರತಿ ಹುಟ್ಟುಹಬ್ಬಕ್ಕು ಬೆಂಗಳೂರಿಗೆ ಹೋಗಿ ದರ್ಶನ್ ಅವರಿಗೆ ಶುಭಕೋರುತ್ತಾರೆ.
ಕ್ಯಾನ್ಸರ್ ನಿಂದ ಬಳಲುತ್ತಿರುವ ರೇವಂತ್ ಅವರಿಗೆ ದರ್ಶನ್ ಅವರನ್ನು ಭೇಟಿ ಮಾಡಬೇಕೆಂದೆನಿಸಿದೆ. ದರ್ಶನ್ ಜೊತೆ ಮಾತಾಡಬೇಕಿಂದಿದ್ದ ರೇವಂತ್ ಅವರಿಗೆ ಸ್ವತಃ ದರ್ಶನ್ ವೀಡಿಯೋ ಕಾಲ್ ಮಾಡಿ ಮಾತಾಡಿದ್ದಾರೆ. ನಾನು ಬ್ಯುಸಿಯಾಗಿದ್ದು, ಆದಷ್ಟು ಬೇಗ ನಿಮ್ಮನ್ನು ಭೇಟಿ ಆಗುತ್ತೇನೆ ಎಂದು ದರ್ಶನ್ ಹೇಳಿದ್ದಾರೆ.