ಫೇಸ್‍ಬುಕ್, ಟ್ವೀಟರ್, ಇನ್ಸ್ಟ್ರಾಗ್ರಾಮ್, ವಾಟ್ಸಪ್‍ನಲ್ಲಿ ಮುಸ್ಲೀಂರು ಫೋಟೋ ಪ್ರಕಟಿಸುವಂತಿಲ್ಲ..! ಹೀಗಂತ ಉತ್ತರ ಪ್ರದೇಶದ ಇಸ್ಲಾಮಿಕ್ ಶಿಕ್ಷಣ ಸಂಸ್ಥೆ ದಾರುಲ್ ಉಲೂಮ್ ದೇವ ಬಂದ್ ಆದೇಶಿಸಿದೆ..!
ಸೋಶಿಯಲ್ ಮೀಡಿಯಾಗಳಲ್ಲಿ ಮುಸ್ಲೀಂ ಸಮುದಾಯದ ಮಹಿಳೆ, ಪುರುಷ ಹಾಗೂ ಅವರ ಕುಟುಂಬದ ಯಾವ್ದೇ ಸದಸ್ಯರ ಫೋಟೋಗಳನ್ನು ಪ್ರಕಟಿಸುವಂತಿಲ್ಲ ಎಂದು ಫತ್ವಾ ಹೊರಡಿಸಿದೆ ದಾರುಲ್ ಉಲೂಮ್ ದೇವ ಬಂದ್. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಪ್ರಕಟ ಮಾಡುವುದು ಇಸ್ಲಾಂ ಉಲ್ಲಂಘನೆ ಎಂದು ಫತ್ವಾದಲ್ಲಿ ತಿಳಿಸಲಾಗಿದೆ.