ಮಹದಾಯಿ ಯೋಜನೆ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕು ಎಂದು ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬಂದ್ ಬಿಸಿ ಬಹುತೇಕ ಎಲ್ಲಾ ಕಡೆಗಳಲ್ಲೂ ತಟ್ಟಿದೆ.
ದಾವಣಗೆರೆಯಲ್ಲೂ ಬಂದ್ ಬಹುತೇಕ ಯಶಸ್ವಿಯಾಗಿದ್ದು ಬಸ್ ಸಂಚಾರವಿಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ತಾವು ಹೋಗ ಬೇಕಾದಲ್ಲಿಗೆ ಹೋಗಲು ಬಸ್ ಇಲ್ಲದೆ ಜನ ತಲೆ ಮೇಲೆ ಕೈ ಹೊತ್ಕೊಂಡು ಕುಳಿತಿದ್ದಾರೆ. ಇತ್ತ ಬಸ್ ಸ್ಟಾಪ್ ನಲ್ಲಿ ಕುಳಿತು ಕೊಳ್ಳಲು ಕುಡಕ ಬಿಡುತ್ತಿಲ್ಲ.
ದಾವಣಗೆರೆ ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಎದುರು ಬಸ್ ಗಾಗಿ ಕಾಯುತ್ತಿರುವವರಿಗೆ ಕುಡುಕನೊಬ್ಬ ಸಿಕ್ಕಾಪಟ್ಟೆ ತೊಂದರೆ ಕೊಟ್ಟಿದ್ದಾನೆ…! ಜನರ ಬಳಿ ಹೋಗಿ ಟವೆಲ್ ಕಸಿದುಕೊಳ್ಳೋದು, ತಬ್ಬಿಕೊಳ್ಳೋದನ್ನು ಮಾಡಿದ್ದಾನೆ.
ನಿನ್ನೆ ರಾತ್ರಿ ಕಂಠಪೂರ್ತಿ ಕುಡಿದು ನಿಲ್ದಾಣದ ಬಳಿ ಮಲಗಿದ್ದ. ಪ್ರತಿಭಟನಕಾರರು ಎಬ್ಬಿಸಿದ ಮೇಲೆ ಈ ರೀತಿ ಹುಚ್ಚಾಟ ಆಡಿದ್ದಾನೆ.