ಇದು ಅವರ್ಣನೀಯ ಸಿನಿಮಾ, ಸೊಗಸಾದ ಪ್ರೇಮ ಚರಿತ್ರೆ. ಭಾರತೀಯ ಚಿತ್ರರಂಗದಲ್ಲಿ ಪ್ರೇಮ ಚರಿತ್ರೆಯನ್ನೇ ಸೃಷ್ಟಿಸಿದ್ದ ದಿಲ್ವಾಲೆ ದುಲ್ಹನಿಯ ಲೇ ಜಾಯೇಂಗೆ ಸಿನಿಮಾವನ್ನು ಅಷ್ಟು ಸುಲಭಕ್ಕೆ ಮರೆತ ಬಿಡಲು ಸಾಧ್ಯವಾ..? ಪ್ರೇಮ ತಂತಿಯನ್ನು ನಿರಂತರವನ್ನು ಮೀಟುತ್ತಿರುವ ಸಿನಿಮಾ ಅದು.
ಯಶ್ ರಾಜ್ ಫಿಲ್ಮ್ ಅವರ ಹೆಮ್ಮೆಯ ಕೊಡುಗೆ, ದಿವಂಗತ ಯಶ್ ಚೋಪ್ರಾ ನಿರ್ಮಾಣದ ಆದಿತ್ಯ ಚೋಪ್ರಾ ನಿರ್ದೇಶನದ ಈ ಚಿತ್ರದ ಕಥೆ ಬರೆದವರು ಜಾವೇದ್ ಸಿದ್ದೀಕಿ. ಈ ಚಿತ್ರದ ಪ್ರೇಮ ನಾವಿಕನಾಗಿ ಹೃದಯ ಮಿಡಿತವನ್ನು ತಲ್ಲಣಿಸಿದ್ದು ಬಾಲಿವುಡ್ ಬಾದ್ಷಾ ಶಾರೂಕ್ ಖಾನ್. ಅವರಿಗೆ ಸಾಥಿಯಾಗಿದ್ದು ಕಾಜೋಲ್. ಇಡೀ ಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದು ಅಮರೀಶ್ ಪುರಿ. ಅವರ ನಟನೆಗೆ ಅವರೇ ಸರಿಸಾಟಿ. ಹಾಗೆಯೇ ಇತೆರೆ ಪಾತ್ರಕ್ಕೆ ಸೂಕ್ತ ನ್ಯಾಯ ಒದಗಿಸಿದ್ದು ಫರೀದಾ ಜಲಾಲ್, ಅನುಪಮ್ ಖೇರ್. ಈ ಚಿತ್ರಕ್ಕೆ ಇಡೀ ತಂಡವೇ ತಮ್ಮ ಪ್ರತಿಭೆಯನ್ನು ಬಸಿದುಹಾಕಿದೆ. ಇಲ್ಲವೆಂದರೆ ಸುಖಾಸುಮ್ಮನೇ ಒಂದು ಸಿನಿಮಾ ಹತ್ತೊಂಬತ್ತು ವರ್ಷ ಓಡೋದಿಲ್ಲ. 1995 ಅಕ್ಟೋಬರ್ ಇಪ್ಪತ್ತನೇ ತಾರೀಕು ಬಿಡುಗಡೆಯಾದ ಡಿಡಿಎಲ್ಜೆ ಈಗ್ಗೆ ವರ್ಷದ ಹಿಂದೆ ತನ್ನ ಸುಧೀರ್ಘ ಪ್ರಯಾಣವನ್ನು ನಿಲ್ಲಿಸಿತ್ತು.
ನಿಜಕ್ಕೂ ಡಿಡಿಎಲ್ಜೆ ಚಿತ್ರದಲ್ಲಿ ಕಥೆಗೆ ತಕ್ಕಂತೆ ಸಂಗೀತದ ಮಾಧುರ್ಯವಿತ್ತು. ಈ ಚಿತ್ರದ ಪ್ರತಿಯೊಂದು ಕ್ಷೇತ್ರದಲ್ಲೂ ಅದ್ಭುತ ಪ್ರತಿಭೆಗಳ ಅನಾವರಣವಾಗಿದೆ. ಈ ಚಿತ್ರ ಚರಿತ್ರೆ ಸೃಷ್ಟಿಸೋದಕ್ಕೆ ಹೆಚ್ಚಿನ ಸಾಥ್ ನೀಡಿದ್ದು ಅದರ ಸಂಗೀತ. ಜತಿನ್ ಲಲಿತ್ ಸ್ವರ ಮಾಧುರ್ಯಕ್ಕೆ ಅವರೇ ಸಾಟಿ. 1995ರಲ್ಲಿ ಜಗತ್ತಿನಾದ್ಯಂತ ತೆರೆ ಕಂಡ ಡಿಡಿಎಲ್ಜೆ ರೀಲೀಸ್ ಆದ ಕೆಲವೇ ವಾರಕ್ಕೆ ಕೋಟಿಗಟ್ಟಳೇ ಆದಾಯಗಳಿಸಿತ್ತು. ಹಲವು ಕಡೆ ಶತದಿನೋತ್ಸವ ಆಚರಿಸಿದರೇ, ಕೆಲವು ಕಡೆ ವರ್ಷಗಳ ಕಾಲ ಥಿಯೇಟರ್ನಿಂದ ಕದಲಲಿಲ್ಲ.
ಎಷ್ಟೋ ಥಿಯೇಟರ್ಗಳಲ್ಲಿ ಕೆಲ ವರ್ಷಗಳನ್ನು ಪೂರೈಸಿದ ಡಿಡಿಎಲ್ಜೆ, ಮುಂಬೈನ ಮರಾಠ ಮಂದಿರ್ ಥಿಯೇಟರ್ನಲ್ಲಿ ಮಾತ್ರ ಕದಲುವ ಸೂಚನೆಯೇ ಇರಲಿಲ್ಲ. ಒಂದು, ಎರಡು, ಮೂರು, ನಾಲ್ಕು ಅಂತ ವರ್ಷಗಳ ಲೆಕ್ಕದಲ್ಲಿ ಕೌಂಟಿಂಗ್ ಮಾಡುತ್ತ ಚಿತ್ರರಂಗ ಬೆಕ್ಕಸ ಬೆರಗಾಗಿ ಕುಂತಿತ್ತು. ಅಷ್ಟರಲ್ಲಿ ಡಿಡಿಎಲ್ಜೆ ಪಡೆದುಕೊಂಡ ಅವಾರ್ಡ್ ಗಳು ರಾಶಿಗಳ ಲೆಕ್ಕದಲ್ಲಿತ್ತು.
ಆ ಕಾಲದಲ್ಲಿ ಡಿಡಿಎಲ್ಜೆ ಪಡೆದ ಅವಾರ್ಡ್ ಗಳ ದಾಖಲೆಯನ್ನು ಇವತ್ತಿಗೂ ಯಾವ ಸಿನಿಮಾವೂ ಬ್ರೇಕ್ ಮಾಡಲಾಗಿಲ್ಲ. ಅಷ್ಟೊಂದು ಅವಾರ್ಡ್ ಗಳನ್ನು ಅದು ತನ್ನ ಮುಡಿಗೇರಿಸಿಕೊಂಡಿತ್ತು. ಯಶ್ ಚೋಪ್ರಾ ಅವ್ರಿಗೆ ಬೆಸ್ಟ್ ಫಿಲ್ಮ್ ಅವಾರ್ಡ್ ಸಿಕ್ಕರೆ, ಆದಿತ್ಯಾ ಚೋಪ್ರಾನಿಗೆ ಬೆಸ್ಟ್ ಡೈರೆಕ್ಟರ್, ಬೆಸ್ಟ್ ಡೈಲಾಗ್, ಬೆಸ್ಟ್ ಸ್ಕ್ರೀನ್ ಪ್ಲೇ ಅವಾರ್ಡ್ ಸಿಕಿತ್ತು. ಹಾಗೆಯೇ ಶಾರೂಕ್ ಖಾನ್ ಬೆಸ್ಟ್ ಆಕ್ಟರ್, ಕಾಜೋಲ್ ಬೆಸ್ಟ್ ಆಕ್ಟ್ರೆಸ್, ಬೆಸ್ಟ್ ಸಪೋರ್ಟಿಂಗ್ ಕ್ಯಾರೆಕ್ಟರ್ ಫರೀದಾ ಜಲಾಲ್, ಬೆಸ್ಟ್ ಪರ್ಫಾರ್ ಮೆನ್ಸ್ ಅಮರೀಶ್ ಪುರಿ, ಬೆಸ್ಟ್ ಪ್ಲೇ ಬ್ಯಾಕ್ ಸಿಂಗರ್ ಆಗಿ ಉದಿತ್ ನಾರಾಯಣ್ ಅವಾರ್ಡ್ ಪಡೆದುಕೊಂಡಿದ್ದರು.
ನ್ಯಾಶನಲ್ ಅವಾಡರ್್, ಸ್ಟಾರ್ ಫಿಲ್ಮ್ ಅವಾರ್ಡ್ ಸೇರಿದಂತೆ ಹತ್ತಾರು ಅವಾರ್ಡ್ ಗಳು ಪಡೆದುಕೊಂಡರು. ಈ ಸಿನಿಮಾದಲ್ಲಿ ಶಾರೂಖ್ ತಂದೆಯಾಗಿ ನಟಿಸಿದ ಅನುಪಮ್ ಖೇರ್ ತಮ್ಮ ಕಾಮಿಡಿ ಪಾತ್ರದಿಂದ ನಕ್ಕು ನಲಿಸುತ್ತಾರೆ. ಕಾಜೋಲ್ ತಂದೆಯಾಗಿ ಮಹತ್ವದ ಪಾತ್ರವನ್ನು ನಿಭಾಯಿಸಿದ ಅಮರೀಶ್ ಪುರಿ ಪಾತ್ರವನ್ನು ಮರೆಯಲಿಕ್ಕೆ ಸಾಧ್ಯವಿಲ್ಲ. ಭರಪೂತರ್ಿ ಪಾತ್ರವದು. ಇನ್ನು ಚಿತ್ರದ ಪ್ರಮುಖ ನಾಡಿಮಿಡಿತ ಶಾರೂಕ್ – ಕಾಜೋಲ್ ಅಭಿನಯದ ಬಗ್ಗೆ ದೂಸ್ರಾ ಮಾತೇ ಇಲ್ಲ. ಆ ಪ್ರೇಮ ಹಕ್ಕಿಗಳ ಅದ್ಬುತ ಅಭಿನಯ ಯಾವತ್ತಿಗೂ ಮೆಲುಕು ಹಾಕುವಂಥದ್ದೆ.
ಮುಂಬೈನ ಮರಾಠ ಮಂದಿರ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದ ಡಿಡಿಎಲ್ಜೆ ಚಿತ್ರ ಕಳೆದ ವರ್ಷವಷ್ಟೇ ತನ್ನ ಪ್ರದರ್ಶನ ನಿಲ್ಲಿಸಿದೆ. ಬರೋಬ್ಬರಿ 1009 ವಾರಗಳ ಕಾಲ ಪ್ರದರ್ಶನ ಕಂಡ ಈ ಸಿನಿಮಾ ಕೊನೆಗೂ ತನ್ನ ಪ್ರೇಮ ಕಹಾನಿಯನ್ನ ನಿಲ್ಲಿಸಿದೆ. ಆರಂಭದ ಕೆಲ ವರ್ಷಗಳು ನಾಲ್ಕರಿಂದ ಐದು ಪ್ರದರ್ಶನ ಕಂಡ ಚಿತ್ರ ಅಮೇಲೆ ಒಂದೆರಡು ಶೋಗಳು ಮಾತ್ರ ಪ್ರದರ್ಶನಗೊಳ್ಳತೊಡಗಿತ್ತು. ಇತ್ತೀಚಿನ ವರ್ಷಗಳಲ್ಲಿ ರಾತ್ರಿಯ ಪ್ರದರ್ಶನಕ್ಕೆ ಮಾತ್ರ ಮೀಸಲಾಗಿತ್ತು. ಈಗ್ಗೆ ವರ್ಷದ ಹಿಂದೆ ಡಿಡಿಎಲ್ಜೆ ಸಿನಿಮಾ ಸಾವಿರ ವಾರ ಪೂರೈಸಿದ ಸಂಭ್ರಮವನ್ನು ಆಚರಿಸಿಕೊಂಡಿತ್ತು. ಆ ಸಮಾರಂಭದಲ್ಲಿ ಹೈಲೆಟ್ ಆಗಿದ್ದು ಅದೇ ಎವರ್ಗ್ರೀನ್ ಜೋಡಿ ಶಾರೂಕ್- ಕಾಜೋಲ್.
ಆದರೆ ಆ ಸಮಾರಂಭವನ್ನು ಸಾರ್ಥಕವಾಗಿ ಆಚರಿಸಲು ಯಶ್ ಚೋಪ್ರಾ ಇರಲಿಲ್ಲ. ಅವರ ಸಾವು ಆ ಕ್ಷಣ ಎಲ್ಲರನ್ನೂ ಕಾಡಿತ್ತು. ಕಡೆಗದು ಸಾವಿರದ ನಂತರ ಮತ್ತೆ ಒಂಬತ್ತು ವಾರಗಳು ತೆರೆಕಂಡು ಮುಕ್ತಾಯವಾಗಿದೆ. ಅದು ಕೂಡ ಸರಳ ಸಮಾರಂಭದ ಮೂಲಕ ಮುಗಿದಿದೆ. ಆದರೆ ಯಶ್ ರಾಜ್ ಫಿಲ್ಮ್ ಸಂಸ್ಥೆಗೆ ಇಪ್ಪತ್ತು ವರ್ಷ ಸಿನಿಮಾವನ್ನು ಓಡಿಸಬೇಕೆಂಬ ಆಸೆಯಿತ್ತು. ಆದರೆ ಚಿತ್ರಮಂದಿರದ ಮಾಲೀಕರು ಮಾತ್ರ ಅದಕ್ಕೊಪ್ಪಲಿಲ್ಲ. ಏಕೆಂದರೇ ಈಗ್ಗೆ ಒಂದೆರೆಡು ವರ್ಷದಿಂದ ಡಿಡಿಎಲ್ಜೆ ನಾಮಕಾವಸ್ತೆ ಪ್ರದರ್ಶನ ಕಾಣುತ್ತಿತ್ತು. ರಾತ್ರಿ 11.30ಕ್ಕೆ ಪ್ರದರ್ಶನ ಕಾಣುತ್ತಿದ್ದ ಚಿತ್ರವನ್ನು, ಸಿಬ್ಬಂದಿಯ ಕೊರತೆಯಿಂದ ಬೆಳಿಗ್ಗೆ 9.30ಕ್ಕೆ ಪ್ರದರ್ಶನ ಮಾಡಲಾಗಿತ್ತು. ಮರಾಟ ಚಿತ್ರಮಂದಿರದಲ್ಲಿ ಒಂದು ಪ್ರದರ್ಶನ ಡಿಡಿಎಲ್ಜೆ ಕಾಣುತ್ತಿದ್ದರೇ ಮಿಕ್ಕ ಸಮಯದಲ್ಲಿ ಬೇರೆ ಬೇರೆ ಸಿನಿಮಾ ಓಡುತ್ತಿತ್ತು. ಆದರೆ ಕಡೆಗೂ ಈ ಡಿಡಿಎಲ್ಜೆಯನ್ನು ಸಾಕಿಕೊಳ್ಳಲು ಚಿತ್ರಮಂದಿರದ ಮಾಲೀಕರಿಂದ ಆಗಲಿಲ್ಲ. ಸಿಬ್ಬಂದಿಗಳ ಕೊರತೆ ಹೇಳಿ ಯುಗಾಂತ್ಯದ ನಿರ್ಧಾರಕ್ಕೆ ಬಂದಿತ್ತು. ಅವರ ಸಮಸೈಗೆ ಯಶ್ ರಾಜ್ ಸಂಸ್ಥೆ ಸ್ಪಂದಿಸಿತ್ತು.
ಆದರೆ ಬರೋಬ್ಬರಿ ಹತ್ತೊಂಬತ್ತು ವರ್ಷಗಳ ಅದರ ದಾಖಲೆಯನ್ನು ಸರಿಗಟ್ಟಲು ಬೇರ್ಯಾವ ಚಿತ್ರದಿಂದಲೂ ಸಾಧ್ಯವಿಲ್ಲ ಎನ್ನಬಹುದು. ಅಮರ ಪ್ರೇಮಕಾವ್ಯ ಇತಿಹಾಸ ಆಗಿರೋದಂತೂ ನಿಜ. ಇದೇ ಶೇಡ್ ನಲ್ಲಿ ಕನಿಷ್ಠ ನೂರು ಚಿತ್ರಗಳಾದರೂ ಭಾರತೀಯ ಚಿತ್ರರಂಗದಲ್ಲಿ ಬಂದು ಹೋಗಿದೆ. ಇವೆಲ್ಲವಕ್ಕೂ ಡಿಡಿಎಲ್ಜೆ ಸ್ಪೂರ್ತಿ ಅನ್ನೋದು ಅಕ್ಷರಶಃ ನಿಜ.
- ರಾ ಚಿಂತನ್.
POPULAR STORIES :
`ಸೆಕ್ಸ್’ ಸೈಟುಗಳ ಹಾಟ್ ವಿಚಾರ..!? ಅಶ್ಲೀಲ ಎಂಎಂಎಸ್ ಹೇಗೆಲ್ಲಾ ಸೃಷ್ಟಿಯಾಗುತ್ತೆ ಗೊತ್ತಾ..!?
ಚಂದದ ನಟಿಯರೇಕೆ ಸೂಸೈಡ್ ಮಾಡ್ಕೋತಾರೆ..!?
`ಸಾಯುವ ಮನಸ್ಸೆ..! ನಿನ್ನ ಕಡೆ ನನಗಿದೆ ತಿರಸ್ಕಾರ..!!’
ಮಿಸ್ಡ್ ಕಾಲ್ ಗೆಳೆಯ..! ಅವನ ಸಾವಿನ ಜೊತೆ ಇವಳು ಒಂದಾದಳು..!?
ಪ್ರಭಾಕರ್ ಸಾವಿಗೆ ಕಾರಣವಾಗಿದ್ದು ಆ ವೈದ್ಯ..!? ಅಮ್ಮನ ಕೈ ತುತ್ತು ತಿನ್ನದೆ ಮಲಗುತ್ತಿರಲಿಲ್ಲ ಈ ಜೀವ..!
ಅಂಗವೈಕಲ್ಯ ಗೆದ್ದ ಮಹಾನ್ ಸಾಧಕ..! ಅವ್ನು ಆತ್ಮಹತ್ಯೆಗೂ ಯತ್ನಿಸಿದ್ದ..!!
ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’